ಸ್ವಿಗ್ಗಿ ಮತ್ತು ಜೊಮ್ಯಾಟೊ ಜೊತೆಗೆ ಇನ್ನೂ 5 ಆ್ಯಪ್‌ಗಳು ಭಾರತದಲ್ಲಿ ಚೀಪ್ ಅಂಡ್ ಬೆಸ್ಟ್ ಫುಡ್ ಡೆಲಿವರಿ ಸೇವೆ ಒದಗಿಸುತ್ತವೆ. ಈ ಆ್ಯಪ್‌ಗಳು ವಿವಿಧ ರೀತಿಯ ಆಹಾರ ಆಯ್ಕೆಗಳು, ವೇಗದ ವಿತರಣೆ ಮತ್ತು ವಿಶೇಷ ಊಟದ ಆಯ್ಕೆಗಳನ್ನು ನೀಡುತ್ತವೆ.
ಊಟ ಆರ್ಡರ್ ಮಾಡೋದಾದ್ರೆ ಸ್ವಿಗ್ಗಿ-ಜೊಮ್ಯಾಟೊ ಹೆಸರು ಮೊದಲು ನೆನಪಿಗೆ ಬರುತ್ತವೆ. ಆದರೆ ದೇಶದಲ್ಲಿ ಇನ್ನೂ ಅನೇಕ ಕಂಪನಿಗಳು ಚೀಪ್ ಅಂಡ್ ಬೆಸ್ಟ್ ಸಮಯದಲ್ಲಿ ಫುಡ್ ಡೆಲಿವರಿ (Food Delivery Apps) ಮಾಡ್ತಾವೆ ಅಂತ ಗೊತ್ತಾ? ಜನರಿಗೆ ಹೆಚ್ಚು ಗೊತ್ತಿಲ್ಲದ ಕೆಲವು ಆ್ಯಪ್‌ಗಳ ಬಗ್ಗೆ ತಿಳಿಸಿಕೊಡ್ತೀವಿ.
1) EatSure
EatSure ಮೊದಲು Faasos ಅಂತ ಕರೀತಿದ್ದರು. ಪ್ರತಿ ಫುಡ್ ಆರ್ಡರ್‌ಗೂ ಮೊದಲು 200ಕ್ಕೂ ಹೆಚ್ಚು ಗುಣಮಟ್ಟದ ತಪಾಸಣೆ ಮಾಡ್ತೀವಿ ಅಂತ ಕಂಪನಿ ಹೇಳುತ್ತದೆ. ಇಲ್ಲೂ ಅನೇಕ ಬ್ರ್ಯಾಂಡ್‌ಗಳು ಮತ್ತು ರೆಸ್ಟೋರೆಂಟ್‌ಗಳಿವೆ. ಮುಂಬೈ, ದೆಹಲಿ, ಹೈದರಾಬಾದ್ ಸೇರಿ 75 ನಗರಗಳಲ್ಲಿ ಈ ಕಂಪನಿಯ ಸೇವೆ ಲಭ್ಯವಿದೆ.
2) Box8
38 ನಿಮಿಷಗಳಲ್ಲಿ ಫುಡ್ ಡೆಲಿವರಿ ಅಂತ ಈ ಆ್ಯಪ್ ಹೇಳುತ್ತದೆ. ಆಲ್ ಇನ್ ಒನ್ ಮೀಲ್ ಜೊತೆಗೆ ಇಂಡಿಯನ್ ಫುಡ್ ವೆರೈಟಿ, ಸಿಹಿತಿಂಡಿಗಳನ್ನು ಆರ್ಡರ್ ಮಾಡಬಹುದು. ಬೆಂಗಳೂರು, ಮುಂಬೈ, ಪುಣೆ ಮತ್ತು ಗುರುಗ್ರಾಮದಲ್ಲಿ ಇದ್ದವರು ಇದನ್ನು ಬಳಸಬಹುದು.
3) Hungryji app
hungryji app ಬಳಸೋದು ತುಂಬಾ ಸುಲಭ. ಲೋಕಲ್ ಫುಡ್ ಇಷ್ಟ ಪಡೋರು ಇದನ್ನು ಆಯ್ಕೆ ಮಾಡಬಹುದು. ಇಲ್ಲಿ ಅನೇಕ ರೆಸ್ಟೋರೆಂಟ್‌ಗಳು ಸಿಗುತ್ತವೆ. ಈ ಆ್ಯಪ್ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ, ಆದ್ರೆ ನಿಧಾನವಾಗಿ ಇದರ ಜನಪ್ರಿಯತೆ ಹೆಚ್ಚುತ್ತಿದೆ.
4) Dunzo
ಫ್ರೀ ಊಟದ ಜೊತೆಗೆ ಮನೆಗೆ ಬೇಕಾಗಿರುವ ದಿನಸಿ ಸಾಮಾನು ಆರ್ಡರ್ ಮಾಡ್ಬೇಕು ಅಂತಿದ್ರೆ Dunzo ಬೆಸ್ಟ್ ಆಪ್ಷನ್. ಮೆಟ್ರೋ ನಗರಗಳಲ್ಲಿ ಸೇವೆ ನೀಡುತ್ತದೆ. 24 ಗಂಟೆ ಯಾವಾಗ ಬೇಕಾದರೂ ಊಟ ಆರ್ಡರ್ ಮಾಡಬಹುದು ಅಂತ ಕಂಪನಿ ಹೇಳುತ್ತದೆ.
5) FreshMenu
FreshMenu ವಿಶೇಷ ಫುಡ್ ಆ್ಯಪ್. ಶೆಫ್ ತಯಾರಿಸಿದ ಡೈಲಿ ಮೆನು ಇಲ್ಲಿ ಸಿಗುತ್ತೆ. ಆದರೆ ಇದರ ಫುಡ್ ಡೆಲಿವರಿ ಎಲ್ಲಾ ಕಡೆ ಇಲ್ಲ, ಕೆಲವು ನಗರಗಳಲ್ಲಿ ಮಾತ್ರ ಇದೆ.
ಈ ಆ್ಯಪ್‌ಗಳು ಫುಡ್ ಡೆಲಿವರಿ ಮಾಡಿದ್ರೂ ಸ್ವಿಗ್ಗಿ ಮತ್ತು ಜೊಮ್ಯಾಟೊನಷ್ಟು ದೊಡ್ಡದಲ್ಲ. ಆದರೆ ಅಗತ್ಯ ಬಿದ್ದರೆ ಇದನ್ನು ಬಳಸಬಹುದು. ಇದನ್ನು ಬಳಸುವ ಮೊದಲು ನಗರ ಮತ್ತು ಲೊಕೇಶನ್‌ನಲ್ಲಿ ಲಭ್ಯತೆ ಚೆಕ್ ಮಾಡಿಕೊಳ್ಳಿ.
