ಅಮೆರಿಕದ ಸೂಪರ್‌ಮಾರ್ಕೆಟ್‌ನಲ್ಲಿ ಹಸಿ ಮೆಣಸಿನಕಾಯಿಯ ದುಬಾರಿ ಬೆಲೆ ನೋಡಿ ಭಾರತೀಯ ಮಹಿಳೆಯೊಬ್ಬರು ಬೆಚ್ಚಿಬಿದ್ದಿರುವ ವಿಡಿಯೋ ವೈರಲ್ ಆಗಿದೆ. ಭಾರತದಲ್ಲಿ ಕೆಜಿಗೆ 40 ರೂಪಾಯಿಗೆ ಸಿಗುವ ಮೆಣಸಿನಕಾಯಿಗೆ ಅಲ್ಲಿ ಸುಮಾರು 700 ರೂಪಾಯಿ ವ್ಯಯಿಸಬೇಕಿದೆ. ವೈರಲ್ ವಿಡಿಯೋ ಈ ಚರ್ಚೆಗೆ ಕಾರಣವಾಗಿದೆ.

ಇತ್ತೀಚೆಗೆ ಅಮೆರಿಕ ಪ್ರವಾಸ ಹೋಗಿದ್ದ ಹಿರಿಯ ದಂಪತಿ ಅಲ್ಲಿನ ದುಬಾರಿ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಭಾರತದಲ್ಲಿ ಇನ್ನೂರು ಮುನ್ನೂರು ರೂಪಾಯಿಗೆ ಸಿಗುವ ಮಾತ್ರೆಗಳಿಗೆ ಅಮೆರಿಕದಲ್ಲಿ ಸಾವಿರಾರು ರೂಪಾಯಿ ವ್ಯಯಿಸಬೇಕಾಯಿತು. ಇದು ಔಷಧ ವಿಚಾರಕ್ಕೆ ಮಾತ್ರವಲ್ಲ, ಅಮೆರಿಕದಲ್ಲಿ ಪ್ರತಿಯೊಂದು ದುಬಾರಿ ಎಂಬುದನ್ನ ಸಾರಲು ಮತ್ತೊಂದು ವಿಡಿಯೋ ವೈರಲ್ ಆಗಿದೆ. ಆದರೆ ಇ ವಿಡಿಯೋದಲ್ಲಿ ವ್ಯಕ್ತಿ ವ್ಯದ್ಯಕೀಯ ವೆಚ್ಚದ ಬಗ್ಗೆ ಹೇಳಿದ್ದಲ್ಲ ತರಕಾರಿ ಬೆಲೆಗಳ ಬಗ್ಗೆ.

ಇಲ್ಲಿನ ಬೆಲೆಗೆ ಅಮೆರಿಕದಲ್ಲಿ ಎರಡು ಮೆಣಸಿನಕಾಯಿನೂ ಬರೋಲ್ಲ;

ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಒಂದು ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಭಾರತೀಯ ಮೂಲದ ಮಹಿಳೆಯೊಬ್ಬರು ಅಮೆರಿಕದಲ್ಲಿ ತರಕಾರಿಗಳನ್ನು ಖರೀದಿಸಲು ಹೋಗುವಾಗ ಹಸಿರು ಮೆಣಸಿನಕಾಯಿಯ ಬೆಲೆಯನ್ನು ನೋಡಿ ಬೆಚ್ಚಿಬಿದ್ದಿದ್ದಾರೆ. ಅಮೆರಿಕದಲ್ಲಿ ಮೆಣಸಿನಕಾಯಿ ಬೆಲೆಯೂ ತುಂಬಾ ದುಬಾರಿಯಾಗಿದ್ದು, ಬೆಲೆ ಕೇಳಿ ಖರೀದಿಸುವವರು ಬೆಚ್ಚಿಬಿಳುತ್ತಿದ್ದಾರೆ ಏಕೆಂದರೆ, ಭಾರತದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಪ್ರತಿ ಕೆಜಿಗೆ 40 ರೂಪಾಯಿಗಳಲ್ಲಿ ಸಿಗುವ ಮೆಣಸಿನಕಾಯಿ ಬೆಲೆ ಅಮೆರಿಕದಲ್ಲಿ ಇಷ್ಟು ದುಡ್ಡಿಗೆ ಎರಡು ಮೆಣಸಿನಕಾಯಿನೂ ಸಿಗೋಲ್ಲ!

ವಿಡಿಯೋದಲ್ಲೇನಿದೆ?

ಈ ವಿಡಿಯೋದಲ್ಲಿ ಭಾರತೀಯ ಮಹಿಳೆಯೊಬ್ಬರು ತರಕಾರಿ ಖರೀದಿಸಲು ಅಮೆರಿಕದ ಸೂಪರ್ ಮಾರ್ಕೆಟ್ ಗೆ ಹೋಗ್ತಾಳೆ. ಅಲ್ಲಿ ಹಸಿ ಮೆಣಸಿನಕಾಯಿ ಪ್ಯಾಕೆಟ್ ಬೆಲೆ ನೋಡಿ ಬೆಚ್ಚಿಬಿಳ್ತಾಳೆ. ಈ ದೃಶ್ಯ ಅವರ ವಿಡಿಯೋದಲ್ಲಿ ಸೆರೆಯಾಗಿದೆ. ಅದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಮೆರಿಕದಲ್ಲಿ ತರಕಾರಿ ಖರೀದಿಸುವುದು ಚಿನ್ನ ಮತ್ತು ಬೆಳ್ಳಿ ಖರೀದಿಸಿದಂತ ಅನುಭವ ಆಗುತ್ತೆ ಅಂತಾ ವಿವರಿಸಿದ್ದಾರೆ. ಒಂದು ಕೆಜಿ ಅಲ್ಲ, 114 ಗ್ರಾಂ ಮೆಣಸಿನಕಾಯಿಗಳ ಬೆಲೆ ದುಬಾರಿ ಎಂದರೆ ಪ್ರತಿ ಕೆಜಿ ಹಸಿಮೆಣಸಿನಕಾಯಿಗೆ ಸುಮಾರು 700 ರೂಪಾಯಿ! ಅಷ್ಟು ದುಡ್ಡಿನಲ್ಲಿ ಬೆಂಗಳೂರಿನಲ್ಲಿ ವಾರದ ಸಂತೆ ಮಾಡಿಕೊಂಡು ಬರಬಹುದೇನೋ. ಕೇವಲ 15 ರಿಂದ 20 ಮೆಣಸಿನಕಾಯಿಗಳನ್ನು ಹೊಂದಿರುವ ಒಂದು ಬಾಕ್ಸ್ ಬೆಲೆ ಸುಮಾರು 400 ರೂಪಾಯಿ! ಇಷ್ಟು ಮೆಣಸಿನಕಾಯಿ ಬೆಂಗಳೂರಿನಲ್ಲಿ ಫ್ರೀ ಆಗಿ ಚೀಲದಲ್ಲಿ ಹಾಕ್ತಾರೆ ಕೊನೆಯಲ್ಲಿ. ಆದರೆ ಅಮೆರಿಕದಲ್ಲಿ, ಅವುಗಳಿಗೆ ಇಷ್ಟು ಹಣ ಖರ್ಚು ಮಾಡಬೇಕಾಗುತ್ತೆ.

View post on Instagram

ಮೇರಾ ಭಾರತ್ ಮಹಾನ್ ಎಂದ ನೆಟ್ಟಗ

ಈ ವಿಡಿಯೋದ ಬಗ್ಗೆ ಬಳಕೆದಾರರ ಕಾಮೆಂಟ್‌ಗಳು ಸಹ ವೈರಲ್ ಆಗುತ್ತಿವೆ. ಒಬ್ಬ ಬಳಕೆದಾರರು ಭಾರತದಲ್ಲಿ ಹಣದುಬ್ಬರ ಕಡಿಮೆಯಿಲ್ಲ ಎಂದು ಬರೆದಿದ್ದರೆ, ಇನ್ನೊಬ್ಬರು ಈಗ ಮೆಣಸಿನಕಾಯಿ ಬೆಳೆಯೋಕೆ ಅಮೆರಿಕಕ್ಕೆ ಹೋಗಬೇಕಾಗುತ್ತದೆ ಎಂದು ತಮಾಷೆಯಾಗಿ ಹೇಳಿದ್ದಾರೆ. ಉತ್ಪನ್ನದ ಬೆಲೆ ಆದಾಯವನ್ನು ಅವಲಂಬಿಸಿರುತ್ತದೆ, ಅಂದರೆ ಅಮೆರಿಕದಲ್ಲಿ ಸಂಬಳವೂ ಅದಕ್ಕೆ ತಕ್ಕಂತೆ ಹೆಚ್ಚಾಗಿದೆ ಎಂದು ಮತ್ತೊಬ್ಬರು ತಮಾಷೆಯಾಗಿ ಬರೆದಿದ್ದಾರೆ. ಇವೆಲ್ಲದರ ಹೊರತಾಗಿ'ಮೇರಾ ಭಾರತ್ ಮಹಾನ್' ಎಂದು ಬರೆಯುವ ಮೂಲಕ ದೇಶದ ಅಗ್ಗದ ವಸ್ತುಗಳ ಬಗ್ಗೆ ಹೆಮ್ಮೆ ಪಟ್ಟಿದ್ದಾರೆ. ಆದರೆ ಇನ್ನೊಬ್ಬ ಬಳಕೆದಾರರು ಭಾರತದಲ್ಲಿ ಮೆಣಸಿನಕಾಯಿ ಮಾತ್ರವಲ್ಲ ಕೊತ್ತಂಬರಿ ಸೊಪ್ಪು ಕೂಡ ಉಚಿತವಾಗಿ ಲಭ್ಯವಿದೆ ಎಂದು ಬರೆದಿದ್ದಾರೆ.