viral Wedding : ಸಿಂಗಾರಗೊಂಡ ಮದುವೆ ಹುಡುಗಿ ವರನ ನಿರೀಕ್ಷೆಯಲ್ಲಿದ್ಲು. ಆದ್ರೆ ಬಂದಿದ್ದು ಒಬ್ಬನಲ್ಲ, ಇಬ್ಬರು. ಇಬ್ಬರೂ ನಾನು ಮದುವೆ ಗಂಡು ಅಂದಾಗ ಆಕೆ ಮಾಡಿದ್ದೇನು? ಯಾರನ್ನು ಮದುವೆ ಆದ್ಲು? 

ಒಂದು ವಧು, ಇಬ್ಬರು ವರರು, ಸಂಭ್ರಮದಿಂದ ಕೂಡಿರಬೇಕಾಗಿದ್ದ ಮದುವೆ (Marriage) ಮನೆ ಗಲಾಟೆಯ ಗೂಡು. ಘಟನೆ ನಡೆದಿರೋದು ಉತ್ತರ ಪ್ರದೇಶದಲ್ಲಿ. ಮದುವೆಗೆ ವಧು ಸಿದ್ಧವಾಗಿದ್ದಳು. ವರನನ್ನು ವೆಲ್ ಕಂ ಮಾಡಲು ವಧು ಕಡೆಯವರು ಎಲ್ಲ ಸಿದ್ಧತೆ ಮಾಡ್ಕೊಂಡಿದ್ದರು. ಆದ್ರೆ ಬಂದಿದ್ದು ಒಂದಲ್ಲ ಎರಡು ದಿಬ್ಬಣ. ಇದ್ರಿಂದ ಮದುವೆ ಮನೆಯಲ್ಲಿ ಗಲಾಟೆ ಶುರುವಾಯ್ತು. ಕೊನೆಗೂ ಪೊಲೀಸ್ ಪ್ರವೇಶವಾಗಿ, ವಧು ಬಯಸಿದಂತೆ ಮದುವೆ ನಡೆಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಒಂದು ವಧು, ಎರಡು ವರ !

ಅಮ್ರೋಹ ಕೊತ್ವಾಲಿ ಪ್ರದೇಶದ ಕೈಲ್ಸಾ ಬೈಪಾಸ್ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಒಂದ್ಕಡೆ ಮೊರಾದಾಬಾದ್ ವರ ಬಂದ್ರೆ ಇನ್ನೊಂದು ಕಡೆ ಸಂಭಾಲ್ನ ವರ ಬಂದಿದ್ದಾನೆ. ಇಬ್ಬರೂ ನಾನು ಮದುವೆ ಆಗ್ತೇನೆ, ನಾನು ಮದುವೆ ಆಗ್ತೇನೆ ಅಂತ ಗಲಾಟೆ ಶುರು ಮಾಡಿದ್ದಾರೆ. ನಂತ್ರ ಸ್ಥಳಕ್ಕೆ ಬಂದ ಪೊಲೀಸರು, ಮಾತುಕತೆ ನಡೆದಿ, ಹುಡುಗಿ ಇಚ್ಛೆಯಂತೆ, ಆಕೆ ಒಪ್ಪಿದ ವರನ ಜೊತೆ ಮದುವೆ ಮಾಡಿಸಿದ್ದಾರೆ.

ವೈಷ್ಣವಿ ಗೌಡ ಪ್ರಗ್ನೆನ್ಸಿ ಫೋಟೋ ವೈರಲ್‌: ಸಿಡಿದೆದ್ದ ಸೀತಾರಾಮ ಧಾರಾವಾಹಿ ನಟಿ,

ಈ ಗಲಾಟೆಗೆ ಕಾರಣ ಏನು?

ಒಂದು ವಧು ಹಾಗೂ ಎರಡು ವರ ಬರಲು ಕಾರಣ ಹಿಂದೆ ನಿಂತಿದ್ದ ನಿಶ್ಚಿತಾರ್ಥ. ಮೊದಲು ಮೊರಾದಾಬಾದ್ ವರನ ಜೊತೆ ಮದುವೆ ನಿಶ್ಚಯವಾಗಿತ್ತು. ಇಬ್ಬರಿಗೂ ನಿಶ್ಚಿತಾರ್ಥ ನಡೆದಿತ್ತು. ಆದ್ರೆ ವರ ಹಾಗೂ ವಧು ಕಡೆಯವರ ಮಧ್ಯೆ ಗಲಾಟೆ ನಡೆದು ಮದುವೆ ನಿಂತಿತ್ತು. ವಧು ಕಡೆಯವರು, ಇನ್ನೊಂದು ವರನನ್ನು ಹುಡುಕಿ ಅದೇ ಮದುವೆ ದಿನಾಂಕದಂದು ಮದುವೆ ಮಾಡಿಸಲು ಮುಂದಾಗಿದ್ದಾರೆ. ಸಂಭಾಲ್ ನ ವರನ ಜೊತೆ ಮದುವೆ ನಡೆಯಬೇಕಿತ್ತು. ಆದ್ರೆ ಅಲ್ಲಿಗೆ ಮೊರಾದಾಬಾದ್ ವರ ಕೂಡ ಬಂದಿದ್ದೇ ಇಷ್ಟೊಂದು ಗೊಂದಲಕ್ಕೆ ಕಾರಣವಾಯ್ತು.

ಮೊರಾದಾಬಾದ್ ವರ ಕೂಡ ಮದುವೆಗೆ ಕಾರ್ಡ್ ಸಿದ್ಧಪಡಿಸಿದ್ದ. ಕಾರ್ಡ್ ಗಳನ್ನು ಸಂಬಂಧಿಕರಿಗೆ ವಿತರಿಸಿಯಾಗಿತ್ತು. ಆ ನಂತ್ರ ಮದುವೆ ಮುರಿದುಬಿದ್ದಿತ್ತು. ಮೊರಾದಾಬಾದ್ ವರ ಇದೇ ಕಾರಣಕ್ಕೆ ತನ್ನ ಹಕ್ಕು ಪ್ರತಿಪಾದಿಸಿದ್ದಾನೆ. ಮದುವೆ ಕಾರ್ಡ್ ಸಿದ್ಧವಾಗಿ, ಹಂಚಿಯಾಗಿದೆ, ನಾನು ಇದೇ ವಧುವನ್ನು ಮದುವೆಯಾಗ್ತೇನೆ ಎಂದಿದ್ದಾನೆ. ಇತ್ತ ಸಂಭಾಲ್ ವರ ಕೂಡ ತನ್ನ ವಾದವನ್ನು ಮಂಡಿಸಿದ್ದಾನೆ.

ಪತ್ನಿಯನ್ನ ಅಡುಗೆ ಮನೆಗೆ ಸೇರಿಸದಿದ್ದರೆ ಅದು 'ಮಾನಸಿಕ ಕ್ರೌರ್ಯ': ಪತಿ ವಿರುದ್ಧದ FIR ರದ್ದುಗೊಳಿಸಲು ಹೈಕೋರ್ಟ್ ನಿರಾಕರಣೆ

ಎರಡು ಮದುವೆ ಮೆರವಣಿಗೆಗಳು ಮತ್ತು ಇಬ್ಬರು ವರರು ಒಂದೇ ಸಮಯದಲ್ಲಿ ಆಗಮಿಸುತ್ತಿದ್ದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ವಧುವಿನ ಕಡೆಯವರು ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದರು. ಪೊಲೀಸರು ಸ್ಥಳಕ್ಕೆ ಆಗಮಿಸಿ, ತನಿಖೆ ನಡೆಸಿ, ಮೂರು ಕಡೆಯವರನ್ನು ಶಾಂತಗೊಳಿಸಿದರು. ಅಂತಿಮವಾಗಿ, ವಧುವಿನ ಆಯ್ಕೆ ಮತ್ತು ಒಪ್ಪಿಗೆಗೆ ಆದ್ಯತೆ ನೀಡಲಾಯಿತು. ಸಂಭಾಲ್ನ ವರನೊಂದಿಗೆ ವಿವಾಹ ವಿಧಿವಿಧಾನಗಳನ್ನು ಸರಳವಾಗಿ ನಡೆಸಲಾಯಿತು. ಮೊರಾದಾಬಾದ್ನ ವರ, ವಧು ಇಲ್ಲದೆ ತನ್ನ ಮದುವೆ ದಿಬ್ಬಣದೊಂದಿಗೆ ಖಾಲಿ ಕೈನಲ್ಲಿ ಹಿಂತಿರುಗಿದ್ದಾನೆ. ಈ ಬಗ್ಗೆ ಯಾವುದೇ ದೂರು ದಾಖಲಾಗ್ಲಿಲ್ಲ. ಮೂರು ಕಡೆಯವರು ರಾಜಿ ಮಾಡಿಕೊಂಡರು. ಪೊಲೀಸರ ಸಮ್ಮುಖದಲ್ಲಿ ಸಮಸ್ಯೆ ಬಗೆಹರಿದಿದೆ. ಸದ್ಯ ಈ ಮದುವೆ ಅಮ್ರೋಹಾದಾದ್ಯಂತ ಚರ್ಚೆಯ ವಿಷ್ಯವಾಗಿದೆ. ಜನರು ಸಿನಿಮಾದಂತೆ ಇದಕ್ಕೆ ಒಂದಿಷ್ಟು ಕಾಲುಬಾಲ ಸೇರಿಸಿ ಕಥೆ ಕಟ್ಟುತ್ತಿದ್ದಾರೆ.