Viral post : ಸೋಶಿಯಲ್‌ ಮೀಡಿಯಾದಲ್ಲಿ ಹುಡುಗಿ ಮದುವೆ ಆಗಲಿರುವ ಹುಡುಗ ಹೇಗಿರಬೇಕು ಅಂತ ಪಟ್ಟಿ ಮಾಡಿದ್ದಾಳೆ. ಅವಳ ಡಿಮ್ಯಾಂಡ್‌ ಕೇಳಿ ನೆಟ್ಟಿಗರು ಶಾಕ್‌ ಆಗಿದ್ದಾರೆ. ಇಷ್ಟೊಂದಾ ಅಂಥ ಪ್ರಶ್ನೆ ಮಾಡಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ಮದುವೆಯಾಗುವ ಹುಡುಗ ಮತ್ತು ಹುಡುಗಿ ಬಗ್ಗೆ ಇಬ್ಬರು ಇಟ್ಟಿರುವ ಡಿಮ್ಯಾಂಡ್‌ ವೈರಲ್‌ ಆಗಿದೆ. ಭಾವಿ ಪತಿ ಹಾಗೂ ಪತ್ನಿ ಹೇಗಿರಬೇಕು ಅಂತ ಪೋಸ್ಟ್‌ ಹಂಚಿಕೊಳ್ಳಲಾಗಿದ್ದು, ಇದ್ರ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.

ಹುಡುಗನಿಗಿರ್ಬೇಕು ಈ ಎಲ್ಲ ಅರ್ಹತೆ

ವೇದಿಕಾ ಹೆಸರಿನ ಸೋಶಿಯಲ್‌ ಮೀಡಿಯಾದಲ್ಲಿ ಮದುವೆ ಆಗಲಿರುವ ಹುಡುಗನಿಗಿರಬೇಕಾದ ಅರ್ಹತೆ ಬಗ್ಗೆ ಹುಡುಗಿ ಬರೆದುಕೊಂಡಿದ್ದಾಳೆ. ಮದುವೆಯಾಗಲಿರುವ ಪತಿಗೆ 2 ಲಕ್ಷಕ್ಕಿಂತ ಹೆಚ್ಚು ತಿಂಗಳ ಸಂಬಳ ಬರಬೇಕು. ಹುಡುಗ 6 ಅಡಿ ಎತ್ತರ ಇರಬೇಕು. ನೋಡೋಕೆ ಸುಂದರವಾಗಿರಬೇಕು. 24/7 ಲೈವ್-ಲೊಕೇಶನ್ ಹಂಚಿಕೆ ಮಾಡಬೇಕು. ಯಾವುದೇ ಹುಡುಗಿ ಸ್ನೇಹಿತೆಯರು ಇರ್ಬಾರದು. ಅಲ್ದೆ ಹುಡ್ಗ ವರ್ಜಿನ್‌ ಆಗಿರ್ಬೇಕು. ಅಡುಗೆ ಗೊತ್ತಿರಬೇಕು. ಹಾಗೇ ಸ್ತ್ರೀದ್ವೇಷಿಯಾಗಿರ್ಬಾರದು.

ಇಷ್ಟಕ್ಕೇ ಆಕೆ ಡಿಮ್ಯಾಂಡ್‌ ನಿಂತಿಲ್ಲ. ಹುಡುಗ ಸೋಶಿಯಲ್‌ ಮೀಡಿಯಾ ಬಳಸುವಂತಿಲ್ಲ. ಎಲ್ಲಿಗೆ ಹೋಗೋದಿದ್ರೂ ಅನುಮತಿ ಕೇಳ್ಬೇಕು. ಹೆಂಡ್ತಿಯನ್ನು ಫಾರೆನ್ ಟ್ರಿಪ್‌ ಗೆ ಕರೆದುಕೊಂಡು ಹೋಗ್ಬೇಕು ಅಂತ ಲೀಸ್ಟ್‌ ಹಾಗಿರುವ ಹುಡುಗಿ, ಇಂಥ ಹುಡುಗನನ್ನು ನಾನು ಎಲ್ಲಿ ಹುಡುಕಲಿ ಅಂತ ಪ್ರಶ್ನೆ ಮಾಡಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ಇದಕ್ಕೆ ಸಿಕ್ಕಾಪಟ್ಟೆ ಕಮೆಂಟ್‌ ಬಂದಿದೆ. ಈ ಹುಡುಗನಿಗೆ ನೀವು ರಿಟರ್ನ್‌ ಏನು ಕೊಡ್ತೀರಿ ಅಂತ ಜನ ಕೇಳಿದ್ದಾರೆ. ಅಷ್ಟೇ ಅಲ್ಲ, ನಮಗೂ ಇಂಥಹದ್ದೇ ಹುಡುಗಿ ಬೇಕು ಅಂತ ಕೆಲವರು ಹೇಳಿಕೊಂಡಿದ್ದಾರೆ.

ಹುಡುಗನ ಡಿಮ್ಯಾಂಡ್

ಕೆಲ ದಿನಗಳ ಹಿಂದೆ ಸೋಶಿಯಲ್‌ ಮೀಡಿಯಾದಲ್ಲಿ ಹುಡುಗನ ಡಿಮ್ಯಾಂಡ್ ಕೂಡ ವೈರಲ್‌ ಆಗಿತ್ತು. Xನಲ್ಲಿ @Only_OneRR ಎಂಬ ಖಾತೆಯಿಂದ ಆಗಸ್ಟ್ 3ರಂದು ಪೋಸ್ಟ್ ಹಂಚಿಕೊಳ್ಳಲಾಗಿತ್ತು. ತನ್ನ ಭಾವಿ ಪತ್ನಿ ಹೇಗಿರಬೇಕು ಎಂಬ ದೊಡ್ಡ ಪಟ್ಟಿಯನ್ನೇ ಈ ಯುವಕ ಹಾಕಿದ್ದರು.

ಅವರ ಪ್ರಕಾರ, ಅವರು ಮದುವೆಯಾಗುವ ಹುಡುಗಿ ಕನ್ಯೆಯಾಗಿರಬೇಕು. ಯಾವುದೇ ಮೇಕಪ್ ಬಳಸದೇ ಸಹಜವಾಗಿ ಸುಂದರವಾಗಿರಬೇಕು. 5 ಅಡಿ 2 ಇಂಚು ಎತ್ತರ ಮತ್ತು ನಿಖರವಾಗಿ 45 ಕೆಜಿ ತೂಕ ಹೊಂದಿರಬೇಕು. ಅಷ್ಟೇ ಅಲ್ಲ, ಎಲ್ಲಾ ರೀತಿಯ ಅಡುಗೆ ಮಾಡುವುದು ಗೊತ್ತಿರಬೇಕು, ಯಾವುದೇ ಪುರುಷ ಸ್ನೇಹಿತರನ್ನು ಹೊಂದಿರಬಾರದು ಎಂದು ಆತ ಹೇಳಿಕೊಂಡಿದ್ದ. ತನ್ನ ಪೋಷಕರನ್ನು ಕೂಡ ಪತ್ನಿ ತನ್ನ ಸ್ವಂತ ಪೋಷಕರಂತೆ ನೋಡಿಕೊಳ್ಳಬೇಕು ಎಂಬುದು ಆತನ ಮತ್ತೊಂದು ನಿರೀಕ್ಷೆ.

ಈ ಪೋಸ್ಟ್ ಕೂಡ ವೈರಲ್ ಆಗುತ್ತಿದ್ದಂತೆ ಚರ್ಚೆ ಶುರುವಾಗಿತ್ತು. ಕೆಲವರು, ಪ್ರತಿಯೊಬ್ಬರಿಗೂ ತಮ್ಮದೇ ಆದ ಮದುವೆಯ ನಿರೀಕ್ಷೆಗಳನ್ನು ಇಟ್ಟುಕೊಳ್ಳುವ ಹಕ್ಕಿದೆ ಎಂದು ಹೇಳಿದ್ದರು. ಆದರೆ ಬಹುತೇಕರು ಈ ಷರತ್ತುಗಳನ್ನು ಟೀಕಿಸಿದ್ದರು.