ಮುಂಬೈ ಪೊಲೀಸ್ ಅಧಿಕಾರಿಯೊಬ್ಬರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬೀದಿ ಬದಿಯಲ್ಲಿದ್ದ ತೊಟ್ಟಿಲೊಂದನ್ನು ಅವರು ಕೆಡವಿದ್ದಾರೆ. ನಂತ್ರ ಮಾಡಿದ ಕೆಲಸ ಎಲ್ಲರ ಮನಸ್ಸು ಕರಗಿಸಿದೆ. 

ಕಟುಮಸ್ತಾಗಿರುವ ದೇಹ, ಶಿಸ್ತಿನ ಸಿಪಾಯಿ ಪೊಲೀಸ್ ಅಧಿಕಾರಿಗಳ (Police officers) ಮನಸ್ಸು ಮೃದುವಾಗಿರುತ್ತದೆ. ಪೊಲೀಸ್ ಅಧಿಕಾರಿಗಳು ತಾಯಿ ಮಮತೆಯನ್ನು ಹೊಂದಿರ್ತಾರೆ. ಕಷ್ಟದಲ್ಲಿರುವರಿಗೆ ಸಹಾಯ ಮಾಡಲು ಅವರು ಸದಾ ಸಿದ್ಧ. ಇದಕ್ಕೀಗ ಮತ್ತೊಂದು ಸಾಕ್ಷ್ಯ ಸಿಕ್ಕಿದೆ. ಮುಂಬೈ ಪೊಲೀಸ್ ಆದಿಕಾರಿಯೊಬ್ಬರೂ ತಮ್ಮ ವ್ಯಕ್ತಿತ್ವದ ಮೂಲಕ ದೇಶದ ಜನರ ಗಮನ ಸೆಳೆದಿದ್ದಾರೆ.

ಮಗುವಿಗೆ ತೊಟ್ಟಿಲು ನೀಡಿದ ಪೊಲೀಸ್ ಅಧಿಕಾರಿ

ಖಾರ್ ಪೊಲೀಸ್ ಠಾಣೆಯ ಮಾರ್ಷಲ್ ಸ್ಕ್ವಾಡ್ನ ಮುಂಬೈ ಪೊಲೀಸ್ ಅಧಿಕಾರಿ ಸುಶೀಲ್ ಶಿಖರೆ ಮಾನವೀಯತೆ ಮೆರೆದಿದ್ದಾರೆ. ಬೀದಿ ಬದಿಯಲ್ಲಿ ಕೃತಕ ತೊಟ್ಟಿಲಿನಲ್ಲಿ ಮಗುವೊಂದು ಮಲಗಿತ್ತು. ಕಟ್ಟಿಗೆ ಹಾಗೂ ಸೀರೆ ಬಳಸಿ ತಾಯಿ ತೊಟ್ಟಿಲು ನಿರ್ಮಿಸಿದ್ದಳು. ಸುಶೀಲ್ ಶಿಖರ್ ಪಾದಾಚಾರಿ ಮಾರ್ಗದಲ್ಲಿ ಗಸ್ತು ತಿರುಗುತ್ತಿದ್ದಾಗ ಇದನ್ನು ಗಮನಿಸಿದ್ದಾರೆ. ಮುಗ್ದ ಮಗು ಅವರನ್ನು ಸೆಳೆದಿದೆ. ಮಗುವಿಗೆ ಈ ತೊಟ್ಟಿಲಿನಿಂದ ಅಪಾಯವಿರೋದನ್ನು ಅವರು ಗಮನಿಸಿದ್ದಾರೆ. ಮಗುವಿನ ಸುರಕ್ಷತೆ ಬಗ್ಗೆ ಸುಶೀಲ್ ಶಿಖರೆ ಕಳವಳ ವ್ಯಕ್ತಪಡಿಸಿದ್ದಾರೆ. ಕೃತಕ ತೊಟ್ಟಿಲನ್ನು ತೆಗೆದಿದ್ದಾರೆ. ಇದನ್ನು ನೋಡಿದ ಮಗುವಿನ ತಾಯಿ ಹೆದರಿದ್ದಾರೆ. ಪೊಲೀಸ್ ವರ್ತನೆಯಿಂದ ಅವರು ವಿಚಲಿತರಾಗಿದ್ದಾರೆ. ಆದ್ರೆ ಮುಂದೆ ನಡೆದ ಘಟನೆ ನೋಡಿ ಅವರು ಭಾವುಕರಾಗಿದ್ದಾರೆ.

ರಿಯಲ್ ಆಗೋಯ್ತಾ 45 ಸಿನಿಮಾ ಕಥೆ..? ಅಜಿತ್ ಪವಾರ್ ಸಾವಿಗೂ- 45 ಚಿತ್ರಕ್ಕೂ ಲಿಂಕ್ ಇದ್ಯಾ?

ಕೃತಕ ತೊಟ್ಟಿಲು ತೆಗೆದು ತಾಯಿಯನ್ನು ಭಯಗೊಳಿಸಿದ್ದ ಸುಶೀಲ್ ಶಿಖರೆ ಕೆಲವೇ ಸಮಯದಲ್ಲಿ ಅದೇ ಜಾಗಕ್ಕೆ ವಾಪಸ್ ಆಗಿದ್ದಾರೆ. ಆ ಸಮಯದಲ್ಲಿ ಅವ್ರ ಕೈನಲ್ಲಿ ಗಟ್ಟಿಮುಟ್ಟಾದ ಕಬ್ಬಿಣದ ತೊಟ್ಟಿಲಿತ್ತು. ಆಧುನಿಕ ಸಿದ್ಧ ತೊಟ್ಟಿಲು ನೋಡಿ ಮಗುವಿನ ತಾಯಿ ಅಚ್ಚರಿಗೊಳಗಾಗಿದ್ದಾರೆ. ಹೊಸದಾಗಿ ತಂದ ತೊಟ್ಟಿಲಿಗೆ ಮಗುವನ್ನು ಮಲಗಿಸಿದ ಸುಶೀಲ್ ಶಿಖರೆ ಮಗುವನ್ನು ಸಮಾಧಾನಪಡಿಸಿದ್ದಾರೆ. ಪೊಲೀಸರ ಈ ಔದಾರ್ಯವು ತಾಯಿಯ ಭಯವನ್ನು ಆತ್ಮವಿಶ್ವಾಸವಾಗಿ ಬದಲಿಸಿದೆ. ಖಾಕಿ ಸಮವಸ್ತ್ರದ ಅಡಿಯಲ್ಲಿಯೂ ಸಹ ಸೌಮ್ಯ ಮತ್ತು ಸಹಾಯಕ ವ್ಯಕ್ತಿ ವಾಸಿಸುತ್ತಾನೆ ಎಂಬುದನ್ನು ಇದು ಸಾಬೀತುಪಡಿಸಿದೆ.

ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಇದ್ರಲ್ಲಿ ಕಟ್ಟಿಗೆ ಹಾಗೂ ಸೀರೆಯಿಂದ ಮಾಡಿದ ತೊಟ್ಟಿಲ ಬಳಿ ಮೊದಲು ಸುಶೀಲ್ ಶಿಖರೆ ಹೋಗ್ತಾರೆ. ತೊಟ್ಟಿಲಲ್ಲಿ ಮಗು ಇದ್ಯಾ ಚೆಕ್ ಮಾಡ್ತಾರೆ. ಆಗ ತೊಟ್ಟಿಲಲ್ಲಿ ಮಗು ಇರೋದಿಲ್ಲ. ತಮ್ಮ ಲಾಠಿಯಿಂದ ತೊಟ್ಟಿಲನ್ನು ಕೆಡವಿ ನೆಲಕ್ಕೆ ಬೀಳಿಸ್ತಾರೆ. ಆ ಕ್ಷಣ ಅಲ್ಲಿಗೆ ಮಗುವಿನ ತಾಯಿ ಬರ್ತಾಳೆ. ಮಗುವಿಗಾಗಿ ಮಾಡಿದ್ದ ತೊಟ್ಟಿಲು ಇದು ಎನ್ನುತ್ತಾಳೆ. ತಾಯಿ ಮಾತು ಕೇಳಿದ ಸುಶೀಲ್ ಶಿಖರೆ, ಲಾಠಿಯನ್ನು ಅಲ್ಲೇ ಬಿಟ್ಟು ಹಾಗೇ ಹೋಗೋದನ್ನು ವಿಡಿಯೋದಲ್ಲಿ ನೋಡ್ಬಹುದು. ನಂತ್ರ ಹೊಸ ತೊಟ್ಟಿಲಿನ ಜೊತೆ ಬರುವ ಅವರು, ತಾವೇ ತೊಟ್ಟಿಲನ್ನು ಓಪನ್ ಮಾಡಿ, ಮಗುವನ್ನು ಎತ್ತಿ ಆಡಿಸಿ, ತೊಟ್ಟಿಲಲ್ಲಿ ಮಲಗಿಸ್ತಾರೆ. ವಿಡಿಯೋ ನೋಡಿದ ನೆಟ್ಟಿಗರು ಇಂಥ ಪೊಲೀಸ್ ಅಧಿಕಾರಿಗಳ ಅಗತ್ಯವಿದೆ ಅಂತ ಕಮೆಂಟ್ ಮಾಡಿದ್ದಾರೆ.

ಪಾಪರಾಜಿಗೆ ಹಗ್ ಮಾಡಿದ 'ನ್ಯಾಷನಲ್ ಕ್ರಶ್' ರಶ್ಮಿಕಾ ಮಂದಣ್ಣ; ಸೂಪರ್ ಸ್ಟಾರ್ ಆದ್ರೂ ಬೇರು ಮರೆಯದ ಬೆಡಗಿ!

ಸುಶೀಲ್ ಶಿಖರೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ತಮ್ಮ ಇನ್ಸ್ಟಾಖಾತೆಯಲ್ಲಿ ಅವರೇ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಸೊಳ್ಳೆಯಿಂದ ಕಚ್ಚಿಸಿಕೊಳ್ತಾ, ಅಪಾಯಕಾರಿ ತೊಟ್ಟಿನಲ್ಲಿದ್ದ ಮಗು ನೋಡಿ ಒಬ್ಬ ಪೊಲೀಸ್ ಅಧಿಕಾರಿಯಲ್ಲ ಒಬ್ಬ ಮನುಷ್ಯ ಎಚ್ಚರಗೊಂಡ. ಇಂದು ಪೊಲೀಸ್ ಅಧಿಕಾರಿ ಮಾತನಾಡಲಿಲ್ಲ, ಅವರ ನಡುವಳಿಕೆ ಬಹಳಷ್ಟು ಹೇಳಿದೆ ಅಂತ ಶೀರ್ಷಿಕೆ ಹಾಕಿದ್ದಾರೆ. ಸುಶೀಲ್ ಶಿಖರೆ ಅಸಹಾಯಕರಿಗೆ ಸಹಾಯ ಮಾಡೋದ್ರಲ್ಲಿ ಎತ್ತಿದ ಕೈ. ಅವರ ವಿಡಿಯೋಗಳೇ ಇದನ್ನು ಹೇಳುತ್ತವೆ.

View post on Instagram