ಕೃಷ್ಣಾ ನದಿಗೆ ಹೆಂಡತಿಯೇ ಗಂಡನನ್ನು ತಳ್ಳಿದ ಪ್ರಕರಣದಲ್ಲಿ ಬಾಲ್ಯ ವಿವಾಹದ ಕರಾಳ ಕಥೆ ಬಯಲಾಗಿದೆ. ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿ ದೈಹಿಕ ಸಂಪರ್ಕ ಬೆಳೆಸಿದ್ದಕ್ಕಾಗಿ ಗಂಡ ಸೇರಿ 10 ಜನರ ವಿರುದ್ಧ ಕೇಸ್ ದಾಖಲಾಗಿದೆ.

ರಾಯಚೂರು (ಜು. 25): ಹೆಂಡತಿಯೇ ಗಂಡನನ್ನು ನದಿಗೆ ತಳ್ಳಿದ್ದಾಳೆ. ಆಕೆಯನ್ನು ಹಿಡಿದುಕೊಳ್ಳಿ ಎಂದು ಹೇಳುತ್ತಾ ನದಿಯ ನಡುಗಡ್ಡೆಯಿಂದ ಸ್ಥಳೀಯರ ನೆರವಿನಿಂದ ಜೀವ ಉಳಿಸಿಕೊಂಡು ಬಂದ ಗಂಡ ತಾತಪ್ಪ ಮಾಡಿದ ಕಿತಾಪತಿ ಅಷ್ಟಿಷ್ಟಲ್ಲ. ನದಿಗೆ ತಳ್ಳಿದ್ದಾಳೆ ಎಂಬ ಹೆಂಡತಿ ಅಪ್ರಾಪ್ತೆ ಆಗಿದ್ದು, ಆಕೆಯನ್ನು ಬಾಲ್ಯ ವಿವಾಹ ಮಾಡಿಕೊಂಡು, ದೈಹಿಕ ಸಂಪರ್ಕ ಬೆಳೆಸಿದ್ದಕ್ಕಾಗಿ ಗಂಡ ತಾತಪ್ಪ ಸೇರಿ ಒಟ್ಟು 10 ಜನರ ವಿರುದ್ಧ ಕೇಸ್ ದಾಖಲಾಗಿದೆ.

ರಾಯಚೂರು ಜಿಲ್ಲೆಯಲ್ಲಿ ಹರಿಯುವ ಕೃಷ್ಣಾನದಿಗೆ ಗುರ್ಜಾಪುರದ ನಿರ್ಮಿಸಲಾದ ಸೇತುವೆ ಮೇಲಿಂದ ಫೋಟೋ ತೆಗೆಯುವಾಗ ಹೆಂಡತಿ ತನ್ನನ್ನು ತಳ್ಳಿದ್ದಾಳೆ, ಸಹಾಯ ಮಾಡಿ ಎಂದು ಕೂಗಕೊಂಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಇದರ ಬೆನ್ನಲ್ಲಿಯೇ ಮಹಿಳಾ ಮತ್ತು ಕಲ್ಯಾಣ ಇಲಾಖೆ ಹಾಗೂ ಮಹಿಳಾ ಆಯೋಗವು ನದಿಗೆ ತಳ್ಳಿದ್ದಾರೆಂಬ ಬಾಲಕಿಯನ್ನು ಹುಡುಕಿಕೊಂಡು ಹೋದಾಗ ಆಕೆ ಇನ್ನೂ ಆಪ್ರಾಪ್ತೆ ಎಂಬ ಮಾಹಿತಿ ಲಭ್ಯವಾಗಿದೆ. ಆಕೆಯ ಮನೆಯವರು ಅಪ್ರಾಪ್ತೆಗೆ ಬಾಲ್ಯ ವಿವಾಹ ಮಾಡಿದ್ದಲ್ಲದೇ ಗಂಡ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಇದೀಗ ಮದುವೆ ಮಾಡಿದ ಮತ್ತು ದೈಹಿಕವಾಗಿ ಸಂಪರ್ಕ ಬೆಳೆಸಿದ ಗಂಡ ಸೇರಿ ಒಟ್ಟು 10 ಜನರ ವಿರುದ್ಧ ಕೇಸ್ ದಾಖಲಾಗಿದೆ.

ಫೋಟೋ ತೆಗೆಯುವಾಗ ಹೆಂಡತಿ ಗಂಡನನ್ನು ಕೃಷ್ಣ ನದಿಗೆ ತಳ್ಳಿದ ಪ್ರಕರಣದ ಕುರಿತು ಅಪ್ರಾಪ್ತ ಬಾಲಕಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಸಾಂತ್ವನ ಕೇಂದ್ರಕ್ಕೆ ರವಾನೆ ಮಾಡಲಾಗಿತ್ತು. ರಾಯಚೂರಿನ ಮಹಿಳಾ ಪೊಲೀಸರಿಂದ ಅಪ್ರಾಪ್ತ ಬಾಲಕಿಯನ್ನು ರಾಯಚೂರಿಗೆ ಕರೆಸಿಕೊಂಡು ವಿಚಾರಣೆ ‌ನಡೆಸಲಾಗಿತ್ತು. ಈ ವೇಳೆ ಪೊಲೀಸರು ಅಪ್ರಾಪ್ತ ಬಾಲಕಿಯಿಂದ ಮಾಹಿತಿ ಕಲೆ ಹಾಕಿದ್ದಾರೆ. ಬಾಲಕಿಯ ಮಾಹಿತಿ ಮೇರೆಗೆ ದೇವಸೂಗೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ರವಿಕುಮಾರ್ ಬಾಲ ವಿವಾಹ ನಿಷೇಧ ಕಾಯ್ದೆ ಅಡಿ ದೂರು ದಾಖಲು ಮಾಡಿದ್ದಾರೆ. ಆ ಬಳಿಕ ಮಹಿಳಾ ಪೊಲೀಸರಿಂದ ಪ್ರಕರಣದ ಅಸಲಿ ತನಿಖೆ ಆರಂಭಿಸಿದ್ದಾರೆ.

ಇನ್ನು ಪೊಲೀಸರ ತನಿಖೆ ವೇಳೆ ಬಾಲಕಿಯನ್ನು ಮದುವೆಯಾದ ಗಂಡ ಎ1 ಆರೋಪಿ ತಾತಪ್ಪ ಅಪ್ರಾಪ್ತೆ ಜೊತೆಗೆ ಲೈಂಗಿಕ ಸಂಪರ್ಕ ಮಾಡಿದ ಬಗ್ಗೆಯೂ ಸಂತ್ರಸ್ಥೆ ಹೇಳಿಕೆ ನೀಡಿದ್ದಾಳೆ. ಇನ್ನು ಬಾಲಕಿ ಅಪ್ರಾಪ್ತೆ ಅಂತ ಗೊತ್ತಿದ್ದರೂ ಎ-1 ಆರೋಪಿ ‌ತಾತಪ್ಪ ಮೊದಲ ರಾತ್ರಿಯ ಹೆಸರಿನಲ್ಲಿ ಲೈಂಗಿಕ ಸಂಪರ್ಕ ಮಾಡಿದ್ದಾನೆ. ಮದುವೆ ಮಾಡಿಕೊಂಡು ಕೆಲವೇ ದಿನಗಳಲ್ಲಿ 2 ಬಾರಿ ಲೈಂಗಿಕವಾಗಿ ಸಂಪರ್ಕ ಹೊಂದಿದ್ದಾನೆ ಎಂದು ಸಂತ್ರಸ್ತೆ ತಿಳಿಸಿದ್ದಾಳೆ. ಅಪ್ರಾಪ್ತೆ ಹೇಳಿಕೆ ಆಧರಿಸಿ ರಾಯಚೂರು ನಗರ ಮಹಿಳಾ ಠಾಣೆ ಪೊಲೀಸರು ಕಲಂ 6 ಮತ್ತು 17 ಪೋಕ್ಸೋ ಕಾಯ್ದೆ 2021 ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಈ ಪ್ರಕರಣದಲ್ಲಿ 10 ಮಂದಿಗೆ ಆರೋಪಿತರಾಗಿ ಪಟ್ಟಿ ಮಾಡಲಾಗಿದೆ.

ಆರೋಪಿಗಳ ಪಟ್ಟಿ ಹೀಗಿದೆ:

  • ಎ1: ತಾತಪ್ಪ
  • ಎ2: ತಾತಪ್ಪನ ತಾಯಿ ಗದ್ದೆಮ್ಮ
  • ಎ3: ಸಂತ್ರಸ್ತೆಯ ತಾಯಿ ಸುಮಂಗಲ
  • ಎ4: ಗೀತಾ
  • ಎ5: ಆಂಜನೇಯ
  • ಎ6: ಗದ್ದೆಪ್ಪ
  • ಎ7: ರೇಣುಕಾ
  • ಎ8: ಸದಾನಂದ
  • ಎ9: ಮಹಾದೇವಿ
  • ಎ10: ರಾಮನಗೌಡ
View post on Instagram