ಸಾಮಾಜಿಕ ಜಾಲತಾಣಗಳಲ್ಲಿ ಒಂದು ಫೋಟೋ ವೈರಲ್ ಆಗುತ್ತಿದೆ. ಆ ಫೋಟೋದಲ್ಲಿ ಒಂದು ರಾಜೀನಾಮೆ ಪತ್ರ ಗೋಚರಿಸುತ್ತದೆ. ಅದನ್ನು ನೋಡಿದ ನಂತರ ನಿಮಗೆ ನಗು ತಡೆಯೋಕೆ ಆಗಲ್ಲ, ಹಾಗಾದ್ರೆ ವೈರಲ್ ಆಗಿರುವ ಫೋಟೋದಲ್ಲಿ ಅಂಥದ್ದೇನಿದೆ ನೋಡೋಣ.

ಪ್ರತಿದಿನ ಜನರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಏನನ್ನಾದರೂ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ನೀವು ಸ್ಕ್ರೋಲ್ ಮಾಡಿದಾಗಲೆಲ್ಲಾ, ಪ್ರತಿ ಪೋಸ್ಟ್ ನಂತರ ನೀವು ವಿಭಿನ್ನ ಮತ್ತು ಹೊಸದನ್ನು ನೋಡುತ್ತೀರಿ. ಕೆಲವು ಪೋಸ್ಟ್‌ಗಳು ಫೋಟೋಗಳನ್ನು ಹೊಂದಿರುತ್ತವೆ. ಮತ್ತೆ ಕೆಲವು ಪೋಸ್ಟ್‌ಗಳು ಸ್ಕ್ರೀನ್‌ಶಾಟ್‌ಗಳು ಅಥವಾ ವಿಡಿಯೋಗಳನ್ನು ಹೊಂದಿರುತ್ತವೆ. ಇವೆಲ್ಲವುಗಳಲ್ಲಿ, ಇಂಟರ್ನೆಟ್, ಸಾರ್ವಜನಿಕರ ಗಮನ ಸೆಳೆಯುವ ಕೆಲವು ಇವೆ ಮತ್ತು ಅವು ವೈರಲ್ ಆಗುತ್ತವೆ. ನೀವು ನಿಯಮಿತವಾಗಿ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದರೆ ಅನೇಕ ವೈರಲ್ ಪೋಸ್ಟ್‌ಗಳನ್ನು ನೋಡಿರಬೇಕು. ನಂತರ ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸಿರಬೇಕು. ಇದೀಗ ಒಂದು ವಿಶಿಷ್ಟವಾದ ರಾಜೀನಾಮೆ ಪತ್ರವು ವೈರಲ್ ಆಗುತ್ತಿದೆ. ಅದನ್ನು ನೋಡಿದರೆ ನೀವು ಬಿದ್ದು ಬಿದ್ದು ನಗೋದು ಗ್ಯಾರಂಟಿ. ಹಾಗಾದ್ರೆ ಅದರಲ್ಲಿ ಏನೆಂದು ಬರೆಯಲಾಗಿದೆ ನೋಡೋಣ...

ಇಂತಹ ರಿಸೈನ್ ಲೆಟರ್ ನೋಡಿದ್ರಾ?
ಸಾಮಾನ್ಯವಾಗಿ ಯಾವುದೇ ವ್ಯಕ್ತಿ ಕೆಲಸ ಬಿಟ್ಟಾಗ ರಾಜೀನಾಮೆ ಪತ್ರ ಕೊಡುವುದು ಖಡ್ಡಾಯ. ಕೆಲವೇ ಕೆಲವು ಕಚೇರಿ ಹೊರತುಪಡಿಸಿ ಎಲ್ಲೆಡೆ ರಿಸೈನ್ ಲೆಟರ್ ತೆಗೊಂಡು, ರಿಲೀವಿಂಗ್ ಲೆಟರ್ ಕೊಡುವುದು ರೂಢಿ. ಹಾಗೆ ನೀವು ರಾಜೀನಾಮೆ ಪತ್ರ ಕೊಡುವಾಗ ಕಾರಣವನ್ನು ಕೇಳಲಾಗುತ್ತದೆ. ಕೆಲವರು ವೈಯಕ್ತಿಕ ಬೆಳವಣಿಗೆಗೆ ಕಂಪೆನಿ ಬದಲಾಯಿಸುತ್ತಿರುವುದಾಗಿ ಕಾರಣ ನೀಡುತ್ತಾರೆ. ಮತ್ತೆ ಕೆಲವರು ಬೇರೆ ಏನನ್ನಾದರೂ ಬರೆಯುತ್ತಾರೆ. ಆದರೆ ಈಗ ವೈರಲ್ ಆಗುತ್ತಿರುವ ಫೋಟೋ ಅಥವಾ ರಾಜೀನಾಮೆ ಪತ್ರದಲ್ಲಿ ವ್ಯಕ್ತಿ ಕೊಟ್ಟ ಕಾರಣವೇನು ಗೊತ್ತಾ? 'ಪ್ರಿಯ ಸರ್, ನಾಳೆಯಿಂದ ನಾನು ಕಚೇರಿಗೆ ಬರುವುದಿಲ್ಲ, ನನ್ನ ಕೃಷಿಭೂಮಿಯ ಮೂಲಕ ಹೆದ್ದಾರಿ ನಿರ್ಮಿಸಲಾಗಿದೆ' ಎಂದು ಬರೆಯಲಾಗಿದೆ. ಅಂದರೆ ಹೆದ್ದಾರಿಯನ್ನು ಅವನ ಜಮೀನಿನ ಮೂಲಕ ನಿರ್ಮಿಸಿರುವುದರಿಂದ, ಅವನಿಗೆ ಬಹಳಷ್ಟು ಹಣ ಸಿಕ್ಕಿರಬೇಕು. ಹಾಗಾಗಿ ಈಗ ಅವನು ಯಾವುದೇ ಕೆಲಸ ಮಾಡುವ ಅಗತ್ಯವಿಲ್ಲ. ಇದೆಲ್ಲವನ್ನೂ ತಮಾಷೆಯ ರೀತಿಯಲ್ಲಿ ಬರೆಯಲಾಗಿದೆ. ಆದರೆ ಈ ಲೆಟರ್ ಮಾತ್ರ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಫೋಟೋವನ್ನು @TazaTamacha ಎಂಬ ಖಾತೆಯಿಂದ X ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಫೋಟೋವನ್ನು ಪೋಸ್ಟ್ ಮಾಡುವಾಗ, 'ಇದನ್ನು ಯಾರು ಅರ್ಥಮಾಡಿಕೊಂಡರು?' ಎಂಬ ಶೀರ್ಷಿಕೆ ಸಹ ಕೊಡಲಾಗಿದೆ. ಸುದ್ದಿ ಬರೆಯುವವರೆಗೂ, ಅನೇಕ ಜನರು ಪೋಸ್ಟ್ ಅನ್ನು ನೋಡಿದ್ದಾರೆ. ಫೋಟೋವನ್ನು ನೋಡಿದ ನಂತರ, ವಿಭಿನ್ನ ರೀತಿಯಲ್ಲಿ ಕಾಮೆಂಟ್ ಮಾಡಿ ಬರೆದಿದ್ದಾರೆ "ಅವನು ಶ್ರೀಮಂತನಾಗಿದ್ದಾನೆ, ಅವನಿಗೆ ಕೆಲಸವೇ ಬೇಡ, ಈಗ ಅವನಿಗೆ ಕೋಟಿಗಟ್ಟಲೇ ದುಡ್ಡು ಸಿಗುತ್ತದೆ" ಎಂದೆಲ್ಲಾ ಕಾಮೆಂಟ್ ಮಾಡಿದರೆ, ಮತ್ತೆ ಕೆಲವರು "ನಾನು ಮೇಲ್ ಹಾಕದೆ ಕೆಲಸ ಬಿಡುತ್ತೇನೆ ಸಹೋದರ, ಯಾರ ಭೂಮಿಯಿಂದ ಹೆದ್ದಾರಿ ಬರುತ್ತದೆಯೋ ಅವರೇ ಅದೃಷ್ಟವಂತರು" "ಕೊಟ್ಟರೆ ಈ ರೀತಿ ರಾಜೀನಾಮೆ ಕೊಡಬೇಕು" ಎಂದು ತಿಳಿಸಿದ್ದಾರೆ.

Scroll to load tweet…

ಈತ ರಾಜೀನಾಮೆ ಕೊಟ್ಟದ್ದು ಬೇರೆ ಕಾರಣಕ್ಕೆ!
ಇಂತಹುದೇ ಘಟನೆ ಕಳೆದ ಕೆಲವು ದಿನಗಳ ಹಿಂದೆ ನಡೆದಿತ್ತು. ಆದರೆ ಆತ ರಾಜೀನಾಮೆ ಕೊಟ್ಟಿದ್ದು ಬೇರೆ ಕಾರಣಕ್ಕೆ. ಆದರೆ ಅದು ಕೂಡ ವೈರಲ್ ಆಗಿತ್ತು.

ಮ್ಯಾನೇಜರ್ ಸಭ್ಯವಾಗಿ ಮೆಸೇಜ್ ಮಾಡಿ ಸಂಭಾಷಣೆಯನ್ನು ಪ್ರಾರಂಭಿಸುತ್ತಾನೆ. ಆಗ ಉದ್ಯೋಗಿ ತನ್ನ ಕಾಲು ಮುರಿದುಕೊಂಡಿರುವುದಾಗಿ ಮ್ಯಾನೇಜರ್‌ಗೆ ಹೇಳುತ್ತಾನೆ ಮತ್ತು ಪ್ರಸ್ತುತ ಆಸ್ಪತ್ರೆಯಲ್ಲಿ ಇದ್ದೇನೆ ಎಂದು ಹೇಳುತ್ತಾನೆ. ಆ ಬಗ್ಗೆ ಚಿಂತಿಸುವ ಬದಲು, ಬಾಸ್ ಶುಕ್ರವಾರದೊಳಗೆ ಕೆಲಸಕ್ಕೆ ಮರಳುವಂತೆ ಮನವೊಲಿಸಲು ಪ್ರಯತ್ನಿಸುತ್ತಾನೆ. ಗಾಯಗೊಂಡ ಉದ್ಯೋಗಿ "ವೈದ್ಯರು ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆಂದು" ಹೇಳುತ್ತಾನೆ. ಆದರೆ ಬಾಸ್ ಒತ್ತಾಯಿಸುತ್ತಲೇ ಇರುತ್ತಾನೆ. "ವೈದ್ಯರು ಅನುಮತಿಸಿದರೆ ಖಂಡಿತವಾಗಿಯೂ ಹಿಂತಿರುಗುತ್ತೇನೆ" ಎಂದು ಉದ್ಯೋಗಿ ನಯವಾಗಿ ಉತ್ತರಿಸುತ್ತಾನೆ. ನಂತರ ಬಾಸ್, "ಶುಕ್ರವಾರದ ಶಿಫ್ಟ್‌ಗೆ ನನಗೆ ನೀವು ಬೇಕು, ನೀವು ಬರಲು ಸಾಧ್ಯವಾಗುತ್ತದೆ ಎಂದು ನೀವು ಭಾವಿಸುತ್ತೀರಾ? ನಾನು ನಿಮಗೆ ಕುರ್ಚಿಯನ್ನು ತರಬಲ್ಲೆ" ಎಂದು ಹೇಳುತ್ತಾನೆ. ಎಲ್ಲಾ ಪ್ರಯತ್ನಗಳು ವಿಫಲವಾದಾಗ, ಬಾಸ್ ಉದ್ಯೋಗಿಯನ್ನು ದೂಷಿಸಲು ಪ್ರಯತ್ನಿಸುತ್ತಾನೆ ಮತ್ತು ಎರಡು ವಾರಗಳ ಹಿಂದೆ ಕಂಪನಿಗೆ ಸೇರಿದ ನಂತರ ರಜೆ ತೆಗೆದುಕೊಂಡಿದ್ದಕ್ಕಾಗಿ ಅವನು ಆರೋಪಿಸುತ್ತಾನೆ. ಇದಕ್ಕೆ ಉದ್ಯೋಗಿ "ಆದ್ದರಿಂದ ನಾನು ನಿಮಗೆ ಅದನ್ನು ಇನ್ನಷ್ಟು ಸುಲಭಗೊಳಿಸುತ್ತೇನೆ. ನಾನು ಕೆಲಸ ಬಿಡುತ್ತಿದ್ದೇನೆ" ಎಂದು ಹೇಳುತ್ತಾನೆ.