ಬೆಂಗಳೂರಿಗೆ ವಾಪಸ್ಸಾಗುವವರಿಗೆ ಗಡಿಗಳಲ್ಲಿ ಕೋವಿಡ್ ಟೆಸ್ಟ್
- ಅನ್‌ಲಾಕ್ ಹಿನ್ನಲೆಯಲ್ಲಿ ಬೆಂಗಳೂರಿಗೆ ವಾಪಸ್ಸಾಗುವವರ ಸಂಖ್ಯೆ ಹೆಚ್ಚಳ
-ನಗರದ ಗಡಿಗಳಲ್ಲಿ ರ್ಯಾಂಡಮ್ ಪರೀಕ್ಷಾ ತಂಡಗಳನ್ನು ನಿಯೋಜಿಸಲು ಬಿಬಿಎಂಪಿ ಮುಂದಾಗಿದೆ.
- ಹೊಸಕೋಟೆ ಗಡಿಭಾಗ, ತುಮಕೂರು ರಸ್ತೆ, ಮೈಸೂರು ರಸ್ತೆ, ದೊಡ್ಡಬಳ್ಳಾಪುರ ರಸ್ತೆ, ಬಳ್ಳಾರಿ ರಸ್ತೆಗಳಲ್ಲಿ ಟೆಸ್ಟ್
ಬೆಂಗಳೂರು (ಜೂ. 16): ಅನ್‌ಲಾಕ್ ಹಿನ್ನಲೆಯಲ್ಲಿ ಬೆಂಗಳೂರಿಗೆ ವಾಪಸ್ಸಾಗುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಸೋಂಕು ಹೆಚ್ಚಳ ಆತಂಕ ಉಂಟಾಗಿದ್ದು, ನಗರದ ಗಡಿಗಳಲ್ಲಿ ರ್ಯಾಂಡಮ್ ಪರೀಕ್ಷಾ ತಂಡಗಳನ್ನು ನಿಯೋಜಿಸಲು ಬಿಬಿಎಂಪಿ ಮುಂದಾಗಿದೆ. ಹೊಸಕೋಟೆ ಗಡಿಭಾಗ, ತುಮಕೂರು ರಸ್ತೆ, ಮೈಸೂರು ರಸ್ತೆ, ದೊಡ್ಡಬಳ್ಳಾಪುರ ರಸ್ತೆ, ಬಳ್ಳಾರಿ ರಸ್ತೆ ಸೇರಿದಂತೆ ಕೆಲವೆಡೆ ಪರೀಕ್ಷಾ ತಂಡಗಳು ಕಾರ್ಯನಿರ್ವಹಿಸಲಿವೆ. ಜೊತೆಗೆ ಲಸಿಕಾ ಅಭಿಯಾನಕ್ಕೂ ಆದ್ಯತೆ ನೀಡಲು ಬಿಬಿಎಂಪಿ ಆಯೋಜಿಸಿದೆ.
2 ತಿಂಗಳಲ್ಲಿ ಬೆಂಗಳೂರಿನಲ್ಲಿ ಏಳೂವರೆ ಲಕ್ಷ ಕೋವಿಡ್ ಕೇಸ್ ದಾಖಲು