ಬೆಂಗಳೂರು, (ಅ.04): ನೆರೆ ಪರಿಹಾರದಲ್ಲಿ ಕೇಂದ್ರ ಸರ್ಕಾರದ ವಿಳಂಬಕ್ಕೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಪಕ್ಷದಿಂದ ನೋಟಿಸ್ ಜಾರಿ ಮಾಡಲಾಗಿದೆ.

ನೆರೆ ಪರಿಹಾರದ ವಿಚಾರದಲ್ಲಿ ಪದೇ-ಪದೇ ರಾಜ್ಯ ಬಿಜೆಪಿ ಸಂಸದರನ್ನು  ಟೀಕಿಸಿದ್ದಕ್ಕೆ ನೋಟಿಸ್ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಕೇಂದ್ರ ಬಿಜೆಪಿ ಶಿಸ್ತು ಸಮಿತಿಯಿಂದ ಶೋಕಾಸ್ ನೋಟಿಸ್ ನೀಡಲಾಗಿದೆ.

ಚಕ್ರವರ್ತಿಯನ್ನ ಬೈದ್ರೆ ಪಕ್ಷಕ್ಕೆ ಹಿನ್ನಡೆ: ಸದಾನಂದಗೌಡ್ರನ್ನ ಹಿಗ್ಗಾಮುಗ್ಗಾ ಜಾಡಿಸಿದ ಬಿಜೆಪಿ ನಾಯಕ

 ಪಕ್ಷದ ನಾಯಕರ ವಿರುದ್ಧ ಜನರನ್ನು ಪ್ರಚೋದಿಸಿದ್ದೇಕೆ? ನೆರೆ ಪರಿಹಾರ ವಿಚಾರದಲ್ಲಿ ಸುಳ್ಳು ಹರಡುತ್ತಿದ್ದೀರಾ?  ಅಂತೆಲ್ಲ ಪ್ರಶ್ನೆಗಳನ್ನು ಕೇಳಲಾಗಿದ್ದು, ಕಾರಣ ಕೇಳಿ 10 ದಿನದೊಳಗೆ ಉತ್ತರಿಸಲು ನೋಟಿಸ್ ಕೊಡಲಾಗಿದೆ.

ಇಂದು ಅನಂತಕುಮಾರ್ ಬದುಕಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ.  ಅನಂತಕುಮಾರ್​​​ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮಧ್ಯೆ ಸೇತುವೆಯಾಗಿದ್ದರು. ಆದರೆ, ಹಾಲಿ ಬಿಜೆಪಿ ಸಂಸದರು ಕೆಲಸಕ್ಕೆ ಬಾರದವರಾಗಿದ್ದಾರೆ.  ಸಂಸದರಿಗೆ ಪ್ರಧಾನಿ ಭೇಟಿಗೆ ಸಮಯ ಕೇಳುವ ತಾಕತ್ತಿಲ್ಲ. ಇನ್ನು ನಮ್ಮನ್ನು ಹೇಗೆ ಭೇಟಿ ಮಾಡಿಸುತ್ತಾರೆ? ಇಂದಿನ ಪರಿಸ್ಥಿತಿಯಲ್ಲಿ ಮೋದಿ ಅವರ ಕಟ್ಟಾ ಅಭಿಮಾನಿಗಳೂ ಕೂಡ ಕೇಂದ್ರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸದಾನಂದಗೌಡ ತಮ್ಮ ಸಾಮರ್ಥ್ಯ ತೋರಿಸಿ, ಪ್ರಧಾನಿಯವರ ಭೇಟಿಗೆ ಅವಕಾಶ ಕೊಡಿಸಲಿ. ಸಂಸದರು ತಮ್ಮ ತಾಕತ್ತು ಪ್ರದರ್ಶಿಸಲಿ ಅಂತೆಲ್ಲ ತರಾಟೆ ತೆಗೆದುಕೊಂಡಿದ್ದರು

ಭೇಷ್ ಪಾಟೀಲರೇ.. ಕೇಂದ್ರ ಸಚಿವರಿಗೆ ಸವಾಲೆಸೆದ ನಿಮ್ಮ ಒಂದೊಂದು ಮಾತು ಸಿಡಿಗುಂಡು

ಅದು ಇದೀಗ ಬಸನಗೌಡರಿಗೆ ಮುಳುವಾಗಿದೆ. ಯತ್ನಾಳ್ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಪಕ್ಷದ ಕೇಂದ್ರ ಶಿಸ್ತು ಸಮಿತಿ, ನಿಮ್ಮ ಹೇಳಿಕೆ ಪಕ್ಷ ವಿರೋಧಯಾಗಿ, ಪಕ್ಷ ವಿರೋಧಿ ಹೇಳಿಕೆ ನೀಡಿದ ನಿಮ್ಮನ್ನು ಪಕ್ಷ ಯಾಕೆ ಅಮಾನತು ಮಾಡಬಾರದು ಎಂಬುದಕ್ಕೆ ವಿವರಣೆ ಕೇಳಿ ಯತ್ನಾಳ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. 

ಈ ಹಿಂದೆ ಅವರು ಪಕ್ಷದ ವಿರುದ್ಧ ಮಾತನಾಡಿದಕ್ಕೆ ಶಿಸ್ತುಕ್ರಮದ ಅಡಿಯಲ್ಲಿ ಬಿಜೆಪಿಯಿಂದ ಹೊರಹಾಲಾಗಿತ್ತು. ಬಳಿಕ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹದು.