Asianet Suvarna News Asianet Suvarna News

Super Special News: ಬೃಹತ್‌ ಹಾವಿನೊಂದಿಗೆ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಮಕ್ಕಳ ಈಜಾಟ

  • ಹಾವಿನೊಂದಿಗೆ ಮಕ್ಕಳ ಸರಸ
  • ಬುಸ್‌ ಬುಸ್‌ ಜೊತೆ ನೀರಾಟದಲ್ಲಿ ತೊಡಗಿದ ಮಕ್ಕಳು
  • ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಹಾವು ಕಂಡ ಕೂಡಲೇ ಬಹುತೇಕರು ಹೆದರಿ ಓಡುವುದೇ ಹೆಚ್ಚು. ಆದರೆ ಇಲ್ಲೊಂದು ಕಡೆ ಬೃಹತ್‌ ಗಾತ್ರದ ಹಾವಿನೊಂದಿಗೆ ಮಕ್ಕಳು ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಆಟವಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ(social Media) ವೈರಲ್ (viral) ಆಗಿದ್ದು, ಜನರನ್ನು ಬೆಚ್ಚಿ ಬೀಳಿಸುತ್ತಿದೆ. ಮಕ್ಕಳು ಯಾವುದೇ ಭಯವಿಲ್ಲದೇ ಬೃಹತ್‌ ಗಾತ್ರದ ಹಾವನ್ನು (snake) ಮುಟ್ಟುತ್ತಾ ಸ್ವಿಮ್ಮಿಂಗ್‌ ಫುಲ್‌ನಲ್ಲಿ ಆಟವಾಡುತ್ತಿದ್ದಾರೆ. ಹಾವುಗಳೆಂದರೆ ಬಹುತೇಕ ವಿಷಕಾರಿಗಳು ಎಂದು ನಂಬಲಾಗಿದೆ. ಆದರೆ ಅವುಗಳಲ್ಲೂ ವಿಷವಿಲ್ಲದ ಅಪಾಯಕಾರಿಯಲ್ಲದ ಹಲವು ಹಾವುಗಳಿವೆ ಎಂಬುದು ತಿಳಿದು ಬಂದಿದೆ.

Video Top Stories