ಉಡುಪಿಯಲ್ಲಿ ಹಿಂದೂ-ಮುಸ್ಲಿಂ ಸಂಘರ್ಷಕ್ಕೆ ಅವಕಾಶವಿಲ್ಲ..!
ನಾವು ಸಂಕಷ್ಟದಲ್ಲಿದ್ದಾಗ ಹಿಂದೂ ಮುಖಂಡರು ನಮಗೆ ಸಹಾಯ ಮಾಡಿದ್ದಾರೆ. ನಮ್ಮ ಧರ್ಮವನ್ನು ನಾವು ಪಾಲಿಸುತ್ತೇವೆ. ಹಾಗೆತೇ ಇತರ ಧರ್ಮಗಳನ್ನು ಗೌರವಿಸುತ್ತೇವೆ. ಜಾತ್ರೆಯಲ್ಲಿ ಪಾಲ್ಗೊಳ್ಳುವ 1,500 ವ್ಯಾಪಾರಿಗಳ ಪೈಕಿ 360 ಮಂದಿ ಮುಸ್ಲಿಂ ವ್ಯಾಪಾರಿಗಳಿದ್ದಾರೆ. ಕೊರೋನಾದಿಂದಾಗಿ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರಿದೆ. ಹೀಗಾಗಿ ಇಂತಹ ಸಂದರ್ಭದಲ್ಲಿ ಹಿಂದು-ಮುಸ್ಲಿಂ ಎನ್ನದೇ ಒಟ್ಟಾಗಿ ಸಾಗಬೇಕು ಎಂದು ಆರಿಫ್ ಕರೆಕೊಟ್ಟಿದ್ದಾರೆ.
ಉಡುಪಿ(ಮಾ.22): ಸರ್ವಜನಾಂಗದ ಶಾಂತಿಯ ತೋಟ ಎನಿಸಿಕೊಂಡಿರುವ ಕರ್ನಾಟಕದಲ್ಲಿ ಇದೀಗ ಮತ್ತೊಮ್ಮೆ ಸಾಮರಸ್ಯ ಕದಡುವಂತಹ ವಾತಾವರಣ ಬೆಳಕಿಗೆ ಬಂದಿತ್ತು. ಕಾಪು ಸುಗ್ಗಿ ಮಾರಿಜಾತ್ರೆಯಲ್ಲಿ ಮುಸ್ಲಿಮರ ಅಂಗಡಿಯಲ್ಲಿ ವ್ಯಾಪರ ವಹಿವಾಟು ನಡೆಸದಿರಲು ಹಿಂದುಗಳು ತೀರ್ಮಾನಿಸಿದ್ದರು. ಇದೀಗ ಜಾತ್ರೆ ವ್ಯಾಪಾರಿಗಳ ಒಕ್ಕೂಟದ ಕಾರ್ಯದರ್ಶಿ ಆರಿಫ್ ಉಡುಪಿಯಲ್ಲಿ ಹಿಂದೂ-ಮುಸ್ಲಿಂ ಸಂಘರ್ಷಕ್ಕೆ ಅವಕಾಶವಿಲ್ಲ ಎಂದು ಹೇಳಿದ್ದಾರೆ.
ನಾವು ಸಂಕಷ್ಟದಲ್ಲಿದ್ದಾಗ ಹಿಂದೂ ಮುಖಂಡರು ನಮಗೆ ಸಹಾಯ ಮಾಡಿದ್ದಾರೆ. ನಮ್ಮ ಧರ್ಮವನ್ನು ನಾವು ಪಾಲಿಸುತ್ತೇವೆ. ಹಾಗೆತೇ ಇತರ ಧರ್ಮಗಳನ್ನು ಗೌರವಿಸುತ್ತೇವೆ. ಜಾತ್ರೆಯಲ್ಲಿ ಪಾಲ್ಗೊಳ್ಳುವ 1,500 ವ್ಯಾಪಾರಿಗಳ ಪೈಕಿ 360 ಮಂದಿ ಮುಸ್ಲಿಂ ವ್ಯಾಪಾರಿಗಳಿದ್ದಾರೆ. ಕೊರೋನಾದಿಂದಾಗಿ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರಿದೆ. ಹೀಗಾಗಿ ಇಂತಹ ಸಂದರ್ಭದಲ್ಲಿ ಹಿಂದು-ಮುಸ್ಲಿಂ ಎನ್ನದೇ ಒಟ್ಟಾಗಿ ಸಾಗಬೇಕು ಎಂದು ಆರಿಫ್ ಕರೆಕೊಟ್ಟಿದ್ದಾರೆ.
ಇದನ್ನೂ ನೋಡಿ: Udupi: ಮಾರಿ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನೋ ಎಂಟ್ರಿ..!