ನಿಧಿ ಸಿಂಗ್ ಎಂಬ ಯುವತಿ ತನ್ನ ಪೋಷಕರನ್ನು ಮೊದಲ ಬಾರಿಗೆ ವಿಮಾನದಲ್ಲಿ ಕರೆದೊಯ್ಯಲು 21 ವರ್ಷಗಳ ಕಾಲ ಕಾದಿದ್ದಳು. ಈ ಕುರಿತು ಆಕೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಹೃದಯಸ್ಪರ್ಶಿ ವಿಡಿಯೋ ಇದೀಗ ವೈರಲ್ ಆಗಿದೆ. ಅಪ್ಪ-ಅಮ್ಮನ ಕನಸು ನನಸು ಮಾಡಿದ ಈ ವಿಡಿಯೋ ನೆಟ್ಟಿಗರ ಕಣ್ಣಂಚು ಒದ್ದೆಯಾಗುವಂತೆ ಮಾಡಿದೆ.

ವಿಮಾನ ಪ್ರಯಾಣ ಅನ್ನೋದು ಹಲವರಿಗೆ ಸಾಮಾನ್ಯ ವಿಷಯ. ಆದ್ರೆ, ಎಲ್ಲರಿಗೂ ಇದು ಸುಲಭವಾಗಿ ಸಿಗಲ್ಲ, ಅದರಲ್ಲೂ ಸಾಮಾನ್ಯ ವರ್ಗದ ಜನರಿಗೆ ಇದೊಂದು ದೊಡ್ಡ ಕನಸು. ಇದೀಗ, ತನ್ನ ಅಪ್ಪ-ಅಮ್ಮನನ್ನು ಮೊದಲ ಬಾರಿಗೆ ವಿಮಾನದಲ್ಲಿ ಕರೆದೊಯ್ಯಲು ಬರೋಬ್ಬರಿ 21 ವರ್ಷ ಕಾದ ಯುವತಿಯೊಬ್ಬಳ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ನಿಧಿ ಸಿಂಗ್ ಅನ್ನೋ ಯುವತಿ ಇನ್‌ಸ್ಟಾಗ್ರಾಮ್‌ನಲ್ಲಿ ಈ ಹೃದಯಸ್ಪರ್ಶಿ ವಿಡಿಯೋ ಹಂಚಿಕೊಂಡಿದ್ದಾರೆ.

ಜೀವನದಲ್ಲಿ ಕೆಲವು ಘಟನೆಗಳು ಆಕಸ್ಮಿಕವಾಗಿ ನಡೆದುಹೋಗ್ತವೆ. ಆದ್ರೆ, ಇನ್ನು ಕೆಲವು ಕನಸುಗಳು ನನಸಾಗಲು ವರ್ಷಗಳೇ ಬೇಕಾಗುತ್ತೆ. ನಿಧಿ ಸಿಂಗ್ ಕೂಡ ತನ್ನ ಪೋಷಕರ ಜೊತೆ ಇಂಥದ್ದೇ ಒಂದು ಸುಂದರ ಜರ್ನಿ ಮಾಡಿದ್ದಾರೆ.

ಈ ದಿನಕ್ಕಾಗಿ ನಾನು 21 ವರ್ಷ ಕಾದಿದ್ದೆ

'ಈ ದಿನಕ್ಕಾಗಿ ನಾನು 21 ವರ್ಷ ಕಾದಿದ್ದೆ' ಅನ್ನೋ ಕ್ಯಾಪ್ಷನ್ ಜೊತೆ ನಿಧಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ನಾವು ಬೆಳೆಯುವಾಗ ಅಪ್ಪ-ಅಮ್ಮ ಹೇಗೆ ನಮ್ಮ ಕೈಹಿಡಿದು ನಡೆಯೋದನ್ನ ಕಲಿಸಿದ್ರು ಅನ್ನೋದನ್ನ ಅವರು ನೆನಪಿಸಿಕೊಂಡಿದ್ದಾರೆ. 'ಅಂದು ಅವರು ನಮಗೆ ನಡೆಯೋದನ್ನ ಕಲಿಸಿದ್ರು, ಇಂದು ಅವ್ರನ್ನ ಹಾರುವಂತೆ ಮಾಡೋದು ನಮ್ಮ ಕರ್ತವ್ಯ' ಅಂತ ಅವರು ಬರೆದುಕೊಂಡಿದ್ದಾರೆ.

ನಿಧಿ ಅವರ ಈ ಪೋಸ್ಟ್‌ಗೆ ನೆಟ್ಟಿಗರು ಭರ್ಜರಿ ಕಮೆಂಟ್ಸ್ ಮಾಡ್ತಿದ್ದಾರೆ. 'ಇದೊಂದು ಹೆಮ್ಮೆಯ ಕ್ಷಣ' ಅಂತ ಒಬ್ಬರು ಕಮೆಂಟ್ ಮಾಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಈ ಪೋಸ್ಟ್ ವೀಕ್ಷಿಸಿ

View post on Instagram
 

'ಎಲ್ಲರ ಜೀವನದಲ್ಲೂ ಇಂಥದ್ದೊಂದು ಅದ್ಭುತ ಕ್ಷಣ ಬರಲಿ ಅಂತ ನಾನು ಆಶಿಸ್ತೀನಿ' ಅಂತ ಮತ್ತೊಬ್ಬರು ಹಾರೈಸಿದ್ದಾರೆ. 'ತುಂಬಾ ಭಾವುಕ ಕ್ಷಣವಿದು' ಅಂತ ಹಲವರು ಹೇಳಿದ್ದಾರೆ. ಅಪ್ಪ-ಅಮ್ಮನ ಖುಷಿಗಾಗಿ ವರ್ಷಗಟ್ಟಲೆ ಕಷ್ಟಪಟ್ಟು ಕನಸು ನನಸು ಮಾಡಿದ ನಿಧಿ ಸಿಂಗ್ ಅವರ ಈ ವಿಡಿಯೋ, ಈಗ ಹಲವರ ಕಣ್ಣಂಚು ಒದ್ದೆಯಾಗುವಂತೆ ಮಾಡಿದೆ.