Man Wears Blinkit Uniform to Friends Haldi Ceremony: ಧ್ರುವ್ ಜೈನ್ ಅರಿಶಿನ ಶಾಸ್ತ್ರಕ್ಕೆ ಬ್ಲಿಂಕಿಟ್‌ನ ಹಳದಿ ಯೂನಿಫಾರ್ಮ್ ಹಾಕಿಕೊಂಡು ಬಂದು ಸಖತ್ ಸದ್ದು ಮಾಡಿದ್ದಾನೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಬ್ಲಿಂಕಿಟ್ ಕೂಡ ಈ ಹುಡುಗನನ್ನ ಹೊಗಳಿ, 'ಬೆಸ್ಟ್ ಔಟ್‌ಫಿಟ್' ಎಂದಿದೆ.

Man Wears Blinkit Uniform to Friends Haldi Ceremony: ಸೋಶಿಯಲ್ ಮೀಡಿಯಾದಲ್ಲಿ ವಿಚಿತ್ರವಾದ ವಿಷಯಗಳು ತಕ್ಷಣ ವೈರಲ್ ಆಗುತ್ತವೆ. ಈ ಬಾರಿ, ಕಂಪನಿಯೊಂದು ಈ ವ್ಯಕ್ತಿಯ ಅಸಾಮಾನ್ಯ ವರ್ತನೆಗೆ ಪ್ರತಿಕ್ರಿಯಿಸಿ ಹೊಗಳಿದೆ. ಇಂಟರ್ನೆಟ್ ಬಳಕೆದಾರರು ಕೂಡ ಈ ಯುವಕನ ಅವತಾರಕ್ಕೆ ಸೂಪರ್ ಅಂತಿದ್ದಾರೆ.

ಒಂದು ಇನ್‌ಸ್ಟಾಗ್ರಾಮ್ ವಿಡಿಯೋ ಇಂಟರ್ನೆಟ್‌ನಲ್ಲಿ ಬಳಕೆದಾರರನ್ನು ಸಖತ್ ಮಜಾ ಕೊಟ್ಟಿದೆ. ಇದರಲ್ಲಿ ಒಬ್ಬ ಯುವಕ ತನ್ನ ಗೆಳೆಯನ ಅರಿಶಿನ ಶಾಸ್ತ್ರಕ್ಕೆ ಬ್ಲಿಂಕಿಟ್ ಡೆಲಿವರಿ ಹುಡುಗರ ಹಳದಿ ಬಣ್ಣದ ಬಟ್ಟೆ ಹಾಕಿಕೊಂಡು ಬಂದಿದ್ದಾನೆ. ಈ ಫ್ಯಾಷನ್ ಆಯ್ಕೆ ತಕ್ಷಣವೇ ಜನರ ಗಮನ ಸೆಳೆದಿದೆ. ಬಳಕೆದಾರರು ಇದಕ್ಕೆ ಭರ್ಜರಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಹಳದಿ ಡ್ರೆಸ್‌ನಿಂದ ಅರಿಶಿನ ಶಾಸ್ತ್ರದಲ್ಲಿ ಸಖತ್ ಹವಾ!

ಇನ್‌ಸ್ಟಾಗ್ರಾಮ್ ಬಳಕೆದಾರ ಧ್ರುವ್ ಜೈನ್ ಶೇರ್ ಮಾಡಿರುವ ಈ ವಿಡಿಯೋ, 'ಅರಿಶಿನ ಶಾಸ್ತ್ರಕ್ಕೆ ಹಳದಿ ಡ್ರೆಸ್ ಹಾಕಬೇಕು ಅಂದ್ರು' ಎಂಬ ಬರಹದೊಂದಿಗೆ ಶುರುವಾಗುತ್ತೆ. ಕೆಲವೇ ಕ್ಷಣಗಳಲ್ಲಿ, ಧ್ರುವ್ ಬ್ಲಿಂಕಿಟ್ ಡೆಲಿವರಿ ಏಜೆಂಟ್‌ನ ಹಳದಿ ಟೀ-ಶರ್ಟ್ ಹಾಕಿಕೊಂಡು ಕಾರ್ಯಕ್ರಮಕ್ಕೆ ಎಂಟ್ರಿ ಕೊಡುತ್ತಾನೆ. ಅಲ್ಲಿ ಉಳಿದ ಅತಿಥಿಗಳು ಸಾಂಪ್ರದಾಯಿಕ ಹಳದಿ ಬಟ್ಟೆಗಳನ್ನು ಧರಿಸಿದ್ದು, ಇದು ಒಂದು ವಿಶಿಷ್ಟವಾದ ಕಾಂಟ್ರಾಸ್ಟ್ ಸೃಷ್ಟಿ ಮಾಡಿದೆ.

ವಿಡಿಯೋದಲ್ಲಿ, ಈ ಯುವಕ ವರ ಮತ್ತು ವಧುವಿಗೆ ಶುಭ ಕೋರುತ್ತಾನೆ. ಆಗ ಅವರಿಬ್ಬರೂ ಒಂದು ಕ್ಷಣ ದಂಗಾಗಿ ಹೋಗುತ್ತಾರೆ. ಕ್ಲಿಪ್‌ನ ಕ್ಯಾಪ್ಶನ್‌ನಲ್ಲಿ, "@letsblinkit ಅರಿಶಿನವನ್ನಾದರೂ ರೆಡಿ ಮಾಡಿ, ನಾನು ಹಳದಿ ಬಟ್ಟೆ ಹಾಕಿದ್ದೀನಿ. ವಿಭೂತಿ ಯದುವಂಶಿ, ನಿನ್ನ ರೂಲ್ಸ್‌ನಿಂದ ಇದೆಲ್ಲಾ ಆಗಿದ್ದು' ಎಂದು ಬರೆಯಲಾಗಿದೆ.

ಪೋಸ್ಟ್‌ಗೆ ಬ್ಲಿಂಕಿಟ್ ಕಾಮೆಂಟ್

ಎಚ್‌ಟಿ ವರದಿಯ ಪ್ರಕಾರ, ಎರಡು ವಾರಗಳ ಹಿಂದೆ ಪೋಸ್ಟ್ ಮಾಡಿದ ಈ ವಿಡಿಯೋವನ್ನು ಇಲ್ಲಿಯವರೆಗೆ 50 ಲಕ್ಷಕ್ಕೂ ಹೆಚ್ಚು ಬಾರಿ ನೋಡಲಾಗಿದೆ. ಸಾಕಷ್ಟು ಪ್ರತಿಕ್ರಿಯೆಗಳ ನಡುವೆ, ಬ್ಲಿಂಕಿಟ್‌ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಿಂದಲೂ ಕಾಮೆಂಟ್ ಬಂದಿದೆ. ಬ್ಲಿಂಕಿಟ್, "ಮತ್ತು ಅತ್ಯುತ್ತಮ ಹಳ್ದಿ ಔಟ್‌ಫಿಟ್ ಪ್ರಶಸ್ತಿ ನಿಮಗೆ ಸಲ್ಲುತ್ತದೆ ಎಂದು ಬರೆದಿದೆ. ಇನ್ನು ಕೆಲವು ಬಳಕೆದಾರರು, ಇದು ಕಂಪನಿಯ ಪ್ರಚಾರದ ವಿಡಿಯೋದಂತೆ ಕಾಣುತ್ತಿದೆ ಎಂದಿದ್ದಾರೆ. ಇನ್ನೂ ಕೆಲವರು ಇದನ್ನು 'ಬೆಸ್ಟ್ ಜುಗಾಡ್' ಎಂದು ಹೊಗಳಿದ್ದಾರೆ.

ಇಲ್ಲಿ ಕ್ಲಿಪ್ ನೋಡಿ:

View post on Instagram