ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ನೋಡಿದ ನಂತರ ಜನರು ದುಃಖ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದೆಡೆ ಹುಡುಗಿ ತನ್ನ ಪ್ರೇಮಿಯನ್ನು ಉಳಿಸಿಕೊಳ್ಳಲು ಏಕೆ ಪ್ರಯತ್ನಿಸಲಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ.

ಪ್ರಕೃತಿಯ ಮಡಿಲಲ್ಲಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದು ಪ್ರತಿ ಜೋಡಿಯ ಕನಸಾಗಿರುತ್ತದೆ. ಆದರೆ ಕೆಲವೊಮ್ಮೆ ಈ ಕನಸು ಅಪಾಯಕಾರಿಯಾಗಿಯೂ ಟರ್ನ್ ಹೊಡೆಯುತ್ತದೆ. ಇತ್ತೀಚೆಗೆ ಅಂತಹ ಒಂದು ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದ್ದು, ಒರ್ವ ಯುವಕ ತನ್ನ ಗೆಳತಿಗೆ "ಮದುವೆಯಾಗುತ್ತೀಯಾ"? ಎಂದು ಪ್ರಪೋಸ್ ಮಾಡಲು ಜಲಪಾತದ ಮಧ್ಯಕ್ಕೆ ಹೋಗಿದ್ದಾನೆ. ಅದರ ವಿಡಿಯೋ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.

ಉಸಿರು ಚೆಲ್ಲಿದ ಯುವಕ
ಈ ವೈರಲ್ ವಿಡಿಯೋದಲ್ಲಿ, ಒಬ್ಬ ಯುವಕ ತನ್ನ ಗೆಳತಿಯ ಬಳಿ ಪ್ರೇಮ ನಿವೇದನೆ ಮಾಡಿಕೊಳ್ಳಲು ಜಲಪಾತದ ಮಧ್ಯದಲ್ಲಿ ಬಂಡೆಗಳ ಅಂಚಿನಲ್ಲಿ ನಿಂತಿರುವುದನ್ನು ಕಾಣಬಹುದು. ಹುಡುಗಿ ಪ್ರಕೃತಿಯನ್ನು ಹತ್ತಿರದಿಂದ ನೋಡಿ ಖುಷಿಯಾಗಿದ್ದಾಳೆ. ನಂತರ ಹುಡುಗ ತನ್ನ ಗೆಳತಿಗೆ ಪ್ರೇಮ ನಿವೇದನೆ ಮಾಡಲು ಮಂಡಿಯೂರಿ ಕುಳಿತುಕೊಳ್ಳಲು ಪ್ರಯತ್ನಿಸುತ್ತಾನೆ, ನಂತರ ಇದ್ದಕ್ಕಿದ್ದಂತೆ ಅವನ ಕಾಲು ಜಾರಿ ವೇಗವಾಗಿ ಹರಿಯುವ ಜಲಪಾತಕ್ಕೆ ಬೀಳುತ್ತಾನೆ. ಕೊನೆಗೆ ಬಲವಾದ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಾನೆ. ಹತ್ತಿರದಲ್ಲಿ ನಿಂತಿದ್ದ ಅವನ ಗೆಳತಿ ಅವನನ್ನು ಉಳಿಸಿಕೊಳ್ಳೋಕೆ ಪ್ರಯತ್ನಿಸಲು ನೋಡುತ್ತಿದ್ದಾಳೆ. ಆದರೆ ಅದು ಸಾಧ್ಯವಾಗಲಿಲ್ಲ. ನಂತರ ಅವನನ್ನು ನೋಡುತ್ತಲೇ ಇದ್ದಾಳೆ. ಇದು ವಿಡಿಯೋದಲ್ಲಿ ಸಂಪೂರ್ಣವಾಗಿ ರೆಕಾರ್ಡ್ ಆಗಿದೆ.

ಹುಡುಗಿಯ ಪ್ರೀತಿಯ ಬಗ್ಗೆಯೇ ಡೌಟ್
ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಜನರು ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು @MarchUnofficial ಎಂಬ ಪೇಜ್‌ನಿಂದ ತೆಗೆದುಕೊಳ್ಳಲಾಗಿದೆ. ಆದರೆ ಘಟನೆಯ ನಿಖರವಾದ ಸ್ಥಳವನ್ನು ವೈರಲ್ ವಿಡಿಯೋದಲ್ಲಿ ಉಲ್ಲೇಖಿಸಲಾಗಿಲ್ಲ. ಅನೇಕ ಬಳಕೆದಾರರು ಈ ಘಟನೆಯನ್ನು "ಕಲಿಯುಗ್ ಮೊಹಬ್ಬತ್" ಎಂದು ಕರೆದರೆ, ಮತ್ತೆ ಕೆಲವರು ಗೆಳೆಯನನ್ನು ಉಳಿಸಿಕೊಳ್ಳಲು ಪ್ರಯತ್ನಿಸದಿರುವ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಒಂದಿಷ್ಟು ಜನರು "ಪ್ರೀತಿಯ ಉತ್ಸಾಹವು ಅಪಾಯಕಾರಿ ಸ್ಥಳಕ್ಕೆ ಕರೆದೊಯ್ಯುತ್ತದೆ, ಆದರೆ ಅಂತಹ ಸ್ಥಳಗಳಲ್ಲಿ ಜಾಗರೂಕರಾಗಿರುವುದು ಮುಖ್ಯ", "ಇದು ಸಾಹಸವಲ್ಲ, ಮೂರ್ಖತನ. ನಿಮ್ಮ ಜೀವವನ್ನೇ ಪಣಕ್ಕಿಟ್ಟು ಪ್ರಪೋಸ್ ಮಾಡುವುದರ ಅರ್ಥವೇನು?" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ

Scroll to load tweet…

ಆರಿಸಿಕೊಂಡ ಜಾಗವೇ ಮುಳುವಾಯ್ತು!
ಇಂತಹುದೇ ಒಂದು ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ನರ್ಮದಾ ನದಿಯ ಸೇತುವೆಯ ಕೆಳಗಿನ ಕಂಬದ ಮೇಲೆ ಪ್ರೇಮಿಗಳಿಬ್ಬರು ಕುಳಿತಿದ್ದರು. ಸ್ಥಳೀಯ ಜನರು ಅವರಿಗೆ ಹಲವಾರು ಬಾರಿ ಎಚ್ಚರಿಕೆ ನೀಡಿದರು, ಆದರೆ ಅವರು ಕೇಳಲಿಲ್ಲ. ನರ್ಮದಾ ನದಿಯ ನೀರಿನ ಮಟ್ಟ ನಿಧಾನವಾಗಿ ಏರಲು ಪ್ರಾರಂಭಿಸಿತು. ಪ್ರೇಮಿಗಳು ಕುಳಿತಿದ್ದ ಸೇತುವೆ ಇದ್ದಕ್ಕಿದ್ದಂತೆ ನೀರಿನಿಂದ ತುಂಬಿತು. ನೀರಿನ ವೇಗದಿಂದಾಗಿ ಹೊರಬರುವ ದಾರಿ ನಿರ್ಬಂಧಿಸಲಾಯಿತು.

ಮೂಲಗಳ ಪ್ರಕಾರ, ಪ್ರೇಮಿ ತನ್ನ ಗೆಳತಿಯನ್ನು ಭೇಟಿಯಾಗಲು ಒಂದು ಸ್ಥಳವನ್ನು ಆರಿಸಿಕೊಂಡನು. ಆ ಸ್ಥಳವೇ ನಂತರ ಇಬ್ಬರಿಗೂ ತೊಂದರೆಯಾಗಲು ಕಾರಣವಾಯಿತು. ಈ ವಿಡಿಯೋ ಗುಜರಾತ್‌ನ ಭರೂಚ್‌ನದ್ದು ಎಂದು ಹೇಳಲಾಗುತ್ತದೆ. ಇಲ್ಲಿ ಪ್ರೇಮಿ ತನ್ನ ಗೆಳತಿಯನ್ನು ನರ್ಮದಾ ನದಿಯ ಬಳಿ ಭೇಟಿಯಾಗಲು ಕರೆದನು. ನದಿಯ ನೀರಿನ ಮಟ್ಟ ಕಡಿಮೆಯಾಗಿತ್ತು. ಆದ್ದರಿಂದ ಇಬ್ಬರೂ ಏಕಾಂತತೆಗಾಗಿ ನದಿಯ ಮಧ್ಯಕ್ಕೆ ಹೋದರು. ನಂತರ ಇಬ್ಬರೂ ಪರಸ್ಪರರ ಸಂಭಾಷಣೆಯಲ್ಲಿ ಕಳೆದುಹೋದರು. ಅವರು ತಮ್ಮ ಸಂಭಾಷಣೆಯಲ್ಲಿ ಎಷ್ಟು ಕಳೆದುಹೋಗಿದ್ದರು ಎಂದರೆ ಅವರ ಸುತ್ತ ನಡೆಯುತ್ತಿರುವ ಘಟನೆಗಳನ್ನು ಅವರು ಗಮನಿಸಲಿಲ್ಲ. ನದಿಯ ನೀರಿನ ಮಟ್ಟ ಏರುತ್ತಿರುವುದನ್ನು ಯಾರೂ ಗಮನಿಸಲಿಲ್ಲ. ಕೊನೆಗೆ ನೀರಿನ ಮಟ್ಟ ತುಂಬಾ ಹೆಚ್ಚಾಗಿ ದಡಕ್ಕೆ ಹಿಂತಿರುಗಲು ಅಸಾಧ್ಯವಾಯಿತು.

ಅಲೆಯ ಹೊಡೆತಕ್ಕೆ ಸಿಲುಕಿದ ಪ್ರೀತಿ
ಅಲೆಗಳ ನಡುವೆ ಸಿಲುಕಿದ್ದ ಜೋಡಿ ಸಹಾಯಕ್ಕಾಗಿ ಗಂಟೆಗಟ್ಟಲೆ ಕಾಯಬೇಕಾಯಿತು. ಪ್ರಪಂಚದ ಕಣ್ಣುಗಳಿಂದ ಮರೆಮಾಡಲು ಬಯಸಿದ ಭೇಟಿ ಈಗ ಎಲ್ಲರ ಕಣ್ಣ ಮುಂದೆ ಬಯಲಾಯ್ತು. ಸ್ವಲ್ಪ ಸಮಯದ ನಂತರ, ನೂರಾರು ಜನರ ಗುಂಪು ನದಿಯ ದಡದಲ್ಲಿ ಜಮಾಯಿಸಿತು. ನದಿಯ ಮಧ್ಯದಲ್ಲಿ ಅವರಿಬ್ಬರನ್ನೂ ನೋಡಿ ಎಲ್ಲರೂ ಆಶ್ಚರ್ಯಚಕಿತರಾದರು. ನದಿಯ ನೀರಿನ ಮಟ್ಟ ಇನ್ನೂ ಏರುತ್ತಿತ್ತು. ನಂತರ ದೋಣಿಯ ಸಹಾಯದಿಂದ ಇಬ್ಬರನ್ನೂ ಸುರಕ್ಷಿತವಾಗಿ ರಕ್ಷಿಸಲಾಯಿತು.