ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಅದ್ರಲ್ಲಿ ವಧು ತಲೆ ಮೇಲೆ ಪಾರಿವಾಳ ಕುಳಿತಿದೆ. ಇದನ್ನು ನೋಡಿದ ನೆಟ್ಟಿಗರು ಶಾಸ್ತ್ರ ಹೇಳಲು ಶುರು ಮಾಡಿದ್ದಾರೆ. 

ಜೀವನದಲ್ಲಿ ಅದ್ಭುತ, ಅಚ್ಚರಿ ಘಟನೆಗಳು ಯಾವಾಗ ನಡೆಯುತ್ವೆ ಹೇಳೋಕೆ ಸಾಧ್ಯವಿಲ್ಲ. ಪಕ್ಷಿಗಳು (Birds) ಮನೆ ಮುಂದೆ ಬಂದಾಗ ಅದ್ರ ಫೋಟೋ ಕ್ಲಿಕ್ಕಿಸೋದೇ ಕಷ್ಟ. ಸ್ವಲ್ಪ ಶಬ್ದವಾದ್ರೂ ಅವು ಓಡಿ ಹೋಗುತ್ವೆ. ತಾವಾಗಿಯೇ ನಮ್ಮ ಬಳಿ ಬಂದಾಗ, ನಮ್ಮ ತಲೆ ಅಥವಾ ಕೈ ಮೇಲೆ ಕುಳಿತಾಗ ಅದೇನೋ ಖುಷಿ. ಈ ಸಂತೋಷ ವಧುವಿಗೆ ಸಿಕ್ಕಿದೆ. ಮದುವೆ ಖುಷಿಯಲ್ಲಿದ್ದ ವಧು ಜೀವನದಲ್ಲಿ ಮತ್ತೊಂದು ಅಚ್ಚರಿ ನಡೆದಿದೆ. ಅದನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದ್ದು, ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಧು ತಲೆ ಮೇಲೆ ಪಾರಿವಾಳ ಬಂದು ಕುಳಿತಿದ್ದನ್ನು ನೋಡಿ ನೆಟ್ಟಿಗರು ಸಂಭ್ರಮಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ವಿಡಿಯೋ ಪ್ರಕಾರ, ಮದುವೆ ಉಡುಗೆಯಲ್ಲಿ ವಧು ಕುಳಿತಿದ್ದಾಳೆ. ಅವಳ ಪಕ್ಕದಲ್ಲಿ ವರ ಕುಳಿತಿದ್ದು, ಮದುವೆ ಶಾಸ್ತ್ರ ನಡೆಯುತ್ತಿದೆ. ವಧು ಕೆಂಪು ಬಟ್ಟೆ ಧರಿಸಿದ್ದು, ಪಂಡಿತರು ಹೇಳಿದ ಕೆಲ್ಸ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾಳೆ. ಈ ಟೈಂಗೆ ಸರಿಯಾಗಿ ಪಾರಿವಾಳವೊಂದು ಹಾರಿ ಬಂದು ವಧು ತಲೆ ಮೇಲೆ ಕುಳಿತಿದೆ. ಅಲ್ಲಿದ್ದವರೆಲ್ಲ ಅಲುಗಾಡಬೇಡ ಅಂತ ಹೇಳೋದನ್ನು ನೀವು ಕೇಳ್ಬಹುದು. ಇನ್ನು ಈ ದೃಶ್ಯವನ್ನು ವರ ಅಚ್ಚರಿಯಿಂದ ನೋಡ್ತಿದ್ದಾನೆ.

ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೇಗವಾಗಿ ವೈರಲ್ ಆಗಿದೆ. ನಾಲ್ಕು ಲಕ್ಷಕ್ಕೂ ಹೆಚ್ಚು ಬಾರಿ ವಿಡಿಯೋವನ್ನು ವೀಕ್ಷಣೆ ಮಾಡಲಾಗಿದೆ. ಅನೇಕರು ವಿಡಿಯೋಕ್ಕೆ ಕಮೆಂಟ್ ಮಾಡಿದ್ದಾರೆ. ನೀವು ಅದೃಷ್ಟವಂತರು, ಅದಕ್ಕೆ ಪಾರಿವಾಳ ನಿಮ್ಮ ತಲೆ ಮೇಲೆ ಬಂದು ಕುಳಿತಿದೆ ಅಂತ ಕಮೆಂಟ್ ಮಾಡಿದ್ದಾರೆ. ಈ ದಂಪತಿ ಪಶುಪತಿನಾಥ ಭೋಲೆನಾಥನ ಆಶೀರ್ವಾದವನ್ನು ಪಡೆದಿದ್ದಾರೆ ಎಂದು ಒಬ್ಬರು ಬರೆದ್ರೆ, ಪಾರಿವಾಳ (pigeon) ರತಿ ದೇವಿಯ ವಾಹನವಾಗಿದೆ. ರತಿ ದೇವಿಯ ಆಶೀರ್ವಾದ ನಿಮಗೆ ಸಿಕ್ಕಿದೆ ಎಂದು ಇನ್ನೊಬ್ಬರು ಬರೆದಿದ್ದಾರೆ. ಪಕ್ಷಿ ಅದರ ತಲೆಯ ಮೇಲೆ ಕುಳಿತರೆ, ಅದು ತುಂಬಾ ಅದೃಷ್ಟ ಎಂದು ಮತ್ತೊಬ್ಬರು ಬರೆದಿದ್ದಾರೆ. ಬಹುತೇಕ ಎಲ್ಲರೂ ಇದು ಅದೃಷ್ಟದ ಸಂಕೇತವೆಂದ್ರೆ ಕೆಲವರು ಮಾತ್ರ ಇದು ಬಿಳಿ ಪಾರಿವಾಳವಾಗಿದ್ದು, ಅಶುಭ ಎಂದಿದ್ದಾರೆ. ಇನ್ನು ಕೆಲ ಬಳಕೆದಾರರು ಇದನ್ನು ತಮಾಷೆಯಾಗಿ ತೆಗೆದುಕೊಂಡಿದ್ದಾರೆ. ಪಾರಿವಾಳ, ಮಾಜಿ ಪ್ರೇಮಿಯ ಸಂದೇಶ ಹೊತ್ತು ತಂದಿರಬೇಕು ಎಂದಿದ್ದಾರೆ.

ಪಾರಿವಾಳ ತಲೆಯ ಮೇಲೆ ಕುಳಿತ್ರೆ ಏನು ಅರ್ಥ? : ಹಿಂದೂ ಧರ್ಮದಲ್ಲಿ ಪಾರಿವಾಳದ ಬಗ್ಗೆ ಸಾಕಷ್ಟು ವಿಷ್ಯಗಳನ್ನು ಹೇಳಲಾಗಿದೆ. ಪಾರಿವಾಳಗಳು ಲಕ್ಷ್ಮಿ ದೇವಿಯ ಭಕ್ತರು. ಪಾರಿವಾಳಗಳನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಪಾರಿವಾಳ ತಲೆಯ ಮೇಲೆ ಹಾರಿದ್ರೆ ಸಂಕಷ್ಟಗಳು ದೂರವಾಗುತ್ತವೆ ಎನ್ನಲಾಗಿದೆ. ಪಾರಿವಾಳ ನಿಮ್ಮ ತಲೆಯ ಬಳಿ ಬಂದ್ರೆ ಅದು ಆಧ್ಯಾತ್ಮಿಕ ಜಾಗೃತಿಯ ಸಂಕೇತವಾಗಿರಬಹುದು. ಪೂರ್ವಜರು ಸಂದೇಶ ತಂದಿರಬಹುದು ಎಂಬ ನಂಬಿಕೆಯೂ ಇದೆ. ವಾಸ್ತು ಶಾಸ್ತ್ರದ ಪ್ರಕಾರ, ದಿನದ ಮೊದಲ ಭಾಗದಲ್ಲಿ ಪಾರಿವಾಳದ ಶಬ್ದ ಕೇಳಿದರೆ, ಅದು ಶುಭ ಸಂಕೇತ. ಆದರೆ ನಾಲ್ಕನೇ ಭಾಗದಲ್ಲಿ ಪಾರಿವಾಳದ ಶಬ್ದ ಕೇಳಿದರೆ, ನೀವು ದೊಡ್ಡ ನಷ್ಟದ ಸಂಕೇತ. ಹಾಗೆ ಮನೆಯಲ್ಲಿ ಪಾರಿವಾಳ ಗೂಡು ಕಟ್ಟುವುದನ್ನು ದುರದೃಷ್ಟದ ಸೂಚಕ. ಆರ್ಥಿಕ ನಷ್ಟಕ್ಕೆ ಇದು ಕಾರಣವಾಗುತ್ತದೆ. ಗೂಡು ಕಟ್ಟದೆ ಪಾರಿವಾಳ ನಿಮ್ಮ ಮನೆಗೆ ಬಂದರೆ ಅದು ಶುಭ ಸಂಕೇತ ಎಂದು ನಂಬಲಾಗಿದೆ.