ಮುಚ್ಚಿದ ಕಾರ್ಖಾನೆ, ದೈವದ ಮೊರೆ ಹೋದ ಸಕ್ಕರೆ ಕಾರ್ಖಾನೆ ಆಡಳಿತ!
ಸುಶಿಕ್ಷಿತರ ಜಿಲ್ಲೆ ಎಂದು ಕರೆಸಿಕೊಳ್ಳುವ ಉಡುಪಿ, ದೇವಾಲಯಗಳ ನಗರಿಯೂ ಹೌದು. ದೇವರು, ದೈವ, ನಂಬಿಕೆಗಳ ಮೇಲೆ ಇಲ್ಲಿ ಕಾರ್ಯ ನಡೆಯುತ್ತದೆ. ಇದೇ ನಂಬಿಕೆ ಸಕ್ಕರೆ ಕಾರ್ಖಾನೆಗೂ ಅನ್ವಯಿಸುತ್ತದೆ.
ಉಡುಪಿ (ಏ. 04): ಸುಶಿಕ್ಷಿತರ ಜಿಲ್ಲೆ ಎಂದು ಕರೆಸಿಕೊಳ್ಳುವ ಉಡುಪಿ, ದೇವಾಲಯಗಳ ನಗರಿಯೂ ಹೌದು. ದೇವರು, ದೈವ, ನಂಬಿಕೆಗಳ ಮೇಲೆ ಇಲ್ಲಿ ಕಾರ್ಯ ನಡೆಯುತ್ತದೆ. ಇದೇ ನಂಬಿಕೆ ಸಕ್ಕರೆ ಕಾರ್ಖಾನೆಗೂ ಅನ್ವಯಿಸುತ್ತದೆ. ಬ್ರಹ್ಮಾವರದ ಸಕ್ಕರೆ ಕಾರ್ಖಾನೆ ಆರ್ಥಿಕ ನಷ್ಟದಿಂದ ಮುಳುಗಡೆಯಾಗಿ 18 ವರ್ಷಗಳಾಗಿವೆ. ಆಡಳಿತ ಮಂಡಳಿ ಏನೆಲ್ಲಾ ಮಾಡಿದರೂ, ಆರ್ಥಿಕ ನೆರವು ಸಿಕ್ಕಿಲ್ಲ. ಇದೀಗ ದೇವರ ಮೊರೆ ಹೋಗಲು ನಿರ್ಧರಿಸಿದ್ದಾರೆ. ಕೇರಳದ ಜ್ಯೋತಿಷಿಗಳಿಂದ ಅಷ್ಟಮಮಗಲ ಪ್ರಶ್ನೆ ನೋಡಿಸಲು ಮುಂದಾಗಿದ್ದಾರೆ.