Asianet Suvarna News Asianet Suvarna News

Karnataka Rain: ಪ್ರವಾಹದ ಜೊತೆ ಹುಚ್ಚಾಟ, ಬೈಕ್‌ನೊಂದಿಗೆ ಕೊಚ್ಚಿ ಹೋದ ಸವಾರ..!

ಕಳೆದ 2- 3 ದಿನಗಳಿಂದ ನಿರಂತರ ಸುರಿದ ಮಳೆಗೆ ರೈತರು ಅಕ್ಷರಶಃ ನಲುಗಿ ಹೋಗಿದ್ದಾರೆ. ಅತ್ತ ಮನೆ ಕಳೆದುಕೊಂಡ ಬಡ ಕುಟುಂಬಗಳು ವಾಸಕ್ಕೆ ಜಾಗ ಇಲ್ಲದೇ ಕಣ್ಣೀರಿಡುತ್ತಿವೆ. 

ಬೆಂಗಳೂರು (ನ. 22): ಕಳೆದ 2- 3 ದಿನಗಳಿಂದ ನಿರಂತರ ಸುರಿದ ಮಳೆಗೆ (Untimley Rain) ರೈತರು (Farmers) ಅಕ್ಷರಶಃ ನಲುಗಿ ಹೋಗಿದ್ದಾರೆ. ಅತ್ತ ಮನೆ ಕಳೆದುಕೊಂಡ ಬಡ ಕುಟುಂಬಗಳು ವಾಸಕ್ಕೆ ಜಾಗ ಇಲ್ಲದೇ ಕಣ್ಣೀರಿಡುತ್ತಿವೆ. ಮಕ್ಕಳಂತೆ ಬೆಳೆಸಿದ್ದ ಬೆಳೆ ಕಣ್ಮುಂದೆ ನೀರುಪಾಲಾಗಿದೆ.

Cyclone Effect: 10 ವರ್ಷಗಳಲ್ಲಿ 40 ಚಂಡಮಾರುತ, 800 ಕ್ಕೂ ಹೆಚ್ಚು ಸಾವು

ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಈವರೆಗೆ 24 ಮಂದಿ ಜೀವ ಕಳೆದುಕೊಂಡಿದ್ದಾರೆ. 9153 ಮನೆ, 5 ಲಕ್ಷ ಹೆಕ್ಟೇರ್‌ ಕೃಷಿ ಬೆಳೆ, 1,225 ಶಾಲೆ, 39 ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿ ಹಲವು ಕಡೆ ಹಾನಿಯಾಗಿದೆ. . ಉಳಿದಂತೆ 2,203 ಕಿ.ಮೀ. ಉದ್ದದ ರಸ್ತೆಗಳು, 165 ಸೇತುವೆಗಳು, 1225 ಶಾಲೆಗಳು, 39 ಪ್ರಾಥಮಿಕ ಆರೋಗ್ಯ ಕೇಂದ್ರ, 1,674 ವಿದ್ಯುತ್‌ ಕಂಬ, 278 ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿದೆ. ತಾಲೂಕಿನಲ್ಲಿ 2 ದಿನಗಳಿಂದ ಸುರಿದ ಮಳೆಗೆ ನೆನೆದು ಶೆಟೆರೋಗದಿಂದ ಅಂದಾಜು 50ಕ್ಕೂ ಅಧಿಕ ಕುರಿಗಳು ಮತ್ತು ಮೇಕೆಗಳು ಸಾವಿಗೀಡಾಗಿವೆ. ಇನ್ನು ಪ್ರವಾಹದ ನಡುವೆ ಹುಚ್ಚಾಟವಾಡಲು ಹೋದ ಸವಾರ, ಬೈಕ್ ನೊಂದಿಗೆ ಕೊಚ್ಚಿ ಹೋಗಿದ್ಧಾನೆ. 

 

Video Top Stories