Asianet Suvarna News Asianet Suvarna News

Chamarajanagar: .ಮಲೆ ಮಹದೇಶ್ವರನ ಹುಂಡಿಯಲ್ಲಿ 1.67 ಕೋಟಿ ಹಣ ಸಂಗ್ರಹ

ಚಾಮರಾಜನಗರ (Chamarajanagar) ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಯಾತ್ರ ಸ್ಥಳ ಮಲೆಮಹದೇಶ್ವರ (Male Mahadeshwara) ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ನಡೆದ ಹುಂಡಿಗಳ ಎಣಿಕೆಯಲ್ಲಿ ಈ ಬಾರಿ 28 ದಿನದ ಅವಧಿಯಲ್ಲಿ 1.67 ಕೋಟಿ ರು. ಸಂಗ್ರಹವಾಗಿದೆ.
 

ಚಾಮರಾಜನಗರ (ನ. 28): ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಯಾತ್ರ ಸ್ಥಳ ಮಲೆಮಹದೇಶ್ವರ (Male Mahadeshwara) ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ನಡೆದ ಹುಂಡಿಗಳ ಎಣಿಕೆಯಲ್ಲಿ ಈ ಬಾರಿ 28 ದಿನದ ಅವಧಿಯಲ್ಲಿ 1.67 ಕೋಟಿ ರು. ಸಂಗ್ರಹವಾಗಿದೆ.

Mangaluru: ಅಂದು ಕೊರಗಜ್ಜ..ಇಂದು ನಾಗದೇವರ ಪವಾಡ, ಅಪಚಾರ ಮಾಡಿದವರಿಗೆ ಶಿಕ್ಷೆ

ಕೊರೋನಾ ಸೊಂಕು ತಗ್ಗಿದ ಪರಿಣಾಮ ಮಾದಪ್ಪನ ಸನ್ನಿಧಿಯಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅಮಾವಾಸ್ಯೆ, ಹುಣ್ಣಿಮೆ, ಕಾರ್ತಿಕ ಸೋಮವಾರಗಳಂದು ಬೆಂಗಳೂರು, ಕನಕಪುರ, ಚನ್ನಪಟ್ಟಣ, ರಾಮನಗರ, ಮೈಸೂರು, ಮಂಡ್ಯ, ಚಾಮರಾಜನಗರ, ಮಳವಳ್ಳಿ ಸೇರಿದಂತೆ ರಾಜ್ಯದ ಇತರೆ ಕಡೆಗಳಿಂದ ಸಾವಿರಾರು ಭಕ್ತರು ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು. ಈ ವೇಳೆ ಭಕ್ತರು ಇಷ್ಟಾರ್ಥವಾಗಿ ಹಣ, ಚಿನ್ನ ಹಾಗೂ ಬೆಳ್ಳಿ ಪದಾರ್ಥಗಳನ್ನು ಹುಂಡಿಗೆ ಹಾಕಿದ್ದರು. ಹುಂಡಿಗಳ ಎಣಿಕೆಯಲ್ಲಿ 28ದಿನಗಳ ಅವಧಿಯಲ್ಲಿ ಈ ಬಾರಿ 1,67,07,270 ರು. ನಗದು, ಚಿನ್ನ 55 ಗ್ರಾಂ ಹಾಗೂ ಬೆಳ್ಳಿ 2,050 ಗ್ರಾಂ ಸಂಗ್ರಹವಾಗಿದೆ. ಕಳೆದ ಬಾರಿ 1,29,82,174 ರು. ನಗದು, 44 ಗ್ರಾಂ ಚಿನ್ನ ಹಾಗೂ 1,300 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.

Video Top Stories