ಬಿಎಸ್‌ಎನ್‌ಎಲ್ ತನ್ನ ಹೊಸ 'ಸರ್ವತ್ರ' ಯೋಜನೆಯ ಮೂಲಕ ಗ್ರಾಹಕರಿಗೆ ಮನೆಯಿಂದ ದೂರವಿದ್ದರೂ ಮನೆಯ ಫೈಬರ್ ಕನೆಕ್ಷನ್ ಬಳಸಿ ಇಂಟರ್ನೆಟ್ ಸೌಲಭ್ಯವನ್ನು ಒದಗಿಸಲಿದೆ. ಈ ಯೋಜನೆಯಿಂದ ಬಳಕೆದಾರರಿಗೆ ಹಣ ಉಳಿತಾಯವಾಗುತ್ತದೆ.

ನವದೆಹಲಿ: ಬಿಎಸ್ಎನ್ಎಲ್ ಹೊಸ ಸ್ಕೀಂ ಪರಿಚಯಿಸುವ ಮೂಲಕ ಖಾಸಗಿ ಕಂಪನಿಗಳಿಗೆ ಮತ್ತೊಮ್ಮೆ ಶಾಕ್ ನೀಡಿದೆ. ಈ ಯೋಜನೆಯಲ್ಲಿ ನೀಡುವ ಮನೆಯ ಫೈಬರ್ ಕನೆಕ್ಷನ್ ಮೂಲಕ ಹೈ-ಸ್ಪೀಡ್‌ ಇಂಟರ್‌ನೆಟ್ ಬಳಸಬಹುದಾಗಿದೆ. ಒಂದು ವೇಳೆ ಮನೆಯಿಂದ ದೂರವಿದ್ದರೂ ನಿಮಗೆ ಮನೆಯ ಫೈಬರ್ ಕನೆಕ್ಷನ್‌ನ ಸಹಾಯದಿಂದ ಇಂಟರ್‌ನೆಟ್ ಬಳಸಬಹುದಾಗಿದೆ. ಬಿಎಸ್‌ಎನ್ಎಲ್ ಈ ಯೋಜನೆಗೆ "ಸರ್ವತ್ರ" ಎಂದು ಹೆಸರಿಡಲಾಗಿದೆ. ಈ ಯೋಜನೆ ಟೆಲಿಕಾಂ ಇಂಡಸ್ಟ್ರಿಯಲ್ಲಿ ಹೊಸ ಕ್ರಾಂತಿಗೆ ಮುನ್ನಡಿ ಬರೆಯಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಸರ್ವತ್ರ ಯೋಜನೆಯ ಮೊದಲ ಟ್ರಯಲ್ ಮುಕ್ತಾಯಗೊಂಡಿದೆ. ಶೀಘ್ರದಲ್ಲಿಯೇ ಸರ್ವತ್ರ ಯೋಜನೆ ಕೇರಳ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ. 

ಈ ಸೇವೆಯನ್ನು ಪಡೆದುಕೊಳ್ಳಲು ನೋಂದಣಿ ಮಾಡಿಕೊಳ್ಳುವಂತೆ ಬಿಎಸ್‌ಎನ್ಎಲ್ ಸೂಚನೆ ನೀಡಿದ್ದು, ಯಾವುದೇ ಮಿತಿಯನ್ನು ಹೇರಿಲ್ಲ. ಈ ಯೋಜನೆಗೆ ನೋಂದಣಿ ಮಾಡಿಕೊಳ್ಳುವಂತೆ ಪ್ರಚಾರ ನಡೆಸಲಾಗುತ್ತಿದ್ದು, ಆಧುನಿಕ ತಂತ್ರಜ್ಞಾನದ ಸಂಪೂರ್ಣ ಲಾಭ ಪಡೆದುಕೊಳ್ಳುವಂತೆ ಸಲಹೆ ನೀಡಲಾಗುತ್ತಿದೆ.ಬಿಎಸ್‌ಎನ್‌ಎಲ್‌ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ರಾಬರ್ಟ್ ಜೆ, ರವಿ ಅವರು 'ಸರ್ವತ್ರ' ಯೋಜನೆಯನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ. ದೇಶದ ಎಲ್ಲಾ ಗ್ರಾಮಗಳಿಗೆ ಹೈ-ಸ್ಪೀಡ್ ಇಂಟರ್‌ನೆಟ್ ಸೌಲಭ್ಯ ಒದಗಿಸೋದು ಸರ್ವತ್ರ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯಿಂದ ಬಳಕೆದಾರರು ಮೊಬೈಲ್‌ ಡೇಟಾಗಾಗಿ ಖರ್ಚು ಮಾಡುವ ಹಣ ಉಳಿತಾಯವಾಗಲಿದೆ.

ಬಿಎಸ್‌ಎನ್‌ಎಲ್‌ 4G ಲಾಂಚ್ ಯಾವಾಗ? ಮೋದಿ ಸರ್ಕಾರದಿಂದ ಮಹತ್ವದ ಮಾಹಿತಿ

ಸರ್ವತ್ರ ಯೋಜನೆ ಬಿಎಸ್‌ಎನ್ಎಲ್ ಫೈಬರ್ ಟೂ ದಿ ಹೋಮ್ (FTTH) ತಂತ್ರಜ್ಞಾನದ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಈ ಯೋಜನೆಯಿಂದ ಮನೆ ಅಥವಾ ಆಫಿಸ್ ಅಥವಾ ಇನ್ಯಾವುದೇ ಪ್ರದೇಶದಲ್ಲಿದ್ದರೂ FTTH ಕನೆಕ್ಷನ್ ಮೂಲಕ ಮೂಲಕ ವೈಫೈ ಬಳಕೆ ಮಾಡಬಹುದು. ಮನೆಯ ಹೊರಗೆ ನೀವು ಬಿಎಸ್ಎನ್ಎಲ್ ನ ಎಫ್‌ಟಿಟಿಎಚ್ ಕನೆಕ್ಷನ್ ಮೂಲಕ ಸರ್ವತ್ರ ಯೋಜನೆಯಡಿ ಮೊಬೈಲ್‌ನಲ್ಲಿ ಇಂಟರ್‌ನೆಟ್ ಬಳಸಬಹುದು. ಸರ್ವತ್ರ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡ ಬಳಕೆದಾರರಿಗೆ ಮಾತ್ರ ಇದರ ಸಂಪೂರ್ಣ ಲಾಭ ಸಿಗಲಿದೆ.

ಒಂದು ಬಾರಿ ರಿಜಿಸ್ಟರ್ ಮಾಡಿಕೊಂಡ ನಂತರ ನಿಮ್ಮ FTTH ಕನೆಕ್ಷನ್ 'ಸರ್ವತ್ರ ಇನೆಬೆಲ್' ಆಗಲಿದೆ. ಇದರಿಂದ ಬೇರೆ ಸ್ಥಳದಲ್ಲಿದ್ರೂ ಮನೆ ವೈಫೈ ಮೂಲಕ ಇಂಟರ್‌ನೆಟ್ ಬಳಸಬಹುದಾಗಿದೆ. ಬೇರೆ ಸ್ಥಳದಲ್ಲಿ ಮನೆಯ ವೈಫೈ ಬಳಸುವಾಗ ಯೂಸರ್ ಐಟಿ ಮತ್ತು ಪಾಸ್‌ವರ್ಡ್ ಎಂಟ್ರಿ ಮಾಡಬೇಕಾಗುತ್ತದೆ. ಸರ್ವತ್ರ ಪೋರ್ಟಲ್ ವರ್ಚುವಲ್ ಟವರ್ ರೀತಿಯಲ್ಲಿ ಕೆಲಸ ಮಾಡುತ್ತದೆ. ಕನೆಕ್ಟಿವಿಟಿ ಸಂಪೂರ್ಣ ಸುರಕ್ಷಿತವಾಗಿರುತ್ತದೆ ಎಂದು ಬಿಎಸ್‌ಎನ್‌ಎಲ್ ಭರವಸೆ ನೀಡುತ್ತದೆ. ನಿಖರವಾದ ಸೇವೆಯನ್ನು ಖಚಿತಪಡಿಸಿಕೊಳ್ಳಲು 'ಒನ್ ನಾಕ್' ವ್ಯವಸ್ಥೆಯು 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ.

71,100 ಉದ್ಯೋಗ ನೀಡಲಿದ್ದಾರೆ ಗೌತಮ್ ಅದಾನಿ… ಇದು ಒಂದಲ್ಲ, ಎರಡಲ್ಲ ಬರೋಬ್ಬರಿ 4 ಲಕ್ಷ ಕೋಟಿಯ ಮಾಸ್ಟರ್ ಪ್ಲಾನ್