ಭಾರತೀಯ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಅವರ ಪತ್ನಿ ದೇವಿಶಾ ಶೆಟ್ಟಿ ಗರ್ಭಿಣಿ ಎಂಬ ವದಂತಿಗಳು ಹಬ್ಬಿವೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋದಲ್ಲಿ ಅವರ ಬೇಬಿ ಬಂಪ್ ಕಾಣಿಸಿದೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ದಂಪತಿಗಳಿಂದ ಯಾವುದೇ ಅಧಿಕೃತ ಸ್ಪಷ್ಟನೆ ಬಂದಿಲ್ಲ.

ಭಾರತೀಯ ಕ್ರಿಕೆಟ್ ತಂಡದ ನಾಯಕ ಸೂರ್ಯ ಕುಮಾರ್ ಯಾದವ್ ಅವರ ನೇತೃತ್ವದಲ್ಲಿ ಟೀಂ ಇಂಡಿಯಾ ಟಿ 20 ವಿಶ್ವಕಪ್ ಗೆದ್ದಿದೆ. ಇದರ ಜೊತೆಗೆ ಬೇರೆಯದೇ ವಿಚಾರಕ್ಕೆ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಅವರ ಹೆಸರು ಕ್ರಿಕೆಟ್ ಸಾಧನೆಯ ಕಾರಣದಿಂದಲ್ಲ, ಬದಲಾಗಿ ವೈಯಕ್ತಿಕ ಜೀವನದ ವಿಚಾರದಿಂದಾಗಿ. ಅವರ ಪತ್ನಿ ದೇವಿಶಾ ಶೆಟ್ಟಿಗೆ ಸಂಬಂಧಿಸಿದ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ, ದಂಪತಿಗಳು ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ದೇವಿಶಾ ಶೆಟ್ಟಿ ಪಂದ್ಯದ ನಂತರ ಲಿ ಬಣ್ಣದ ಮ್ಯಾಕ್ಸಿ ಉಡುಪಿನಲ್ಲಿ ನಡೆದು ಬರುತ್ತಿರುವುದು ಆ ವಿಡಿಯೋದಲ್ಲಿ ಕಾಣಿಸುತ್ತದೆ. ಈ ಫೋಟೋಗ್ರಾಫರ್‌ಗಳು ದೇವಿಶಾ ಅವರಿಗೆ ಅಭಿನಂದನೆ ಸಲ್ಲಿಸುತ್ತಿರುವುದು ಕೂಡ ಕೇಳಿಬರುತ್ತದೆ. ಇದೇ ಕಾರಣದಿಂದಾಗಿ ಅವರು ಗರ್ಭಿಣಿಯಾಗಿರಬಹುದು ಎಂಬ ಊಹಾಪೋಹಗಳು ನೆಟ್ಟಿಗರ ನಡುವೆ ವೇಗವಾಗಿ ಹರಡಿದೆ.

ಬೇಬಿ ಬಂಪ್‌ ನಲ್ಲಿ ಕಾಣಿಸಿದ ವಿಡಿಯೋ ವೈರಲ್

ವಿಡಿಯೋದಲ್ಲಿನ ದೃಶ್ಯಗಳಲ್ಲಿ ಬೇಬಿ ಬಂಪ್ ಕಾಣಿಸಿದ್ದು, ಎಚ್ಚರಿಕೆಯಿಂದ ನಡೆದು ಬರುತ್ತಿರುವುದನ್ನು ಗಮನಿಸಿ ಅವರು ಗರ್ಭಿಣಿಯಾಗಿರಬಹುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆರಂಭಿಸಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ದಂಪತಿಗಳಿಂದಲೂ ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟನೆ ಅಥವಾ ಪ್ರತಿಕ್ರಿಯೆ ಹೊರ ಬಿದ್ದಿಲ್ಲ.

ಇನ್ನು ಕೆಲವರು ಹೇಳುವಂತೆ, ಪ್ಯಾಪರಾಝಿಗಳಿಂದ ಬಂದ ಅಭಿನಂದನೆಗಳು ಭಾರತ ತಂಡದ ಗೆಲುವಿನ ಹಿನ್ನೆಲೆಯಲ್ಲಿ ಇರಬಹುದೆಂಬ ಸಾಧ್ಯತೆಯೂ ಇದೆ. ಅದಲ್ಲದೆ ದೇವಿಶಾ ನಿಧಾನವಾಗಿ ನಡೆದುಕೊಂಡಿರುವುದಕ್ಕೆ ಗರ್ಭಧಾರಣೆಯೇ ಕಾರಣ ಎಂಬುದನ್ನು ಖಚಿತಪಡಿಸಲು ಸಾಧ್ಯವಿಲ್ಲ. ಹಿಂದೆಯೂ ಇದೇ ರೀತಿಯ ವದಂತಿಗಳು ಹರಡಿದ್ದರೂ ಅವುಗಳಲ್ಲಿ ಅನೇಕವು ನಂತರ ಸುಳ್ಳು ಎಂದು ತೋರಿಬಂದಿರುವ ಉದಾಹರಣೆಗಳಿವೆ.

ಇದು ಮೊದಲ ಬಾರಿಯಲ್ಲ

ವಾಸ್ತವವಾಗಿ ದೇವಿಶಾ ಶೆಟ್ಟಿ ಗರ್ಭಧಾರಣೆ ಕುರಿತ ವದಂತಿಗಳು ಇದೇ ಮೊದಲ ಬಾರಿ ಕೇಳಿಬರುತ್ತಿರುವುದಲ್ಲ. 2022ರಲ್ಲಿ ಕೂಡ ದಂಪತಿಗಳಿಬ್ಬರು ಒಂದೇ ಸ್ಥಳದಲ್ಲಿ ಕಾಣಿಸಿಕೊಂಡಾಗ ಇದೇ ರೀತಿಯ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದ್ದವು. ಆದರೆ ಆ ಸಂದರ್ಭದಲ್ಲಿ ವದಂತಿಗಳಿಗೆ ಯಾವುದೇ ದೃಢೀಕರಣ ದೊರಕಿರಲಿಲ್ಲ. 2025ರಲ್ಲಿ ದೇವಿಶಾ ಶೆಟ್ಟಿ ಒಂದು ಸಂದರ್ಶನದಲ್ಲಿ ಮಕ್ಕಳ ಬಗ್ಗೆ ಮಾತನಾಡಿದ್ದಾಗ “ಅದಕ್ಕೆ ಸರಿಯಾದ ಸಮಯ ಬಂದಾಗ ನಾವು ಆ ಬಗ್ಗೆ ಯೋಚಿಸುತ್ತೇವೆ” ಎಂಬ ಹೇಳಿಕೆ ನೀಡಿದ್ದರು. ಆ ಹೇಳಿಕೆಯ ನಂತರವೂ ಅವರ ಕುಟುಂಬ ವಿಸ್ತರಣೆ ಬಗ್ಗೆ ಮತ್ತೆ ಚರ್ಚೆಗಳು ಹುಟ್ಟಿಕೊಂಡಿದ್ದವು.

ಇತ್ತೀಚೆಗೆ ಹರಡುತ್ತಿರುವ ಗರ್ಭಧಾರಣೆ ಸಂಬಂಧಿತ ಸುದ್ದಿಗಳ ಬಗ್ಗೆ ದಂಪತಿಗಳು ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಆದ್ದರಿಂದ ಈಗಿನ ಎಲ್ಲ ಚರ್ಚೆಗಳ ಬಗ್ಗೆ ಸ್ಪಷ್ಟತೆ ಇಲ್ಲ.ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಒಂದು ವಿಡಿಯೋ ಆಧಾರವಾಗಿ ಅನೇಕ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದರೂ, ದಂಪತಿಗಳಿಂದ ಅಧಿಕೃತ ಘೋಷಣೆ ಹೊರಬರುವವರೆಗೆ ಈ ವಿಚಾರಕ್ಕೆ ಸಂಬಂಧಿಸಿದ ಎಲ್ಲ ಸುದ್ದಿಗಳನ್ನು ಎಚ್ಚರಿಕೆಯಿಂದಲೇ ನೋಡುವುದು ಸೂಕ್ತ.