40 ಕೆಜಿ ಕಲ್ಲನ್ನು ಮೀಸೆಯಿಂದಲೇ ಎತ್ತಿದ ಅಜ್ಜ; ಉತ್ತರ ಕರ್ನಾಟಕದ ಬಾಹುಬಲಿಗಳಿವರು..!
40 ಕೆಜಿ ಸಂಗ್ರಾಣಿ ಕಲ್ಲನ್ನು ಮೀಸೆಯಿಂದ ಎತ್ತಿದ ರುಮಾಲಿನ ಅಜ್ಜ, ಹಲ್ಲಿನಿಂದಲೇ 110ಕೆಜಿ ಕಲ್ಲು ಎಳೆದ ಜಗಜಟ್ಟಿ, 180 ಕೆಜಿ ಕಲ್ಲು ಎತ್ತಿ ಬಿಸಾಕಿದ ಬಾಹುಬಲಿ, ನೋಡಿದವರೆಲ್ಲ ಅಂತಿದ್ರು ಹೌದ್ದೋ ಹುಲಿಯಾ! ಇಂತಹ ರೋಮಾಂಚನಕಾರಿ ದೃಶ್ಯಗಳು ಕಂಡುಬಂದಿದ್ದು ವಿಜಯಪುರದ ಆರಾಧ್ಯ ದೈವವಾದ ಶ್ರೀ ಸಿದ್ಧೇಶ್ವರ ಜಾತ್ರೆಯಲ್ಲಿ.
ವಿಜಯಪುರ (ಜ. 18): 40 ಕೆಜಿ ಸಂಗ್ರಾಣಿ ಕಲ್ಲನ್ನು ಮೀಸೆಯಿಂದ ಎತ್ತಿದ ರುಮಾಲಿನ ಅಜ್ಜ, ಹಲ್ಲಿನಿಂದಲೇ 110ಕೆಜಿ ಕಲ್ಲು ಎಳೆದ ಜಗಜಟ್ಟಿ, 180 ಕೆಜಿ ಕಲ್ಲು ಎತ್ತಿ ಬಿಸಾಕಿದ ಬಾಹುಬಲಿ, ನೋಡಿದವರೆಲ್ಲ ಅಂತಿದ್ರು ಹೌದ್ದೋ ಹುಲಿಯಾ! ಇಂತಹ ರೋಮಾಂಚನಕಾರಿ ದೃಶ್ಯಗಳು ಕಂಡುಬಂದಿದ್ದು ವಿಜಯಪುರದ ಆರಾಧ್ಯ ದೈವವಾದ ಶ್ರೀ ಸಿದ್ಧೇಶ್ವರ ಜಾತ್ರೆಯಲ್ಲಿ.
ಒಂದೇ ಟ್ರ್ಯಾಕ್ಟರ್ ಎಂಜಿನ್‌ನಲ್ಲಿ 10 ಟ್ರೈಲರ್ ಕಬ್ಬು ಎಳೆಸಿದ ಚಾಲಕ!
ಸಿದ್ಧೇಶ್ವರ ಜಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಭಾರ ಎತ್ತುವ ಸ್ಪರ್ಧೆಯಲ್ಲಿ ಮೈ ನವಿರೇಳಿಸುವ ದೃಶ್ಯಗಳು ಕಂಡುಬಂದವು. ಉತ್ತರ ಕರ್ನಾಟಕದ ತಾಕತ್ತು ನೋಡಿದ ಮಂದಿ ಹೌದ್ದೋ ಹುಲಿಯಾ ಎನ್ನುತ್ತಿದ್ದರು. 40 ಕೆಜಿ ಭಾರವಾದ ಸಂಗ್ರಾಣಿ ಕಲ್ಲನ್ನು ರುಮಾಲು ಸುತ್ತಿದ ಅಜ್ಜ ತನ್ನ ಮೀಸೆಯಿಂದಲೇ ಎತ್ತಿ ಮೀಸೆಯ ಡಿಮ್ಯಾಂಡು ಎಷ್ಟಿದೆ ಎಂಬುದನ್ನು ತೋರಿಸಿದ್ದ.
ಬನಶಂಕರಿ ಜಾತ್ರೆಯಲ್ಲಿ ಸೊಂಟ ಬಳಕಿಸಿದ ನಟಿ ರಾಗಿಣಿ: ಹುಚ್ಚೆದ್ದು ಕುಣಿದ ಫ್ಯಾನ್ಸ್!
ಬಳಿಕ 1 ಕ್ಷಿಂಟಲ್ 25 ಕೆಜಿ ಭಾರದ ಕಬ್ಬಿಣದ ತುಂಡುಗಳನ್ನು ಸಾಹಸಿಯೊಬ್ಬ ಮೆಟ್ಟನಾಲಿಗೆ ಮೇಲೆ(ಎತ್ತರದ ಹಲಗೆ ಮೇಲೆ) ನಿಂತು ಎತ್ತಿ ಬಿಸಾಕಿದ್ದ. ಬಳಿಕ ಬಂದ ಸಾಹಸಿ ನಾನೇನು ಕಡಿಮೆ ಎಂಬಂತೆ 1 ಕ್ಷಿಂಟಾಲ್ 80 ಕೆಜಿ ತೂಕ ಮರಳು ತುಂಬಿದ್ದ ಚೀಲವನ್ನು ಮಂಡಕ್ಕಿ ಚೀಲ ಎತ್ತಿದಂತೆ ಎತ್ತಿ ತೋರಿಸಿದ. ಇದಕ್ಕೂ ಭಯಾನಕ ಎಂಬಂತೆ ಬಂದ ವ್ಯಕ್ತಿಯೊಬ್ಬ ಹಲ್ಲಿನಿಂದ 60 ಕೆಜಿ ಕಬ್ಬಿಣವನ್ನು ಎತ್ತಿ ಹಿಂದೆ ಬಿಸಾಕಿ ತನ್ನ ಹಲ್ಲಿನ ತಾಕತ್ತು ತೋರಿಸಿದ. ನೋಡಲು ಸಣಕಲು ಇದ್ದ ವ್ಯಕ್ತಿಯೊಬ್ಬ ಬಂದು 110 ಕೆಜಿ ಸಂಗಾಣಿ ಕಲ್ಲನ್ನು ಬಾಯಲ್ಲೇ ಎಳದಿದ್ದು ಎಲ್ಲರನ್ನೂ ಬೆರಗುಗೊಳಿಸಿತ್ತು. ಈ ರೋಮಾಂಚನಕಾರಿ ದೃಶ್ಯಗಳು ಇಲ್ಲಿವೆ ನೋಡಿ!