ಸ್ವಾತಂತ್ರ್ಯಕ್ಕಾಗಿ ಅಮೆರಿಕಕ್ಕೆ ತೆರಳಿದ ಭಾರತೀಯ ಮಹಿಳೆಯೊಬ್ಬರ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಹುತೇಕರು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಉದ್ಯೋಗದ ಕಾರಣಕ್ಕೆ ಹೆಚ್ಚು ಹಣ ಮಾಡುವ ಉದ್ದೇಶದಿಂದ ಅಥವಾ ಉನ್ನತ ವ್ಯಾಸಂಗಕ್ಕೆ, ಅಥವಾ ಜೀವನಶೈಲಿಯನ್ನು ಉತ್ತಮಪಡಿಸಿಕೊಳ್ಳುವುದಕ್ಕೆ ಹೋಗುತ್ತಾರೆ. ಆದರೆ ಇಲ್ಲೊಬ್ಬರು ಮಹಿಳೆ ಸ್ವಾತಂತ್ರ್ಯದ ಕಾರಣಕ್ಕೆ ತಾನು ಅಮೆರಿಕಾಗೆ ಹೋಗಿದ್ದು, ಇದರಿಂದ ತನ್ನ ಜೀವ ಹೇಗೆಲ್ಲಾ ಬದಲಾಯಿತು ಎಂದು ಹೇಳಿಕೊಂಡಿದ್ದು, ಅವರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದಿವೈ ಸೈನಿ ಎಂಬುವವರು ಟ್ವಿಟ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, ತಾನು ನಾಲ್ಕು ವರ್ಷಗಳ ಹಿಂದೆ ಅಮೆರಿಕಾಗೆ ಹೋಗಿದ್ದೆ. ಆದರೆ ಹಣದ ಕಾರಣಕ್ಕೆ ಅಲ್ಲ ಕೇವಲ ಸ್ವಾತಂತ್ರ್ಯದ ಕಾರಣಕ್ಕೆ ಆದರೆ ನಾನು ಭಾರತವನ್ನೂ ಈಗಲೂ ಪ್ರೀತಿಸುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ತಮ್ಮ ಈ ಒಂದು ನಿರ್ಧಾರದಿಂದ ತಮ್ಮ ಬದುಕು ಎಷ್ಟೊಂದು ಅದ್ಭುತವಾಗಿ ಬದಲಾಯಿತು ಎಂದು ಅವರು ಹೇಳಿದ್ದಾರೆ.
ತನಗೆ ಭಾರತದಲ್ಲಿ ನಿಜವಾಗಿಯೂ ಸ್ವಾತಂತ್ರವಾಗಿದ್ದೇನೆ ಎಂದು ಅನಿಸಲಿಲ್ಲ, ಭಾರತದಲ್ಲಿ ಒಬ್ಬಳು ಮಹಿಳೆಯಾಗಿ ನನಗೆ ಸ್ವಾತಂತ್ರವಿದೆ ಎಂದು ಅನಿಸುತ್ತಿರಲಿಲ್ಲ. ಅಮೆರಿಕಾದಲ್ಲಿ ವಾಸಿಸಲು ಆರಂಭಿಸಿದಾಗಿನಿಂದ ನನ್ನನ್ನು ನಾನು ಬದಲಿಸಿಕೊಂಡೆ. ನಾನು ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡೆ. ಧೃಡನಿಶ್ಚಯದ ಜೊತೆ ನನ್ನನ್ನೇ ಆಗಿರುವ ಜಗತ್ತನ್ನು ನಾನು ಸೃಷ್ಟಿಸಿಕೊಂಡೆ ಎಂದು ಅವರು ಹೇಳಿದ್ದಾರೆ.
ಈ ಫೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆದ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದ್ದು, ಜನರಿಂದ ಈ ಮಹಿಳೆಯ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ಮಹಿಳೆಯ ನಿರ್ಧಾರವನ್ನು ಒಪ್ಪಿಕೊಂಡರೆ ಮತ್ತೆ ಕೆಲವರು ಆಕೆ ಹೆಚ್ಚಿನ ಹಣ ಮಾಡುವ ಉದ್ದೇಶದಿಂದ ಅಮೆರಿಕಾಗೆ ಹೋಗಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.
ಸರಿಯಾಗಿ 4 ವರ್ಷಗಳ ಹಿಂದೆ, ನಾನು ಅಮೆರಿಕಾಗೆ ಸ್ಥಳಾಂತರಗೊಂಡೆ. ಹಣಕ್ಕಾಗಿ ಅಲ್ಲ, ಸ್ವಾತಂತ್ರ್ಯಕ್ಕಾಗಿ. ನಾನು ಭಾರತವನ್ನು ಪ್ರೀತಿಸುತ್ತೇನೆ, ಆದರೆ ಒಬ್ಬ ಮಹಿಳೆಯಾಗಿ, ನಾನು ಅಲ್ಲಿ ಎಂದಿಗೂ ನಿಜವಾಗಿಯೂ ಸ್ವಾತಂತ್ರ್ಯವನ್ನು ಅನುಭವಿಸಲಿಲ್ಲ. ಮತ್ತು ಅಮೆರಿಕದಲ್ಲಿ ವಾಸಿಸುವುದು ನನ್ನನ್ನು ಬದಲಾಯಿಸಿದೆ. ನಾನು ಹೆಚ್ಚು ಆತ್ಮವಿಶ್ವಾಸ, ದೃಢನಿಶ್ಚಯ ಮತ್ತು ನನ್ನದೇ ಆದದ್ದನ್ನು ನಿರ್ಮಿಸಲು ಹೆದರುವುದಿಲ್ಲ. ಇಲ್ಲಿನ ಗಾಳಿಯಲ್ಲಿ ಏನೋ ಇದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ.
ಇದಕ್ಕೆ ಒಬ್ಬರು ಕಾಮೆಂಟ್ ಮಾಡಿದ್ದು,ನನ್ನ ತಿಳುವಳಿಕೆಯ ಪ್ರಕಾರ, ಭಾರತವನ್ನು ತೊರೆಯುವ ಹೆಚ್ಚಿನ ಜನರು ಉತ್ತಮ ಉದ್ಯೋಗಾವಕಾಶಗಳು, ಸಂಶೋಧನೆ, ಶಿಕ್ಷಣ ಮತ್ತು ಮುಖ್ಯವಾಗಿ ಹೆಚ್ಚಿನ ಹಣವನ್ನು ಗಳಿಸುವ ಸಲುವಾಗಿ ಹೋಗುತ್ತಾರೆ. ವಲಸಿಗರಾಗಿ, ಅದು ಅನೇಕರ ಮುಖ್ಯ ಉದ್ದೇಶವಾಗಿರುತ್ತದೆ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
ನಾನು ಹೇಳಬಹುದಾದ ಕನಿಷ್ಠ ವಿಷಯವೆಂದರೆ ಪ್ರತಿಯೊಂದು ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವುದಾಗಿದೆ. ನಾನು ಕೆಲಸದಲ್ಲಿರುವಾಗ ನನ್ನ ಹೆತ್ತವರು ನನ್ನನ್ನು ಊಟ ಮಾಡಿದ್ಯೋ ಇಲ್ಲವೋ ಎಂದು ಕೇಳುತ್ತಲೇ ಇರುತ್ತಾರೆ ಆದರೆ ನಾನು ದೂರ ಹೋದಾಗ ಅವರ ಆ ಕಾಳಜಿಯನ್ನು ಮಿಸ್ ಮಾಡಿಕೊಳ್ಲುತ್ತೇನೆ. ಆ ಭಾವನೆ ಅದ್ಭುತವಾಗಿರುತ್ತದೆ. ಸ್ವಾತಂತ್ರ್ಯದಲ್ಲಿ ನೀವು ಯಾವ ನಿರ್ದಿಷ್ಟ ವ್ಯತ್ಯಾಸಗಳನ್ನು ಗಮನಿಸಿದ್ದೀರಿ? ಎಂದು ಒಬ್ಬರು ಅವರಿಗೆ ಪ್ರಶ್ನೆ ಮಾಡಿದ್ದಾರೆ.
ನಾನು ಅಮೆರಿಕದಲ್ಲಿದ್ದು ಸುಮಾರು ಒಂದು ವರ್ಷ ಕಳೆದ ನಂತರ ನನಗೆ ಅಲ್ಲಿ ಅದೊಂದು ವಿಭಿನ್ನ ವಾತಾವರಣ, ಪರಿಸರ ಮತ್ತು ಉತ್ಸಾಹ ಅನಿಸಿತು. ಇಷ್ಟೊಂದು ಆತ್ಮವಿಶ್ವಾಸ, ಇಷ್ಟೊಂದು ಧೈರ್ಯ ಮತ್ತು ನನ್ನ ಭಯವನ್ನು ನಿವಾರಿಸಿದ ಅನುಭವ ಎಂದಿಗೂ ಆಗಿಲ್ಲರಲಿಲ್ಲ! ಹುಚ್ಚುತನದ ವಸ್ತುಗಳನ್ನು ನಿರ್ಮಿಸುವ ಅನೇಕ ಹುಚ್ಚು ಜನರನ್ನು ಸಹ ಭೇಟಿಯಾದೆ. ಈಗ ಈ ಅವಕಾಶವನ್ನು ಬಳಸಿಕೊಂಡು ಏನಾದರೂ ಉತ್ತಮವಾದದ್ದನ್ನು ನಿರ್ಮಿಸುತ್ತೇನೆ. ಎಲ್ಲಾ ರೀತಿಯಿಂದಲೂ ಎಂದು ಮತ್ತೊಬ್ಬರು ದಿವ್ಯ ಸೈನಿ ಅವರ ಹೇಳಿಕೆಗೆ ಕಾಮೆಂಟ್ ಮಾಡಿದ್ದಾರೆ.

