Asianet Suvarna News Asianet Suvarna News

Hamsalekha Remarks:ಹಂಸಲೇಖ ಪರ ಶಾಸಕ ಪ್ರಿಯಾಂಕ್ ಖರ್ಗೆ ಬ್ಯಾಟಿಂಗ್

ಪೇಜಾವರ ವಿಶ್ವೇಶತೀರ್ಥರ ಬಗ್ಗೆ ಹಂಸಲೇಖ ನೀಡಿದ್ದ ಹೇಳಿಕೆಗೆ  ಪರ-ವಿರೋಧಗಳು ವ್ಯಕ್ತವಾಗುತ್ತಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ,ಇನ್ನು ಈ ಬಗ್ಗೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು, (ನ.25): ಪೇಜಾವರ ವಿಶ್ವೇಶತೀರ್ಥರ ಬಗ್ಗೆ ಹಂಸಲೇಖ ನೀಡಿದ್ದ ಹೇಳಿಕೆಗೆ  ಪರ-ವಿರೋಧಗಳು ವ್ಯಕ್ತವಾಗುತ್ತಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ,

Remark Against Pejawara Shri : ವಿಚಾರಣೆಗೆ ಹಾಜರಾದ ಹಂಸಲೇಖ - ಪರ, ವಿರೋಧಿ ಪ್ರತಿಭಟನೆ

ಇನ್ನು ಈ ಬಗ್ಗೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, ನಾದಬ್ರಹ್ಮ ಹಂಸಲೇಖ ಹೇಳಿಕೆಯಲ್ಲಿ ಯಾವ ತಪ್ಪೂ ಇಲ್ಲ. ಕೆಲವು ಮನುವಾದಿಗಳು ವಿರೋಧ ಮಾಡುತ್ತಾರೆ. ಕುಲ ಕಸುಬಿನ ಪ್ರಕಾರ ಆಹಾರ ಪದ್ಧತಿ ಇರುತ್ತೆ. ಇಂಥದ್ದೇ ಆಹಾರ ಸ್ವೀಕರಿಸಿ ಎಂದು ಹೇಳಲು ಆಗುವುದಿಲ್ಲ. ಬಿಜೆಪಿಯವರು ದಲಿತರ ಮತ್ತು ಹಿಂದುಳಿದವರ ಪರವಾಗಿಲ್ಲ ಎಂದು ಹಂಸಲೇಖ ಪರ ಬ್ಯಾಟಿಂಗ್ ಮಾಡಿದರು.