ಬಾಲಕಿಯೊಬ್ಬಳ ಹಿಂದೆ ಮಾಯಾವಿ ಕೈಗಳು ಗೋಚರಿಸಿ ಕೊನೆಗೆ ಅದೃಶ್ಯವಾಗಿರುವ ಬೆಚ್ಚಿ ಬೀಳುವ ಘಟನೆ ನಡೆದಿದೆ. ನಿಜಕ್ಕೂ ಇದೇನು?
ಮಧ್ಯರಾತ್ರಿ 3 ಗಂಟೆ. ಮನೆಯ ಕತ್ತಲೆ ಕೋಣೆಯಲ್ಲಿ ಕುಳಿತಿರುವ ಬಾಲಕಿ, ಆಕೆಯ ಹಿಂಬದಿಯಲ್ಲಿ ಎರಡು ಕೈಗಳು ಕಾಣಿಸ್ತಿವೆ. ಬಾಲಕಿಯ ಕೂದಲನ್ನು ಅದು ಸರಿ ಮಾಡುತ್ತಿದೆ. ಬಾಲಕಿ ವಿಚಿತ್ರ ರೀತಿಯಲ್ಲಿ ಕುಳಿತಿದ್ದಾಳೆ. ಮಗಳಿಗೆ ಇದೇನಾಯ್ತು ಎಂದು ಅಪ್ಪ ಬಂದು ನೋಡಿದರೆ ಆ ಕೈ ಮಾಯ, ಹಿಂಬದಿಯಲ್ಲಿ ಗೊಂಬೆ ಇರೋದನ್ನು ನೋಡಬಹುದು. ಇದರ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಯ ಬೀಳುವಂತಿದೆ. ಟೈಮ್ಸ್ ನೌ ಇನ್ಸ್ಟಾಗ್ರಾಮ್ನಲ್ಲಿ ಈ ವಿಡಿಯೋ ಶೇರ್ ಆಗಿದೆ.
ಈ ವಿಡಿಯೋ ಒಬ್ಬರೇ ಇದ್ದಾಗ ನೋಡಿದರೆ ಎಂಥವರೂ ಭಯ ಬೀಳುವಂತಿದೆ. ಆದರೆ ಇದು ಅಸಲಿಯೋ, ನಕಲಿಯೋ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ಏಕೆಂದರೆ ಈಗ ಹೇಳಿಕೇಳಿ ಕೃತಕ ಬುದ್ಧಿಮತ್ತೆ AI ಯುಗ. ಅಸಲಿಯನ್ನೂ ನಾಚಿಸುವ ರೀತಿಯಲ್ಲಿ ನಕಲಿ ವಿಡಿಯೋಗಳು ವೈರಲ್ ಆಗುತ್ತಿವೆ. ಅದೇ ರೀತಿ ಈ ವಿಡಿಯೋ ಕೂಡ ಆಗಿರುವ ಸಾಧ್ಯತೆ ಬಹಳ ಇದೆ. ಆದರೆ ಇದು ನೋಡಿದರೆ ಕೃತಕ ಬುದ್ಧಿಮತ್ತೆಯ ವಿಡಿಯೋ ಅಲ್ಲ ಎನ್ನಿಸುತ್ತದೆ. ಆದರೆ ಇದು ನಿಜವಾದದ್ದೂ ಅಲ್ಲ. ತಮಾಷೆಗೆ ಯಾರೋ ಕೈಗಳನ್ನು ಹೊರಕ್ಕೆ ಹಾಕಿ ವೈರಲ್ ಮಾಡಿದ್ದಾರೆ ಅಷ್ಟೇ. ಹೆಚ್ಚೆಚ್ಚು ವ್ಯೂವ್ಸ್ ಬರಲು ತಮ್ಮ ಜೀವವನ್ನೇ ಪಣಕ್ಕಿಡುವ ಜನ ಇರುವಾಗ, ಇದೇನು ಮಹಾ ಬಿಡಿ.
ಅಷ್ಟಕ್ಕೂ, ಭೂತ, ಪ್ರೇತ, ಆತ್ಮಗಳು ನಿಜವಾಗಿಯೂ ಇವೆಯೆ? ಹೌದು ಎನ್ನುವವರು ಎಷ್ಟು ಮಂದಿ ಇದ್ದಾರೋ, ಇವೆಲ್ಲಾ ಭ್ರಮೆ ಎನ್ನುವವರೂ ಅಷ್ಟೇ ಜನರಿದ್ದಾರೆ. ತಮ್ಮ ಅನುಭವಕ್ಕೆ ಬಂದಿರುವ ಹಲವಾರು ಭಯಾನಕ ಘಟನೆಗಳನ್ನು ವಿವರಿಸಿ, ಭೂತದ ಇರುವಿಕೆಯನ್ನು ಸಾರುವವರೂ ಇದ್ದರೆ, ಅವೆಲ್ಲವೂ ನಿಮ್ಮ ಮನಸ್ಸಿನ ಭ್ರಮೆ ಎಂದು ಹೇಳುವವರೂ ಸಿಗುತ್ತಾರೆ. ದೇವರು, ದೆವ್ವ ಎಲ್ಲವೂ ಅವರವರ ನಂಬಿಕೆ, ವಿಶ್ವಾಸದ ಮೇಲೆ ಇದೆ. ಆದರೆ ಸಾಮಾನ್ಯ ಜನರಿಗೆ ನಿಲುಕದ ಅದೆಷ್ಟೋ ಅಲೌಕಿಕ ಘಟನೆಗಳು ನಮ್ಮ ಸುತ್ತಲೂ ನಡೆಯುತ್ತಲೇ ಇರುತ್ತವೆ ಎನ್ನುವುದು ಮಾತ್ರ ದಿಟ. ವಿಜ್ಞಾನಕ್ಕೂ ನಿಲುಕದ, ಯಾವುದೇ ಪ್ರಯೋಗಕ್ಕೂ ಮೀರಿದ ಹಲವಾರು ಘಟನೆಗಳು, ಚಿತ್ರ-ವಿಚಿತ್ರ ಎನಿಸುವ ವಿಷಯಗಳು ಆಗಾಗ್ಗೆ ನಡೆಯುವುದು ಹಲವರಿಗೆ ಅನುಭವಕ್ಕೆ ಬಂದಿದೆ. ಅವರವರ ನಂಬಿಕೆ ಅವರವರದ್ದು. ಅದೇ ನಂಬಿಕೆಯನ್ನು ಇಟ್ಟುಕೊಂಡೇ ಇಂಥ ವಿಡಿಯೋಗಳನ್ನು ಹರಿಬಿಡುವುದು ಮಾಮೂಲಾಗಿದೆ.
ಇತ್ತೀಚಿನ ದಿನಗಳಲ್ಲಿ ಸೀರಿಯಲ್ಗಳಲ್ಲಿ ಕೂಡ ಭೂತ, ಆತ್ಮ, ಪ್ರೇತಗಳನ್ನು ತೋರಿಸುವುದು ಸರ್ವೇ ಸಾಮಾನ್ಯವಾಗಿದೆ. ಇದಕ್ಕೆ ಕಾರಣ ಕೂಡ ಜನ ಇಂಥದ್ದನ್ನೇ ಹೆಚ್ಚು ಇಷ್ಟ ಪಡುತ್ತಾರೆ ಎನ್ನುವುದು. ಪ್ರೀತಿ, ಪ್ರೇಮ, ಪ್ರಣಯದ ವಿಷಯಗಳಿಗಿಂತಲೂ ಹೆಚ್ಚಾಗಿ ಭಯ ಪಡುತ್ತಲೇ ಅದನ್ನು ಆಸ್ವಾದಿಸುವ ಮನುಷ್ಯರ ಬುದ್ಧ ಇದರಿಂದ ತಿಳಿದುಬರುತ್ತದೆ. ಆದರೆ ಈ ವಿಡಿಯೋ ಮಾತ್ರ ವಿಭಿನ್ನ ರೀತಿಯಲ್ಲಿ ಕಮೆಂಟ್ಸ್ಗಳೊಂದು ವೈರಲ್ ಆಗ್ತಿದೆ.
