ಬೆಂಕಿಗೆ ತುಪ್ಪ ಸುರಿದಂತೆ! ಕೊರೋನಾ ಟೈಮಲ್ಲಿ ಪಟಾಕಿ ಬಗ್ಗೆ ವೈದ್ಯರ ವಾರ್ನಿಂಗ್

ಚಳಿಗಾಲದಲ್ಲಿ ಸಹಜವಾಗಿ ಉಸಿರಾಟ ಸಂಬಂಧಿ ಕಾಯಿಲೆಗಳು ತೀವ್ರಗೊಳ್ಳುತ್ತವೆ. ಪಟಾಕಿಯಿಂದ ವಾಯುಮಾಲಿನ್ಯ ಜಾಸ್ತಿ ಆಗಿ, ಈಗಾಗಲೇ ಶ್ವಾಸಕೋಶ ಸಮಸ್ಯೆ, ಉಸಿರಾಟ ಹಾಗೂ ಅಲರ್ಜಿ ಸಮಸ್ಯೆ ಹೊಂದಿರುವವರಲ್ಲಿ ಇದು ಉಲ್ಬಣಗೊಳ್ಳುತ್ತದೆ. 

 

First Published Nov 7, 2020, 1:15 PM IST | Last Updated Nov 7, 2020, 1:24 PM IST

ಬೆಂಗಳೂರು (ನ. 07): ಚಳಿಗಾಲದಲ್ಲಿ ಸಹಜವಾಗಿ ಉಸಿರಾಟ ಸಂಬಂಧಿ ಕಾಯಿಲೆಗಳು ತೀವ್ರಗೊಳ್ಳುತ್ತವೆ. ಪಟಾಕಿಯಿಂದ ವಾಯುಮಾಲಿನ್ಯ ಜಾಸ್ತಿ ಆಗಿ, ಈಗಾಗಲೇ ಶ್ವಾಸಕೋಶ ಸಮಸ್ಯೆ, ಉಸಿರಾಟ ಹಾಗೂ ಅಲರ್ಜಿ ಸಮಸ್ಯೆ ಹೊಂದಿರುವವರಲ್ಲಿ ಇದು ಉಲ್ಬಣಗೊಳ್ಳುತ್ತದೆ. 

ವಾಯುಮಾಲಿನ್ಯ ಯಾಕೆ? ದೀಪಾವಳಿಗೆ ಹಸಿರು ಪಟಾಕಿ ಓಕೆ: ಸರ್ಕಾರದ ಆದೇಶ

ವಾಯುಮಾಲಿನ್ಯ ಹೆಚ್ಚಾದಾಗ ಕೊರೊನಾ ಸೋಂಕು ತಗುಲಿದರೆ ಉಸಿರಾಟದ ಸಮಸ್ಯೆ, ನ್ಯುಮೋನಿಯಾ ಸೇರಿದಂತೆ ಕಾಯಿಲೆಯ ತೀವ್ರತೆ ಜಾಸ್ತಿ ಆಗುತ್ತದೆ. ಇದರಿಂದ ಪ್ರಾಣಹಾನಿ ಹೆಚ್ಚಾಗಬಹುದು. ಹಾಗಾಗಿ ಪಟಾಕಿ ಹೊಡೆಯುವುದನ್ನು ಆದಷ್ಟು ಕಡಿಮೆ ಮಾಡೋಣ. ಪಟಾಕಿಯನ್ನು ಬಿಟ್ಹಾಕಿ, ದೀಪಗಳನ್ನು ಹಚ್ಚಿ ದೀಪಾವಳಿಯನ್ನು ಆಚರಿಸೋಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

Video Top Stories