Gen Z Slang: ಸಾಮಾಜಿಕ ಮಾಧ್ಯಮದಲ್ಲಿ "Delulu", "No Cap" ಮತ್ತು "Situationship" ನಂತಹ ಪದಗಳನ್ನು ನೀವು ಸಾಮಾನ್ಯವಾಗಿ ಕೇಳಿರುತ್ತೀರಿ. ಇದೇನಪ್ಪಾ ಹೊಸ ಪದ ಎಂದು ತಲೆ ಚಚ್ಚಿಕೊಂಡಿರುತ್ತೀರಿ. Gen-Z ಗಳು ಮಾತು ಮಾತಿಗೂ ಬಳಸುವ 7 ಹೊಸ ಮತ್ತು ಟ್ರೆಂಡಿ ಪದಗಳು ಮತ್ತು ಅದರ ನಿಜವಾದ ಅರ್ಥ ಏನು ಅನ್ನೋದನ್ನು ತಿಳಿಸಿದ್ದೀವಿ ನೋಡಿ.

Gen-Z ಮಾತನಾಡುವ ಪದಗಳ ನಿಜವಾದ ಅರ್ಥ

Gen-Z ಗಳು ಮಾತನಾಡುವಾಗ, ಅವರು ಬಳಸುವಂತಹ ಶಬ್ಧಗಳು ಮಿಲೇನಿಯಲ್ ಗಳ ತಲೆ ಮೇಲಿಂದಾನೆ ಹೊಗುತ್ತದೆ! ಸಾಮಾಜಿಕ ಮಾಧ್ಯಮ, ರೀಲ್‌ಗಳು ಮತ್ತು ಪಾಪ್ ಸಂಸ್ಕೃತಿಯ ಜಗತ್ತಿನಲ್ಲಿ ಪ್ರತಿದಿನ ಹೊಸ ಪದಗಳು ಮತ್ತು ನುಡಿಗಟ್ಟುಗಳು ಹುಟ್ಟುತ್ತವೆ. ಆನ್‌ಲೈನ್‌ನಲ್ಲಿ ರೀಲ್‌ಗಳನ್ನು ವೀಕ್ಷಿಸುವಾಗ ನೀವು ಇದ್ದಕ್ಕಿದ್ದಂತೆ ವಿಚಿತ್ರ ಪದವನ್ನು ಕಂಡು ಏನಪ್ಪಾ ಇದರ ಅರ್ಥ ಎಂದು ಯೋಚಿಸುತ್ತಿದ್ದರೆ, ನಿಮ್ಮ ಜೊತೆ ಹಲವರು ಇದೇ ರೀತಿ ಯೋಚನೆ ಮಾಡುತ್ತಿದ್ದಾರೆ. ಇಲ್ಲಿದೆ Gen-Zಗಳು ಹೆಚ್ಚಾಗಿ ಉಪಾಯೋಗಿಸುವ ಪದಗಳು ಮತ್ತು ಅದರ ಅರ್ಥ.

Main Character Energy

ಅರ್ಥ: ಒಬ್ಬ ವ್ಯಕ್ತಿಯು ಸಿನಿಮಾದ ನಾಯಕ ಅಥವಾ ನಾಯಕಿಯಂತೆ ಆತ್ಮವಿಶ್ವಾಸ ಮತ್ತು ಸ್ಟೈಲ್ ಆಗಿ ತಮ್ಮ ಜೀವನವನ್ನು ನಡೆಸುತ್ತಿದ್ದರೆ, ಅವರನ್ನು "Main Character Energy" ಎಂದು ಕರೆಯಲಾಗುತ್ತದೆ.

Living Rent-Free in My Head

ಅರ್ಥ: ಯಾವುದೋ ಒಂದು ಹಾಡು, ಮೀಮ್ ಅಥವಾ ಒಬ್ಬ ವ್ಯಕ್ತಿ ನಿಮ್ಮ ಮನಸ್ಸಿನಲ್ಲಿ ಸದಾ ಕಾಣಿಸಿಕೊಳ್ಳುತ್ತಿದ್ದರೆ ಮತ್ತು ನೀವು ಅದನ್ನು ಮರೆಯಲು ಬಯಸಿದ್ದರೂ ಸಹ, ಮರೆಯಲು ಸಾಧ್ಯವಾಗದಿದ್ದಾಗ ಈ ಪದ ಬಳಸಲಾಗುತ್ತದೆ. ಅಂದರೆ ಅದು ಯಾವುದೇ ಬಾಡಿಗೆಯನ್ನು ಪಾವತಿಸದೆ ನಿಮ್ಮ ತಲೆಯಲ್ಲಿ ವಾಸಿಸುತ್ತಿದೆ ಎಂದರ್ಥ!

Delulu is the Solulu

ಅರ್ಥ: ಈ ನುಡಿಗಟ್ಟು "ಡೆಲುಷನಲ್ ಈಸ್ ದಿ ಸೊಲ್ಯೂಷನ್" ನಿಂದ ಬಂದಿದೆ. ಇದು ಕೆಲವೊಮ್ಮೆ ಸ್ವಲ್ಪ ಅತಿಯಾಗಿ ಆಶಾವಾದಿಯಾಗಿರುವುದು ಅಥವಾ ಕನಸಿನ ಲೋಕದಲ್ಲಿರುವುದು ಜೀವನದ ಸಮಸ್ಯೆಗಳಿಗೆ ಪರಿಹಾರವಾಗಬಹುದು ಎಂದು ಹಾಸ್ಯಮಯವಾಗಿ ಸೂಚಿಸುತ್ತದೆ.

No Cap

ಅರ್ಥ: ಸ್ಲಾಂಗ್ ಲಾಂಗ್ವೇಜ್ ನಲ್ಲಿ , 'ಕ್ಯಾಪ್' ಎಂದರೆ ಸುಳ್ಳು. Gen-Z 'No Cap' ಎಂದು ಹೇಳಿದಾಗ, "ಯಾವುದೇ ಸುಳ್ಳು ಹೇಳುತ್ತಿಲ್ಲ," "ನಾನು ಸಂಪೂರ್ಣವಾಗಿ ನಿಜವನ್ನೆ ಹೇಳುತ್ತಿದ್ದೇನೆ," ಅಥವಾ "ನಾನು ಪ್ರಮಾಣ ಮಾಡುತ್ತೇನೆ" ಎಂದರ್ಥ.

Serving Looks

ಅರ್ಥ: ಯಾರಾದರೂ ಪಾರ್ಟಿ ಅಥವಾ ಕಾರ್ಯಕ್ರಮಕ್ಕೆ ತುಂಬಾ ಸ್ಟೈಲಿಶ್, ಅಟ್ರಾಕ್ಟಿವ್ ಮತ್ತು ಬೆರಗುಗೊಳಿಸುವ ಡ್ರೆಸ್ ಧರಿಸಿ ಬಂದಾಗ, Serving Looks ಎನ್ನುವ ಮೂಲಕ ಅವರನ್ನು ಹೊಗಳಲಾಗುತ್ತದೆ.

Situationship

ಅರ್ಥ: ಈ ರಿಲೇಶನ್ ಶಿಪ್ ನಲ್ಲಿ ಸ್ನೇಹ ಹೆಚ್ಚಾಗಿರುತ್ತದೆ, ಆದರೆ ಪ್ರೀತಿ ಅಥವಾ ಬದ್ಧತೆ ಕಡಿಮೆ. ಇಬ್ಬರು ವ್ಯಕ್ತಿಗಳು ಪರಸ್ಪರ ಡೇಟಿಂಗ್ ಮಾಡುತ್ತಿದ್ದರೂ ಅವರ ಸಂಬಂಧಕ್ಕೆ ಹೆಸರು ಅಥವಾ ದೃಢವಾದ ಬದ್ಧತೆ ಇಲ್ಲದೇ ಇದ್ದರೆ, ಅದನ್ನು "Situationship " ಎಂದು ಕರೆಯಲಾಗುತ್ತದೆ.

Era

ಅರ್ಥ: 'Era' ಎಂದರೆ ಅಕ್ಷರಶಃ ಯುಗ ಎಂದರ್ಥವಾದರೂ, Gen-Z ತಮ್ಮ ಜೀವನದಲ್ಲಿ ಒಂದು ನಿರ್ದಿಷ್ಟ ಹಂತ ಅಥವಾ ಮನಸ್ಥಿತಿಯನ್ನು ವಿವರಿಸಲು ಇದನ್ನು ಬಳಸುತ್ತಾರೆ, ಉದಾಹರಣೆಗೆ ನಾನು ನನ್ನ ಫಿಟ್ನೆಸ್ ಈರಾ ಆರಂಭಿಸಿದ್ದೇನೆ ಹೀಗೆ ಯಾವುದೇ ವಿಷಯಕ್ಕೆ Era ಬಳಕೆ ಮಾಡುತ್ತಾರೆ.