ಸುಮಾರು 70 ವರ್ಷದ ವೃದ್ಧನೊಬ್ಬ ಟ್ರಕ್ ಮೇಲಿದ್ದ ಮಹಿಳೆಯರ ಚಿತ್ರಗಳನ್ನು ನೆಕ್ಕುತ್ತಿರುವ ವಿಡಿಯೋ ವೈರಲ್ ಆಗಿದೆ. ಬಿಹಾರದಲ್ಲಿ ನಡೆದಿದೆ ಎನ್ನಲಾದ ಈ ಘಟನೆಯನ್ನು ಮಕ್ಕಳು, ಯುವತಿಯರು ನೋಡುತ್ತಿದ್ದು, ದೇಶದಲ್ಲಿ ಮಹಿಳೆಯರ ಮೇಲಿನ ಅಪರಾಧಗಳ ಹೆಚ್ಚಳದ ನಡುವೆ ಈ ವಿಕೃತಿ ಆಘಾತ ತಂದಿದೆ.

'ಕಾಮಾತುರಾಣಾಂ ನ ಭಯಂ ನ ಲಜ್ಜಾ' ಎನ್ನುವ ಮಾತಿದೆ. ಅಂದರೆ ಕಾಮಕ್ಕೆ ಆತುರನಾದವನಿಗೆ ಅಲ್ಲಿ ಯಾರಿದ್ದಾರೆ, ಯಾರು ನನ್ನನ್ನು ನೋಡುತ್ತಿದ್ದಾರೆ, ಯಾರಾದರೂ ಏನಾದ್ರೂ ಮಾಡಬಹುದಾ ಎನ್ನುವ ಭಯವೂ ಇರಲ್ಲ, ನಾಚಿಕೆಯೂ ಇರಲ್ಲ ಎನ್ನುವುದು. ಆದರೆ, ಈ ಮಾತು ಈಗ ಎಷ್ಟರಮಟ್ಟಿಗೆ ನಿಜವಾಗುತ್ತಿದೆ ಎಂದರೆ ಗೋಡೆಯ ಮೇಲಿರುವ ಹೆಣ್ಣಿನ ಚಿತ್ರಗಳನ್ನೂ ಕೆಲವು ಗಂಡಸರು ಬಿಡುತ್ತಿಲ್ಲ! ಎಳೆ ಶಿಶುವಿನಿಂದ ಹಿಡಿದು ವಯೋವೃದ್ಧೆಯರವರೆಗೂ ಅತ್ಯಾ*ಚಾರ ಘಟನೆಗಳು ದಿನನಿತ್ಯ ನಡೆಯುತ್ತಲೇ ಇರುತ್ತವೆ. ಅದು ಎಷ್ಟರಮಟ್ಟಿಗೆ ಎಂದರೆ, ಕೆಲವರು ಸ್ವಂತ ಅಕ್ಕ-ತಂಗಿ, ಹೆತ್ತ ತಾಯಿಯನ್ನು ಹರಿದು ಮ ಉಕ್ಕಿ ತಿನ್ನುವವರು ಇದ್ದಾರೆ. ಅಂಥ ವಿಕೃತ ಮನಸ್ಥಿತಿಯವರ ಬಗ್ಗೆ ಆಗಾಗ್ಗೆ ವರದಿಯಾಗುತ್ತಲೇ ಇರುತ್ತದೆ.

Add Asianetnews Kannada as a Preferred SourcegooglePreferred

ಟ್ರಕ್​ ಮೇಲಿನ ಹುಡುಗಿಯರ ನೆಕ್ಕಿದ ಅಜ್ಜ

ಇದೀಗ ಶಾಕಿಂಗ್​ ಎನ್ನುವಂಥ ವಿಡಿಯೋ ಒಂದು ವೈರಲ್​ ಆಗಿದೆ. ಸರಿಸುಮಾರು 70 ವರ್ಷ ವಯಸ್ಸಿನ ಆಸುಪಾಸಿನ ಅಜ್ಜನೊಬ್ಬ ಟ್ರಕ್​ ಮೇಲೆ ಮೇಲೆ ಚಿತ್ರಿಸಲಾದ ಹುಡುಗಿಯರನ್ನು ನೆಕ್ಕಿ ನೆಕ್ಕಿ ಗೋಡೆಯನ್ನು ಸ್ವಚ್ಛ ಮಾಡಿದ್ದಾನೆ! ಈ ಶಾಕಿಂಗ್​ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಬಿಹಾರದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಟ್ರಕ್‌ನ ಹಿಂಭಾಗದಲ್ಲಿ ಮಹಿಳೆಯರ ಪೋಸ್ಟರ್‌ಗಳನ್ನು ಈ ವೃದ್ಧ ನೆಕ್ಕುತ್ತಿರುವುದನ್ನು ವಿಡಿಯೋ ಮಾಡಿರುವ ಕೆಲವರು ಅದನ್ನು ವೈರಲ್ ಮಾಡಿದ್ದಾರೆ.

ಕುತೂಹಲದಿಂದ ನೋಡ್ತಿರೋ ಮಕ್ಕಳು

ಜಸ್ವಿಂದರ್ ಕೌರ್ ಅವರು X ನಲ್ಲಿ ಹಂಚಿಕೊಂಡಿರುವ ಈ ಕ್ಲಿಪ್‌, ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಇನ್ನೂ ಶಾಕಿಂಗ್ ವಿಷ್ಯ ಎಂದರೆ, ಅಲ್ಲಿಯೇ ಯುವತಿಯರು ಮತ್ತು ಚಿಕ್ಕ ಚಿಕ್ಕ ಮಕ್ಕಳು ಈ ಅಜ್ಜನನ್ನು ಅಸಹ್ಯ ಮತ್ತು ಅಚ್ಚರಿಯಿಂದ ನೋಡುತ್ತಿರುವುದನ್ನು ಕಾಣಬಹುದಾಗಿದೆ. ಕೆಲವು ಮಕ್ಕಳು ಅಡಗಿಕೊಂಡು ಅಜ್ಜ ಏನು ಮಾಡ್ತಾ ಇದ್ದಾನೆ ಎನ್ನುವುದನ್ನು ಕುತೂಹಲದಿಂದ ನೋಡುತ್ತಿದ್ದಾರೆ.

ದಾಖಲೆ ಏನು ಹೇಳುತ್ತದೆ?

ಇತ್ತೀಚಿನ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಮಾಹಿತಿಯ ಪ್ರಕಾರ, ಭಾರತವು 2023 ರಲ್ಲಿ ಮಹಿಳೆಯರ ವಿರುದ್ಧ 4.48 ಲಕ್ಷಕ್ಕೂ ಹೆಚ್ಚು ಅಪರಾಧ ಪ್ರಕರಣಗಳನ್ನು ದಾಖಲಿಸಿದೆ, ಇದು ದೇಶಾದ್ಯಂತ ಮಹಿಳೆಯರನ್ನು ಗುರಿಯಾಗಿಸಿಕೊಂಡು ನಡೆಯುವ ಅಪರಾಧಗಳಲ್ಲಿ ನಿರಂತರ ಏರಿಕೆಯನ್ನು ತೋರಿಸುತ್ತದೆ. ಪತಿ ಅಥವಾ ಸಂಬಂಧಿಕರಿಂದ ಕ್ರೌರ್ಯವು ಸುಮಾರು 30 ಪ್ರತಿಶತದಷ್ಟು ದಾಖಲಾಗಿದೆ, ನಂತರ ಅಪಹರಣ, ನಮ್ರತೆಯನ್ನು ಕೆರಳಿಸುವ ಉದ್ದೇಶದಿಂದ ಹಲ್ಲೆ ಮತ್ತು ಇತರ ಘೋರ ಅಪರಾಧಗಳು ಸಂಭವಿಸಿವೆ ಎಂದು ವರದಿ ಹೇಳಿದೆ. ಇದರ ನಡುವೆಯೇ ಫೋಟೋಗಳನ್ನೂ ಬಿಡದ ಇಂಥ ಮುದುಕರ ವಿಡಿಯೋ ಮತ್ತಷ್ಟು ಆಘಾತ ತರುವಂತಿದೆ.

Scroll to load tweet…