ಆಕರ್ಷಕ ಹೆಸರು ಗ್ರಾಹಕರನ್ನು ಸೆಳೆಯುತ್ತೆ. ಆದ್ರೆ ಸೋಶಿಯಲ್ ಮೀಡಿಯಾದಲ್ಲಿ ವಿಚಿತ್ರ ಹೆಸರಿನ ಬ್ಯೂಟಿ ಪಾರ್ಲರ್ ಎಲ್ಲರ ಗಮನ ಸೆಳೆದಿದೆ. ಜೊತೆಗೆ ಪುಕ್ಕಟ್ಟೆ ಪ್ರಚಾರ ಪಡೆದುಕೊಂಡಿದೆ. 

ಹೆಸರು (name) ಬರೀ ಹೆಸರಲ್ಲ. ಹೆಸರು ನಮ್ಮ ಗುರುತು, ನಮ್ಮ ಹೆಮ್ಮೆ. ಯಾವಾಗ್ಲೂ ಹೆಸರು ಆಕರ್ಷಕವಾಗಿರ್ಬೇಕು, ಅರ್ಥಪೂರ್ಣವಾಗಿರಬೇಕು. ಗಾಢವಾದ ಅರ್ಥವನ್ನು ಹೊಂದಿರಬೇಕು. ಮನುಷ್ಯನಿಗೆ ಮಾತ್ರವಲ್ಲ ವಸ್ತು, ಕಂಪನಿ, ಸಂಸ್ಥೆಗಳಿಗೆ ಹೆಸರಿಡುವಾಗ್ಲೂ ಜನ ನೂರಾರು ಬಾರಿ ಆಲೋಚನೆ ಮಾಡ್ತಾರೆ. ಯಾವ ಹೆಸರು ಸೂಕ್ತ ಎಂಬುದನ್ನು ಚರ್ಚಿಸಿ, ಕೆಲವೊಮ್ಮೆ ಜ್ಯೋತಿಷಿಗಳನ್ನು ಕೇಳಿ ನಾಮಕರಣ ಮಾಡ್ತಾರೆ. ಮೇಕಪ್, ಹೇರ್ ಕಟ್, ಅದು ಇದು ಅಂತ ಹುಡುಗಿಯರು ಬ್ಯೂಟಿಪಾರ್ಲರ್ ಗೆ ಹೋಗ್ತಾರೆ. ಊರಿಗೆ ಬಂದ ಹೊಸ ಹುಡುಗಿ ಎಲ್ಲಿಗೆ ಹೋಗಿಲ್ಲ ಅಂದ್ರೂ ಬ್ಯೂಟಿಪಾರ್ಲರ್ ಹುಡುಕೇ ಹುಡುಕ್ತಾಳೆ. ಕಣ್ಣಿಗೆ ಕಾಣುವ ಆಕರ್ಷಕ ಹೆಸರಿನ ಬ್ಯೂಟಿಪಾರ್ಲರ್ ಎಲ್ಲರನ್ನು ಸೆಳೆಯುತ್ತೆ. ನಗರಗಳಲ್ಲಿ ಐಷಾರಾಮಿ ಹೆಸರಿನ ಬ್ಯೂಟಿಪಾರ್ಲರ್ ನಲ್ಲಿ ಸೇವೆ ಅತ್ಯುತ್ತಮವಾಗಿರುತ್ತೆ ಅಂತ ಭಾವಿಸೋರು ಹೆಚ್ಚು. ಅದೇ ಹೆಸರೇ ಕೆಟ್ಟದ್ದಾಗಿದ್ರೆ ಜನರು ಒಳ ಹೋಗೋಕೆ ಅನುಮಾನಪಡ್ತಾರೆ. ಹೆಸರೇ ವಿಚಿತ್ರವಾಗಿದೆ, ಇನ್ನು ಒಳಗಿರೋರು ಹೇಗಿರ್ತಾರೋ ಎನ್ನುವ ಪ್ರಶ್ನೆ ಅವರನ್ನು ಕಾಡುತ್ತೆ.

ಈಗಿನ ದಿನಗಳಲ್ಲಿ ಜನರು ಎಲ್ಲದ್ರಲ್ಲೂ ಬದಲಾವಣೆ ಕೇಳ್ತಿದ್ದಾರೆ. ಚೇಂಜ್ ಚೇಂಜ್ ಅಂತ ಏನೇನೋ ಹೆಸರಿಡೋಕೆ ಶುರು ಮಾಡಿದ್ದಾರೆ. ಪಾಪ, ಕಾನ್ಪುರದ ಆಂಟಿಗೆ ಬೇರೆ ಹೆಸರು ಸಿಗ್ಲಿಲ್ಲ ಅನ್ನಿಸುತ್ತೆ. ತನ್ನ ಬ್ಯೂಟಿಪಾರ್ಲರ್ ಗೆ ವಿಚಿತ್ರವಾದ ಹೆಸರಿಟ್ಟಿದ್ದಾಳೆ. ಅದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಬಂದರಿಯಾ ಬ್ಯೂಟಿ ಪಾರ್ಲರ್ (Bandaria Beauty Parlour) : ಬ್ಯೂಟಿ ಪಾರ್ಲರ್ ಗೆ ಹೋಗೋದೇ ಚಂದ ಕಾಣಲಿ ಅಂತ. ಲುಕ್ ಬದಲಿಸಿಕೊಳ್ಳೋಕೆ ಹೋದವರು ಮಂಗನಿಂದ ಮಾನವ ಆಗೋ ಬದ್ಲು ಮಾನವನಿಂದ ಮಂಗ ಆದ್ರೆ ? ಈ ಬ್ಯೂಟಪಾರ್ಲರ್ ಹೆಸರು ನೋಡಿದ್ರೆ ಹಾಗೆ ಅನ್ನಿಸುತ್ತೆ. ಬಂದರಿಯಾ ಅಲಿಯಾಸ್ ಮಂಗನ ಬ್ಯೂಟಿ ಪಾರ್ಲರ್ ಅಂತ ಇದಕ್ಕೆ ನಾಮಕರಣ ಮಾಡಲಾಗಿದೆ. ಕೆಲವರು ತಮ್ಮ ಬ್ಯೂಟಿ ಪಾರ್ಲರ್ ಗಳಿಗೆ ತಮ್ಮ ಹೆಸರನ್ನೇ ಇಟ್ಟುಕೊಳ್ತಾರೆ. ಐಶ್ವರ್ಯ ಬ್ಯೂಟಿ ಪಾರ್ಲರ್, ಸ್ನೇಹಾ, ದಿವ್ಯಾ ಹೀಗೆ ಹುಡುಗಿಯರ ಹೆಸರಿನ ಸಾಕಷ್ಟು ಬ್ಯೂಟಿ ಪಾರ್ಲರ್ ನಮ್ಮಲ್ಲಿವೆ. ಈಗ ಬಂದರಿಯಾ ಬ್ಯೂಟಿಪಾರ್ಲರ್ ಅಂತ ನಾಮಕರಣ ಮಾಡಿದ ಬ್ಯೂಟಿ ಪಾರ್ಲರ್ ನಲ್ಲಿ ಇರೋದು ಯಾರು? ಮಂಗವಾ? ಹೋದವರು ಮಂಗನಾ ಅಥವಾ ವಾಪಸ್ ಬರುವಾಗ ಮಂಗನಾಗಿ ಬರ್ತಾರಾ ಗೊತ್ತಿಲ್ಲ.

ಇನ್ಸ್ಟಾಗ್ರಾಮ್ ನಲ್ಲಿ ಕಾನ್ಪುರದ ವ್ಯಕ್ತಿಯೊಬ್ಬರು ಈ ಬ್ಯೂಟಿ ಪಾರ್ಲರ್ ವಿಡಿಯೋ ಹಂಚಿಕೊಂಡಿದ್ದಾರೆ. ತನ್ನ ಸೇವೆ ಬದಲು ಹೆಸರಿನಿಂದ ಈಗ ಬ್ಯೂಟಿಪಾರ್ಲರ್ ಸುದ್ದಿಗೆ ಬಂದಿದೆ. ಜನರು ವಿಡಿಯೋ ನೋಡಿ ನಗ್ತಿದ್ದಾರೆ. ಫೋಟೋ ಒಂದು ಮಿಲಿಯನ್ ಗಿಂತಲೂ ಹೆಚ್ಚು ವೀವ್ಸ್ ಪಡೆದಿದೆ. ನನ್ನ ತಂಗಿಯನ್ನು ಇಲ್ಲಿಗೆ ಕಳಿಸ್ತೇನೆ ಅಂತ ಒಬ್ಬ ತಮಾಷೆ ಮಾಡಿದ್ರೆ, ಮಾರ್ಕೆಟಿಂಗ್ ಮಾಡೋಕೆ ಈ ಹೆಸರನ್ನು ಬಳಸಲಾಗಿದೆ. ಆದ್ರೆ ಹುಡುಗಿಯರು ಈ ಬ್ಯೂಟಿಪಾರ್ಲರ್ ಗೆ ಹೋಗ್ತಿದ್ದಾರಾ ಅಂತ ಇನ್ನೊಬ್ಬರು ಪ್ರಶ್ನೆ ಮಾಡಿದ್ದಾರೆ.

ಇಂಥ ವಿಚಿತ್ರ ಹೆಸರುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗೋದು ಇದೇ ಮೊದಲಲ್ಲ. ಸೋಶಿಯಲ್ ಮೀಡಿಯಾಗಳು ಪ್ರಚಾರಕ್ಕೆ ಅತ್ಯುತ್ತಮ ಆಯ್ಕೆಯಾಗಿದೆ. ಯಾರೋ ಮಾಡಿದ ವಿಡಿಯೋ ಇನ್ನಾರಿಗೋ ಲಾಭ ತಂದುಕೊಡುತ್ತೆ. ಈ ವಿಡಿಯೋ ಕೂಡ, ಬಂದರಿಯಾ ಬ್ಯೂಟಿ ಪಾರ್ಲರ್ ಗೆ ಪ್ರಚಾರ ಅಂದ್ರೆ ತಪ್ಪಾಗೋದಿಲ್ಲ. ಕಾನ್ಪರದ ಅನೇಕರನ್ನು ಈ ಬ್ಯೂಟಿಪಾರ್ಲರ್ ಈಗ ಸೆಳೆದಿದೆ.

View post on Instagram