viral post : ಬೆಂಗಳೂರಿನಲ್ಲಿ ಮನೆ ಖರೀದಿ ಮಾಡೋದು ಸುಲಭವಲ್ಲ. ಒಂದ್ವೇಳೆ ಮನೆ ಖರೀದಿ ಮಾಡಿದ್ರೆ ಮುಂದೆ ಖುಷಿಯಾಗಿರೋಕೆ ಸಾಧ್ಯವಿಲ್ಲ. ಏನೆಲ್ಲ ಸಮಸ್ಯೆ ಕಾಡುತ್ತೆ ಗೊತ್ತಾ? ವೈರಲ್‌ ರೆಡ್ಡಿಟ್‌ ಪೋಸ್ಟ್‌ ನಲ್ಲೇನಿದೆ? 

ಸ್ವಂತ ಮನೆ ಎಲ್ಲರ ಕನಸು. ಜೀವನಪರ್ಯಂತ ದುಡಿದ ಹಣವನ್ನು ಮನೆ ಖರೀದಿಗೆ ಬಳಸೋರೇ ಹೆಚ್ಚು. ಸಾಲ ಮಾಡಿ ಮನೆ ಖರೀದಿ ಮಾಡಿದ್ರೂ, ಇಎಂಐ ಹೊಣೆ ಮೈಮೇಲೆ ಇದ್ರೂ ಅನೇಕರು ಅದೇ ನೆಮ್ಮದಿ ಅಂತ ಭಾವಿಸ್ತಾರೆ. ಆದ್ರೆ ಬೆಂಗಳೂರಿನಲ್ಲಿ ಮನೆ ಖರೀದಿ ಮಾಡಿದ ವ್ಯಕ್ತಿಯೊಬ್ಬ ತನ್ನ ನೋವನ್ನು ತೋಡಿಕೊಂಡಿದ್ದಾರೆ.

Add Asianetnews Kannada as a Preferred SourcegooglePreferred

ರೆಡ್ಡಿಟ್ ಪೋಸ್ಟ್ ವೈರಲ್

r/indianrealestate superminnu ಹೆಸರಿನ ರೆಡ್ಡಿಟ್ ಪೋಸ್ಟ್ ವೈರಲ್ ಆಗಿದೆ. ಬೆಂಗಳೂರಿನಲ್ಲಿ ಮನೆ ಖರೀದಿಸಿದ 1 ವರ್ಷದ ನಂತರ ನನ್ನ ವಿಷಾದ ಎಂದು ಶೀರ್ಷಿಕೆ ಬರೆದಿದ್ದಾರೆ. ಬಾಡಿಗೆ ಮನೆಗೆ ನೀಡುವ ಬಾಡಿಗೆಯನ್ನೇ ಇಎಂಐ ಆಗಿ ಕನ್ವರ್ಟ್ ಮಾಡಿದ್ರೆ ಮುಗೀತು, ಸ್ವಂತ ಮನೆಯಲ್ಲಿ ಇನ್ನೇನು ಸಮಸ್ಯೆ ಎನ್ನುವ ಜನರಿಗೆ ಇವರ ಪೋಸ್ಟ್ ಸ್ವಂತ ಮನೆ ವಾಸ್ತವವನ್ನು ಹೇಳ್ತಿದೆ. ಸ್ವಂತ ಮನೆ ಖರೀದಿಸುವುದು ಕೇವಲ ಸಂತೋಷವಲ್ಲ, ಸಮಸ್ಯೆಗಳು ಸಬ್-ರಿಜಿಸ್ಟ್ರಾರ್ಗೆ ಲಂಚ ನೀಡುವುದರೊಂದಿಗೆ ಶುರುವಾಗುತ್ತದೆ ಅಂತ ಅವರು ಹೇಳಿದ್ದಾರೆ.

Cockroache Viral: ಜಿರಳೆ ನೋಡಿದ್ರೆ ಹುಡುಗಿಯರು ಏಕೆ ಭಯಪಡುತ್ತಾರೆ? ಇದರ

ಸ್ವಂತ ಮನೆ ಸಮಸ್ಯೆ

ಸ್ವಂತ ಮನೆ ಖರೀದಿ ಮಾಡಿದ ನಂತ್ರ ಕಾಡುವ ಸಮಸ್ಯೆಯನ್ನು ಅವರು ಪಾಯಿಂಟ್ ಮೂಲಕ ವಿವರಿಸಿದ್ದಾರೆ. ಕರೆಂಟ್, ನೀರು ಸೇರಿದಂತೆ ಅನೇಕ ವಿಷ್ಯವನ್ನು ಅವರು ತಮ್ಮ ಪೋಸ್ಟ್ ನಲ್ಲಿ ಹೇಳಿದ್ದಾರೆ. ಮನೆ ಖರೀದಿ ಮಾಡಿ ವಾಸ ಶುರು ಮಾಡಿದ್ಮೇಲೆ ಕರೆಂಟ್ ಕಾಟ ಶುರುವಾಗುತ್ತೆ. ಒಂದು ಟ್ರಾನ್ಸ್ಫಾರ್ಮರ್ ಎಲ್ಲ ಫ್ಲಾಟ್ ಗೆ ಸಾಲೋದಿಲ್ಲ. ಹೊಸ ಟ್ರಾನ್ಸ್ಫಾರ್ಮರ್ಗೆ 5 ಲಕ್ಷ ರೂಪಾಯಿ ಖರ್ಚು ಮಾಡ್ಬೇಕು. ಉಳಿದವರು ಅದಕ್ಕೆ ಒಪ್ಪಿಗೆ ನೀಡಿಲ್ಲ ಅಂದ್ರೆ ಕರೆಂಟ್ ಆಗಾಗ ಕೈಕೊಡೋದು ಸಾಮಾನ್ಯ. ಮನೆ ನಮ್ಮದೇ ಆದ್ರೂ ಸರಿಯಾಗಿ ಲೈಟ್, ಫ್ಯಾನ್ ಬಳಸೋದು ಕಷ್ಟ. ಜನರೇಟರ್ ಬಳಸಿ ಒಂದು ಲೈಟ್ ಒಂದು ಫ್ಯಾನ್ ಉರಿಸ್ಬೇಕು.

ಇನ್ನು ನೀರಿನ ಸಮಸ್ಯೆ ಕೇಳೋದೇ ಬೇಡ. ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು ಹೊಸದಲ್ಲ. ನಮ್ಮ ಫ್ಲಾಟ್ ನಲ್ಲಿ ನೀರಿನ ಕೊರತೆ ಆಗ್ತಿದೆ. ಇಡೀ ಕಟ್ಟಡ ಟ್ಯಾಂಕರ್ ಅವಲಂಬಿಸಿದೆ. ಟ್ಯಾಂಕರ್ ಬೆಲೆ ದುಬಾರಿ. ಎರಡು ತಿಂಗಳಿನಿಂದ ಟ್ಯಾಂಕರ್ ಶುಲ್ಕ ಪಾವತಿಸಲಾಗ್ತಿಲ್ಲ. ಮಂಗಗಳು ಹೆಚ್ಚಾಗಿ ಪೈಪ್ ಒಡೆಯುತ್ತವೆ ಅಂತ ಅವರು ರೆಡ್ಡಿಟ್ ಪೋಸ್ಟ್ ನಲ್ಲಿ ಬರೆದಿದ್ದಾರೆ.

ಸಿಕ್ಕಾಪಟ್ಟೆ ರೊಚ್ಚಿಗೆದ್ದ ತನಿಷಾ ಕುಪ್ಪಂಡ, 'ರೇಟ್ ಎಷ್ಟು' ಕೇಳಿದ ಕಿಡಿಗೇಡಿಗೆ ಬಿಗ್ ಶಾಕ್ ಕೊಟ್ಟ

ಬರೀ ಇಷ್ಟೇ ಅಲ್ಲ ತಿಂಗಳಿಗೊಮ್ಮೆ ಲಿಫ್ಟ್ ಕೈಕೊಡೋದು ಸಾಮಾನ್ಯ. ರಾತ್ರಿ ಸೆಕ್ಯೂರಿಟಿ ಗಾರ್ಡ್ ಇದಾರೆ ಅಂತ ನಿದ್ರೆ ಮಾಡೋಹಂಗಿಲ್ಲ. ಸೆಕ್ಯೂರಿಟಿ ಗಾರ್ಡ್ ರಾತ್ರಿ ನಿದ್ರೆ ಮಾಡ್ತಿರುತ್ತಾರೆ. ಕಿಚನ್ ಇಂಟೀರಿಯೆರ್ ಲೂಸ್ ಆದ್ರೆ ಒಂದು ದಿನ ಫ್ಯಾನ್ ಸೌಂಡ್ ಮಾಡುತ್ತೆ. ಬಾತ್ ರೂಮಿನಲ್ಲಿ ಮತ್ತೊಂದು ಸಮಸ್ಯೆ. ಇಷ್ಟೆಲ್ಲ ಸಮಸ್ಯೆ ಮಧ್ಯೆ ಇಎಂಐ ಮುಗಿಯುವವರೆಗೂ ಇದು ನನ್ನ ಮನೆ ಎನ್ನುವ ನೆಮ್ಮದಿ ಸಿಗಲು ಸಾಧ್ಯವಿಲ್ಲ ಎಂದು ಅವರು ಬರೆದಿದ್ದಾರೆ.

ಹೆಚ್ ಎಸ್ ಆರ್ ಲೇಔಟ್ ನಲ್ಲಿ ಮನೆ ಖರೀದಿ ಮಾಡಿದ ಚಿಕ್ಕಪ್ಪನ ಸ್ಥಿತಿ ಬಗ್ಗೆಯೂ ಅವರು ರೆಡ್ಡಿಟ್ ಪೋಸ್ಟ್ ನಲ್ಲಿ ಬರೆದಿದ್ದಾರೆ. ಈ ಬಗ್ಗೆ ರೆಡ್ಡಿಟ್ ಬಳಕೆದಾರರು ನಾನಾ ರೀತಿಯ ಕಮೆಂಟ್ ಮಾಡಿದ್ದಾರೆ.