ಪ್ರತಿ ದಿನ ಬಂದು ಮಂದಿರದ ಬಳಿ ದರ್ಶನ ನೀಡುವ ಮೇಕೆ ಹತ್ತಿರ ಹೋಗುತ್ತಿದ್ದಂತೆ ಮಾಯವಾಗಿ ಬಿಡುತ್ತಿದೆ. ಸಾಕ್ಷಾತ್ ಜೋಗಿನಿ ಮಾತೆ ನಮಗೆ ದರ್ಶನ ನೀಡುತ್ತಿದ್ದಾರೆ ಎಂದು ಸ್ಥಳೀಯರು, ಭಕ್ತರು ಹೇಳಿದ್ದಾರೆ. ಮಾಯಾ ಮೇಕೆಯ ವಿಡಿಯೋ ಸೆರೆ ಹಿಡಿಯಲಾಗಿದೆ.
ಕುಲ್ಲು (ಆ.09) ಪವಿತ್ರ ಹಾಗೂ ಪ್ರಕೃತಿಯ ಮಡಲಲ್ಲಿ ಇರುವ ಜೋಗಿನಿ ಮಾತಾ ಮಂದಿರದಲ್ಲಿ ಪವಾಡವೊಂದು ನಡೆಯುತ್ತಿದೆ. ಪ್ರತಿ ದಿನ ಬಿಳಿ ಮೇಕೆಯೊಂದು ಬಂದು ದರ್ಶನ ನೀಡುತ್ತದೆ. ಬೆಟ್ಟದಿಂದ ಭಕ್ತರಿಗೆ ದರ್ಶನ ನೀಡುವ ಮೇಕೆ ಹತ್ತಿರ ಹೋಗಲು ಪ್ರಯತ್ನಿಸಿದರೆ ಮಾಯವಾಗಿ ಬಿಡುತ್ತಿದೆ ಎಂದು ಸ್ಥಳೀಯರು, ಭಕ್ತರು ಹೇಳಿದ್ದಾರೆ. ಈ ಕುರಿತು ವಿಡಿಯೋವನ್ನು ಭಕ್ತರು ಸೆರೆ ಹಿಡಿದ್ದಾರೆ. ಇದೀಗ ಹಿಮಾಚಲ ಪ್ರದೇಶದ ಪ್ರಾಕೃತಿಕ ಸೌಂದರ್ಯದ ಜೋಗಿನಿ ಮಾತಾ ಮಂದಿರಕ್ಕೆ ಬರುವ ಭಕ್ತರು ಮೇಕೆ ದರ್ಶನ ಪಡೆಯುತ್ತಿದ್ದಾರೆ.
ಬೆಟ್ಟದ ಆವರಣದಲ್ಲಿ ದರ್ಶನ ನೀಡುವ ಮೇಕೆ
ಹಿಮಾಚಲ ಪ್ರದೇಶದಲ್ಲಿರುವ ಪವಿತ್ರ ಹಾಗೂ ಅತ್ಯಂತ ಸುಂದರ ದೇವಸ್ಥಾನ ಜೋಗಿನಿ ಮಾತಾ ಮಂದಿರ. ಪ್ರತಿ ದಿನ ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ. ಜೋಗಿನಿ ಮಾತಾ ಮಂದಿರಕ್ಕೆ ಭೇಟಿ ನೀಡಿದರೆ ಭಕ್ತರ ಕಷ್ಟ, ಸಮಸ್ಯೆಗಳು ಪರಿಹಾರವಾಗಲಿದೆ, ಜೀವನದ ಸುಖ ಶಾಂತಿ ನೆಮ್ಮದಿ ಸಿಗಲಿದೆ ಅನ್ನೋ ನಂಬಿಕೆ ಇದೆ. ಇತ್ತೀಚೆಗೆ ಸಾಕ್ಷಾತ್ ಜೋಗಿನಿ ಮಾತಾ ಭಕ್ತರಿಗೆ ದರ್ಶನ ನೀಡುತ್ತಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ. ದೇವಸ್ಥಾನ ಆವರಣದಲ್ಲಿ ಪ್ರತಿ ದಿನ ಬಿಳಿ ಮೇಕೆಯೊಂದು ಪ್ರತ್ಯಕ್ಷವಾಗುತ್ತದೆ. ಭಕ್ತರಿಗೆ ದರ್ಶನ ನೀಡಿ ಬಳಿಕ ಮಾಯವಾಗುತ್ತಿದೆ. ಬೆಟ್ಟದ ಮೇಲಿಂದ ದರ್ಶನ ನೀಡುವ ಈ ಮೇಕೆ ರಹಸ್ಯ ಬಯಲು ಮಾಡಲು ಹತ್ತಿರ ಹೋದರೆ ಮಾಯವಾಗುತ್ತದೆ ಎಂದ ಸ್ಥಳೀಯರು ಹೇಳುತ್ತಿದ್ದಾರೆ.
ಮೇಕೆಯ ವಿಡಿಯೋ ಸರೆ ಹಿಡಿದ ಭಕ್ತರು
ಸ್ಥಳೀಯರು ಹಾಗೂ ಭಕ್ತರ ಪ್ರಕಾರ, ಜೋಗಿನಿ ಮಾತಾ ಮಂದಿರದಲ್ಲಿ ಬೆಳಗ್ಗೆ ಹಾಗೂ ಸಂಜೆ ಪೂಜೆ ನಡೆಯಲಿದೆ. ಈ ವೇಳೆ ಮಂದಿರದ ಪಕ್ಕದಲ್ಲಿರುವ ಬೆಟ್ಟದ ಮೇಲಿನಿಂದ ಮೇಕೆ ಭಕ್ತರಿಗೆ ದರ್ಶನ ನೀಡಲಿದೆ. ಕೆಲ ಹೊತ್ತು ದರ್ಶನ ನೀಡುತ್ತದೆ. ಇದರ ನಡುವೆ ಮೇಕೆ ರಹಸ್ಯ ತಿಳಿದುಕೊಳ್ಳಲು ಹತ್ತಿರ ಹೋದರೆ ಕಡಿದಾದ ಬೆಟ್ಟದ ಮರೆಯಲ್ಲಿ ಮೇಕೆ ಮಾಯವಾಗುತ್ತಿದೆ ಎಂದಿದ್ದಾರೆ. ಮೇಕೆಯ ವಿಡಿಯೋವನ್ನು ಕೆಲ ಭಕ್ತರು ಸೆರೆ ಹಿಡಿದಿದ್ದಾರೆ. ಕೆಲ ಹೊತ್ತು ದರ್ಶನ ನೀಡಿ ಬೆಟ್ಟದಲ್ಲಿ ಮೆರೆಯಾಗುತ್ತಿರುವ ದೃಶ್ಯ ವೈರಲ್ ಆಗಿದೆ.
ಜೋಗಿನಿ ಮಾತಾ ಮಂದಿರದ ಆವರಣದಲ್ಲಿ ಪೂಜೆ ಸಮಯದಲ್ಲೇ ಕಾಣಿಸಿಕೊಳ್ಳುವ ಈ ಮೇಕೆ ದೈವಿಕ ಸಂಕೇತ ಎಂದು ಭಕ್ತರು ಹೇಳಿದ್ದಾರೆ. ಜೋಗಿನಿ ಮಾತಾ ನಮಗೆ ದರ್ಶನ ನೀಡುತ್ತಿದ್ದಾರೆ. ದೇವಿಯ ವಾಹನವಾಗಿರುವ ಮೇಕೆ ಭಕ್ತರಿಗೆ ಕಾಣಿಸಿಕೊಳ್ಳುತ್ತಿದೆ ಎಂದು ಹಲವರು ಭಕ್ತಿಯಿಂದ ಪೂಜಿಸುತ್ತಿದ್ದಾರೆ.
ಭಕ್ತರು ಸೆರೆ ಹಿಡಿದ ವಿಡಿಯೋದಲ್ಲಿ ಬೆಟ್ಟದ ಕಲ್ಲು ಬಂಡೆಗಳ ನಡುವೆ ಬಿಳಿ ಮೇಕೆಯೊಂದು ಕಾಣಿಸಿಕೊಂಡಿದೆ. ಬಂಡೆಯ ಮರೆಯಲ್ಲಿ ಕುಳಿತು ದೇವಾಲಯದತ್ತ ನೋಡುತ್ತಿರುವ ಮೇಕೆ ವಿಡಿಯೋ ವೈರೈಲ್ ಆಗಿದೆ. ಭಕ್ತರು ಘೋಷಣೆಗಳು, ಗದ್ದಲ ಹೆಚ್ಚಾಗುತ್ತಿದ್ದಂತೆ ಮೇಕೆ ಬೆಟ್ಟದ ಬಂಡೆಗಳ ನಡುವೆ ಮರೆಯಾಗುತ್ತಿರುವ ದೃಶ್ಯವಿದೆ. ಈ ಪವಾಡ ಕುರಿತು ಪರ ವಿರೋಧಗಳಿವೆ. ಆದರೆ ಭಕ್ತರು ಮೇಕೆ ದೈವಿಕ ಸಂಕೇತ ಎಂದು ಪೂಜೆ ಸಲ್ಲಿಸುತ್ತಿದ್ದಾರೆ.

