ಲಾಟರಿ ಟಿಕೆಟ್ ವ್ಯರ್ಥವಾಯಿತು ಎಂದು ಮಹಿಳೆ ಕಸದ ಲಾರಿಗೆ ಎಸೆದಿದ್ದಾರೆ. ಆದರೆ ಅದೇ ಟಿಕೆಟ್‌ಗೆ 11 ಕೋಟಿ ರೂಪಾಯಿ ಜಾಕ್‌ಪಾಟ್ ಹೊಡೆದಿತ್ತು. ಈ ಟಿಕೆಟ್ ಪೌರ ಕಾರ್ಮಿಕರಿಗೆ ಸಿಕ್ಕಿದೆ. ಕೊನೆಗೆ ಟಿಕೆಟ್ ಹಣ ಯಾರ ಖಾತೆಗೆ ಜಮೆ ಆಗಿದೆ?

ಲಾಟರಿ ಟಿಕೆಟ್ ಮೂಲಕ ಹಲವರು ಅದೃಷ್ಠ ಪರೀಕ್ಷೆ ಮಾಡುತ್ತಾರೆ. ಕೆಲವೇ ಕೆಲವು ಮಂದಿಗೆ ಜಾಕ್‌ಪಾಟ್ ಹೊಡೆಯುತ್ತದೆ. ಹೀಗಾಗಿ ಬಂದರೆ ಕೋಟಿ ಎಂದು ಹಲವರು ಲಾಟರಿ ಟಿಕೆಟ್ ಖರೀದಿಸುತ್ತಾರೆ. ಹೀಗೆ ಮಹಿಳೆಯೊಬ್ಬರು ಲಾಟರಿ ಟಿಕೆಟ್ ಖರೀದಿಸಿದ್ದಾರೆ. ತನ್ನ ಕಷ್ಟಗಳಿಗೆ ದೇವರು ಭರ್ಜರಿ ಗಿಫ್ಟ್ ಕೊಡುತ್ತಾನೆ ಅನ್ನೋ ವಿಶ್ವಾಸದಲ್ಲಿ ಟಿಕೆಟ್ ಖರೀದಿಸಿದ್ದಾರೆ. ಲಾಟರಿ ಫಲಿತಾಂಶ ನೋಡಿದಾಗ ಬೇಸರವಾಗಿದೆ. ತನ್ನ ಟಿಕೆಟ್‌ಗೆ ಜಾಕ್‌ಪಾಟ್ ಬಂದಿಲ್ಲ ಎಂದು ಮನೆಯಲ್ಲಿದ್ದ ಲಾಟರಿ ಟಿಕೆಟ್‌ನ್ನು ಕಸದ ಜೊತೆ ಪೌರಕಾರ್ಮಿಕರ ಲಾರಿಗೆ ಎಸೆದಿದ್ದಾಳೆ. ವಿಶೇಷ ಅಂದರೆ ಮಹಿಳೆ ತನ್ನ ನಂಬರ್ ತಪ್ಪಾಗಿ ಪರಿಶೀಲಿಸಿದ್ದಾಳೆ. ಅಸಲಿಗೆ ಮಹಿಳೆ ಟಿಕೆಟ್‌ಗೆ 11 ಕೋಟಿ ರೂಪಾಯಿ ಜಾಕ್‌ಪಾಟ್ ಹೊಡೆದಿತ್ತು. ಅಷ್ಟರಲ್ಲಿ ಈ ಟಿಕೆಟ್ ಕಸದ ಲಾರಿ ಸೇರಿಕೊಂಡಾಗಿತ್ತು. ಇತ್ತ ಪೌರ ಕಾರ್ಮಿಕರ ಕೈಗೆ ಟಿಕೆಟ್ ಸಿಕ್ಕಿದೆ. ಇಲ್ಲಿಂದ ಲಾಟರಿ ಜಾಕ್‌ಪಾಟ್ ರೋಚಕ ತಿರುವು ಪಡೆದುಕೊಂಡಿದೆ.

ನಿರಾಸೆ ಗೊಂಡಿದ್ದ ಮಹಿಳೆ

ಇಟಲಿ ಮಹಿಳೆ ಇನ್‌ಸ್ಟೆಂಟ್ ವಿನ್ ಲಾಟರಿ ಟಿಕೆಟ್ ಖರೀದಿಸಿದ್ದಾಳೆ. 1 ಮಿಲಿಯನ್ ಯೂರೋ ಬಹುಮಾನದ ಅಂದರೆ ಸುಮಾರು 11 ಕೋಟಿ ರೂಪಾಯಿ ಬಹುಮಾನದ ಟಿಕೆಟ್ ಇದಾಗಿತ್ತು. ಟಿಕೆಟ್ ಖರೀದಿಸಿ ಮನೆಯಲ್ಲಿ ಇಟ್ಟಿದ್ದಾಳೆ. ಬಳಿಕ ಎಂದಿನಂತೆ ತನ್ನ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಲಾಟರಿಯ ಒಂದು ಫೋಟವನ್ನು ತಮ್ಮ ಮೊಬೈಲ್‌ನಲ್ಲಿ ಇಟ್ಟುಕೊಂಡಿದ್ದಾರೆ. ಫಲಿತಾಂಶದ ದಿನ ಕುತೂಹಲದಿಂದ ಪರಿಶೀಲಿಸಿದ್ದಾರೆ. ಆದರೆ ತಮ್ಮ ಲಾಟರಿ ಟಿಕೆಟ್ ನಂಬರ್ ತಪ್ಪಾಗಿ ಗ್ರಹಿಸಿ ಚೆಕ್ ಮಾಡಿದ್ದಾರೆ. ನನ್ನ ಲಾಟರಿ ಟಿಕೆಟ್‌ಗೆ ಬಹುಮಾನ ಬಂದಿಲ್ಲ ಎಂದು ನಿರಾಸೆಗೊಂಡಿದ್ದಾಳೆ.

ಕಸದ ಲಾರಿಗೆ ಟಿಕೆಟ್ ಎಸೆದ ಮಹಿಳೆ

ಮರು ದಿನ ಬೆಳಗ್ಗೆ ಕಸದ ಲಾರಿ ಬಂದಾಗ ಮನೆಯ ಕಸದ ಜೊತೆ ಲಾಟರಿ ಟಿಕೆಟ್, ಖರೀದಿ ಸ್ಲಿಪ್ ಸೇರಿದಂತೆ ಎಲ್ಲವನ್ನೂ ಎಸೆಯಲಾಗಿದೆ. ಆದರೆ ಸಂಜೆಯಾಗುತ್ತಿದ್ದಂತೆ ಮಹಿಳೆ ಲಾಟರಿ ಟಿಕೆಟ್ ಖರೀದಿಸಿದ ಎಜೆಂಟ್ ಮಾರಾಟ ಮಾಡಿದ ಒಂದು ಟಿಕೆಟ್‌ಗೆ ಜಾಕ್‌ಪಾಟ್ ಹೊಡೆದಿದೆ ಅನ್ನೋದು ಗೊತ್ತಾಗಿದೆ. ಆದರೂ ಮಹಿಳೆ ಗಂಭೀರವಾಗಿ ಪರಿಗಣಿಸಲಿಲ್ಲ. ಲಾಟರಿ ಫಲಿತಾಂಶ ಮೊಬೈಲ್‌ಗೆ ಬಂದಿದೆ. ಈ ವೇಳೆ ತನ್ನ ಮೊಬೈಲ್‌ನಲ್ಲಿ ತೆಗೆದ ಲಾಟರಿ ಫೋಟೋವನ್ನು ಚೆಕ್ ಮಾಡಿದ್ದಾರೆ. ಈ ವೇಳೆ ತನ್ನ ಲಾಟರಿ ಟಿಕೆಟ್‌ಗೆ ಬರೋಬ್ಬರಿ 11 ಕೋಟಿ ರೂಪಾಯಿ ಬಂದಿರುವುದು ಗೊತ್ತಾಗಿದೆ. ಆದರೆ ತನ್ನ ಲಾಟರಿ ಟಿಕೆಟ್ ಕಸದ ಲಾರಿಗೆ ಎಸೆದಾಗಿತ್ತು.

ತನ್ನ ಮನೆ ಸೇರಿದಂತೆ ಇಡೀ ಪ್ರದೇಶದ ಕಸ ಸಂಗ್ರಹ ಮಾಡಿದ ಪೌರ ಕಾರ್ಮಿಕರು ವಿಲೇವಾರಿ ಘಟ ತಲುಪಿದ್ದರು. ತನ್ನ ತಪ್ಪಿನಿಂದ 11 ಕೋಟಿ ರೂಪಾಯಿ ಕಣ್ಣೆದೆರು ಮಣ್ಣಾಯಿತು ಎಂದು ಕೊರಗಿದ್ದಾಳೆ. ಕೊನೆಗೆ ಒಂದು ಪ್ರಯತ್ನ ಮಾಡಿದ್ದಾಳೆ, ತ್ಯಾಜ್ಯ ನಿರ್ವಹಣಾ ಘಚಕಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ಹೇಗಾದರೂ ಮಾಡಿ ತನ್ನ ಲಾಟರಿ ಟಿಕೆಟ್ ಹುಡುಕಿ ಕೊಡಿ ಎಂದು ಮನವಿ ಮಾಡಿದ್ದಾಳೆ.

ತಾಜ್ಯ ನಿರ್ವಹಣಾ ಸಿಬ್ಬಂದಿಗಳು ವಲಯದ ಪೌರ ಕಾರ್ಮಿಕರಿಗೆ ಸೂಚನೆ ನೀಡಿದ್ದಾರೆ. ಸೂಚನೆ ಸಿಕ್ಕ ಬೆನ್ನಲ್ಲೇ ಪೌರ ಕಾರ್ಮಿಕರು ತಾವು ಸಂಗ್ರಹಿಸಿ ಮಹಿಳೆ ಹಾಗೂ ಇಡಿ ಏರಿಯಾ ಹಸಿ ಕಸಗಳನ್ನು ಪರಿಶೀಲನೆ ಆರಂಭಿಸಿದ್ದಾರೆ. ಒಂದೊಂದೆ ಕಸಗಳನ್ನು ಪತ್ಯೇಕಿಸಿ ಪರಿಶೀಲನೆ ಆರಂಭಿಸಿದ್ದಾರೆ. ತೀವ್ರ ದುರ್ನಾತದ ನಡುವೆ ಪೌರ ಕಾರ್ಮಿಕರು ನಿರಂತರ ಪ್ರಯತ್ನದ ಫಲವಾಗಿ 11 ಕೋಟಿ ಜಾಕ್‌ಪಾಟ್ ಲಾಟರಿ ಟಿಕೆಟ್ ಸಿಕ್ಕಿದೆ.

ಮಹಿಳೆಗೆ ಟಿಕೆಟ್ ಮರಳಿದ ಪೌರ ಕಾರ್ಮಿಕರು

ಟಿಕೆಟ್ ಪತ್ತೆ ಹಚ್ಚಿದ ಪೌರ ಕಾರ್ಮಿಕರ ಮುಖದಲ್ಲಿ ಸಂತಸ ಮೂಡಿತ್ತು. ತಮ್ಮ ಪ್ರಯತ್ನಕ್ಕೆ ಫಲ ಸಿಕ್ಕಿತು ಎಂದಿದ್ದಾರೆ. ಬಳಿಕ ಲಾಟರಿ ಟಿಕೆಟ್‌ನ್ನು ಮಹಿಳೆಗೆ ಹಸ್ತಾಂತರಿಸಿದ್ದಾರೆ. ವಿಶೇಷ ಅಂದೆರೆ ಯಾವುದೇ ಪ್ರತಿಫಲ ಅಪೇಕ್ಷಿಸದೆ ಪೌರ ಕಾರ್ಮಿಕರು ಲಾಟರಿ ಟಿಕೆಟ್ ಪತ್ತೆ ಹಚ್ಚಿ ನೀಡಿದ್ದಾರೆ. ಪೌರಕಾರ್ಮಿಕರ ಶ್ರಮಕ್ಕೆ ಮಹಿಳೆ ಭಾವುಕರಾಗಿದ್ದಾರೆ.