ಬಡ ಡೆಲಿವರಿ ಬಾಯ್ ಒಬ್ಬ ಮೂರು ತಿಂಗಳ ಕೂಡಿಟ್ಟು ಅಮ್ಮನ ಆಸೆಯನ್ನು ಈಡೇರಿಸಿದ್ದಾನೆ. ಮಗ ಮನೆಗೆ ಕಷ್ಟಪಟ್ಟು ಟಿವಿ ತರುತ್ತಿದ್ದಂತೆಯೇ ತಾಯಿಯ ಕಣ್ಣಂಚಿನಿಂದ ಆನಂದಬಾಷ್ಪ ಜಾರಿದೆ. ಈ ಕುರಿತ ಹಾರ್ಟ್ ಟಚಿಂಗ್ ಸ್ಟೋರಿ ಇಲ್ಲಿದೆ.
ಕೋಲ್ಕತ್ತಾ: ತಾಯಿಯ ಪ್ರೀತಿ ಮತ್ತು ತ್ಯಾಗಕ್ಕೆ ಬೆಲೆ ಕಟ್ಟಲು ಯಾವತ್ತೂ ಸಾಧ್ಯವಿಲ್ಲ. ತಾಯಿಯ ಮಡಿಲಲ್ಲಿ ಬೆಳೆದ ಮಗನಿಗೆ, ಅವಳೇ ಮೊದಲ ಗುರು ಮತ್ತು ನಿಸ್ವಾರ್ಥ ಪ್ರೀತಿಯ ಪ್ರತಿರೂಪ. ತನ್ನೆಲ್ಲಾ ನೋವುಗಳನ್ನು ಮರೆತು, ಮಕ್ಕಳ ನಗುವಿನಲ್ಲೇ ತನ್ನ ಇಡೀ ಜಗತ್ತನ್ನು ಕಾಣುವ ತ್ಯಾಗಮಯಿ ಅವಳು.
ಮಕ್ಕಳನ್ನ ಸಾಕಲು ತ್ಯಾಗದ ಜೊತೆ ಸಂಕಷ್ಟಗಳನ್ನು ಹೊತ್ತು ಮಹಾತಾಯಿ ದೊಡ್ಡವಳನ್ನಾಗಿ ಮಾಡುತ್ತಾಳೆ. ಮಕ್ಕಳು ಬೆಳೆದು ದೊಡ್ಡವರಾಗುತ್ತಿದ್ದಂತೆಯೇ ಕೈತುತ್ತು ಕೊಟ್ಟ ಅಮ್ಮನ ಮರೆಯುವರೇ ಹೆಚ್ಚು. ಆಕೆಯ ಸಣ್ಣಪುಟ್ಟ ಆಸೆಗಳನ್ನೂ ಈಡೇರಿಸಲು ಆಗದ ಅನೇಕ ಮಕ್ಕಳಿದ್ದಾರೆ. ಇರೋದ್ರೊಲ್ಲೆ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುವ ಮಕ್ಕಳು ತುಂಬಾನೇ ಕಡಿಮೆ. ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದು ವೈರಲ್ ಆಗ್ತಿದೆ.
ಅಮ್ಮ ಕನಸು ಕಂಡಿರುತ್ತಾಳೆ
ಅದು ಡೆಲಿವರಿ ಬಾಯ್ ಒಬ್ಬ ಮೂರು ತಿಂಗಳ ಸತತವಾಗಿ ದುಡಿದು ಹಣವನ್ನೆಲ್ಲ ಕೂಡಿಟ್ಟು ಅಮ್ಮನ ಆಸೆಯನ್ನು ಈಡೇರಿಸಿದ್ದಾನೆ. ಪಶ್ಚಿಮ ಬಂಗಾಳದ ಸಿಲಿಗುರಿಯ ಉದಯ್ ಹಾಲ್ದರ್ ಎಂಬ ಯುವಕ. ಕಿತ್ತು ತಿನ್ನುವ ಬಡತನ. ಹೊಟ್ಟೆಗೆ ಅನ್ನಬೇಕು ಅಂದರೆ ಕೆಲಸ ಮಾಡಲೇಬೇಕು. ಅದಕ್ಕಾಗಿ ಆತ ಆರಿಸಿಕೊಂಡಿದ್ದು ಫುಡ್ ಡೆಲಿವರಿ ಕೆಲಸ.
ಈ ಉದಯ್ಗೆ ಅಮ್ಮ ಇದ್ದಾಳೆ. ಅಮ್ಮನಿಗೆ ಕನಸು ಒಂದು ಇತ್ತು. ಮನೆಯಲ್ಲಿ ಟಿವಿ ಬೇಕು ಅನ್ನೋದು. ಆದರೆ ಟಿವಿ ಖರೀದಿಸಲು ಹಣ ಇರಲಿಲ್ಲ. ಹೀಗಾಗಿ ಸಂಜೆ ಟೈಮ್ನಲ್ಲಿ ಟಿವಿ ನೋಡುವ ಮನಸ್ಸಾಗಿ ಆಕೆ ಅಕ್ಕ-ಪಕ್ಕದ ಮನೆಗೆ ಹೋಗುತ್ತಿದ್ದಳು. ನಿತ್ಯವೂ ಇನ್ನೊಬ್ಬರ ಮನೆಗೆ ಟಿವಿ ನೋಡಲು ಹೋಗೋದು ಉದಯ್ಗೆ ಇಷ್ಟ ಇರಲಿಲ್ಲ.
ಅದಕ್ಕೆ ಉದಯ್ ಹೇಗಾದರೂ ಮಾಡಿ ಅಮ್ಮನಿಗೆ ಒಂದು ಟಿವಿ ಕೊಡಿಸೋಣ ಅಂತ ನಿರ್ಧರಿಸಿದ. ಅದಕ್ಕಾಗಿ ಉದಯ್ ದಿನವಿಡಿ ದುಡಿಯುತ್ತಿದ್ದ ಇನ್ನೂರಿಂದ ಮುನ್ನೂರು ರೂಪಾಯಿ ಹಣವನ್ನು ಉಳಿಸುತ್ತ ಹೋದ. ಕೊನೆಗೆ ಮೂರು ತಿಂಗಳ ಬಳಿಕ ಟಿವಿ ಅಂಗಡಿ ಹೋಗಿ ಒಂದು ಸ್ಮಾರ್ಟ್ ಟಿವಿ ಖರೀದಿಸಿದ್ದಾನೆ. ಟಿವಿಯನ್ನು ತಂದು ಮನೆಯಲ್ಲಿ ಹಾಕಿದ್ದಾನೆ. ಆ ಮೂಲಕ ಉದಯ್ ತನ್ನ ಅಮ್ಮನ ಆಸೆಯನ್ನ ಈಡೇರಿಸಿದ್ದಾನೆ.
ಮಗ ಟಿವಿಯನ್ನು ಮನೆಗೆ ತರುತ್ತಿದ್ದಂತೆಯೇ ಸಂತೋಷಗೊಂಡಿದ್ದಾಳೆ. ಆಕೆಯ ನುಗುವಿನ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಮನೆಗೆ ಟಿಟಿ ಬರುತ್ತಿದ್ದಂತೆಯೆ ತಾಯಿ ಹಾಗೂ ಆತನ ಅಜ್ಜಿ ಖುಷಿ ತಡೆಯಲಾಗದೇ ಕಣ್ಣೀರು ಇಟ್ಟಿದ್ದಾರೆ. ಈ ಸುಂದರ ಕ್ಷಣದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಉದಯ್ ಅವರ ಪ್ರೀತಿ ಮತ್ತು ಪರಿಶ್ರಮವನ್ನು ಮೆಚ್ಚಿ ಹೊಗಳುತ್ತಿದ್ದಾರೆ.
ಮಗ ಎಷ್ಟೇ ಎತ್ತರಕ್ಕೆ ಬೆಳೆದು ದೊಡ್ಡವನಾದರೂ, ಅವನ ಮನಸ್ಸಿನ ಮೌನವನ್ನು ಓದಬಲ್ಲ ಏಕೈಕ ಹೃದಯ ಅಮ್ಮನದ್ದು. ಬದುಕಿನ ಕಷ್ಟದ ಹಾದಿಯಲ್ಲಿ ಇಡೀ ಜಗತ್ತೇ ದೂರವಾದರೂ, ನೆರಳಿನಂತೆ ಜೊತೆ ನಿಲ್ಲುವ ಮೊದಲ ಶಕ್ತಿ ಅವಳೇ. ತಾಯಿ ಮತ್ತು ಮಗನ ಸಂಬಂಧವೆಂದರೆ ಯಾವುದೇ ನಿರೀಕ್ಷೆಗಳಿಲ್ಲದ, ಪದಗಳಿಗೆ ನಿಲುಕದ ಅಮರ ಅನುಬಂಧ. ತಾಯಿಯ ಮುಖದಲ್ಲಿ ನಗು ತರಿಸಲು ಮಗನ ಪ್ರೀತಿಗಿಂತ ದೊಡ್ಡ ಉಡುಗೊರೆ ಇನ್ನೊಂದಿಲ್ಲ.
















