Asianet Suvarna News Asianet Suvarna News

ಚಂಡಮಾರುತದ ನಡುವೆ ಜನರಿಗೆ ಮಂಗಳೂರು ಬೀಚ್‌ನಲ್ಲಿ ಸೆಲ್ಫಿ ಕ್ರೇಜ್..!

ನಿಸರ್ಗ ಸೈಕ್ಲೋನ್ ಕಾರಣದಿಂದಾಗಿ ಈಗಾಗಲೇ ಕರ್ನಾಟಕದ ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇಂತಹ ಸಂದರ್ಭದಲ್ಲಿ ಕೆಲವು ಪ್ರವಾಸಿಗಳು ಆಳೆತ್ತರದ ಪ್ರವಾಹದ ಜತೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.

First Published Jun 3, 2020, 1:17 PM IST | Last Updated Jun 3, 2020, 1:49 PM IST

ಮಂಗಳೂರು(ಜೂ.03): ಒಂದು ಕಡೆ ನಿಸರ್ಗ ಚಂಡಮಾರುತದ ಎಚ್ಚರಿಕೆಯಿದೆ, ಮತ್ತೊಂದೆಡೆ ಪ್ರವಾಸಿಗರಿಗೆ ಬೀಚ್‌ನಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುವ ಹುಚ್ಚಾಟ ನಡೆಸುತ್ತಿದ್ದಾರೆ. ಮಂಗಳೂರಿನ ಉಳ್ಳಾಲ ಬೀಚ್‌ನಲ್ಲಿ ಪ್ರವಾಸಿಗರ ದಂಡೇ ನೆರೆದಿದೆ.

ನಿಸರ್ಗ ಸೈಕ್ಲೋನ್ ಕಾರಣದಿಂದಾಗಿ ಈಗಾಗಲೇ ಕರ್ನಾಟಕದ ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇಂತಹ ಸಂದರ್ಭದಲ್ಲಿ ಕೆಲವು ಪ್ರವಾಸಿಗಳು ಆಳೆತ್ತರದ ಪ್ರವಾಹದ ಜತೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.

ನಿಸರ್ಗ ಸೈಕ್ಲೋನ್ ಅಬ್ಬರ; ಮುಂಬೈನಲ್ಲಿ ಢವಢವ..!

ಲಾಕ್‌ಡೌನ್‌ನಿಂದಾಗಿ ಈಗಾಗಲೇ ಬೀಚ್‌ಗಳಿಗೆ  ಪ್ರವಾಸಿಗರು ಬರುವಂತಿಲ್ಲ ಎನ್ನುವ ಕಟ್ಟುನಿಟ್ಟಿನ ಸೂಚನೆಯನ್ನು ಮಂಗಳೂರು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ನೀಡಿದೆ. ಆದರೆ ಅಂತರ್‌ಜಿಲ್ಲಾ ಓಡಾಟಕ್ಕೆ ಅನುಮತಿ ನೀಡುತ್ತಿದ್ದಂತೆ ಪ್ರವಾಸಿಗರು ಬೀಚ್‌ಗಳತ್ತ ಬರಲಾರಂಭಿಸಿದ್ದಾರೆ. ಆದರೆ ಪೊಲೀಸ್ ಇಲಾಖೆ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

Video Top Stories