Asianet Suvarna News Asianet Suvarna News

Yash: ನಂದಿ ಬೆಟ್ಟದಲ್ಲಿ ಯಶ್-ರಾಧಿಕಾ ಮದುವೆ ವಾರ್ಷಿಕೋತ್ಸವ: ಫೋಟೋ ವೈರಲ್

ಯಶ್ ಮತ್ತು ರಾಧಿಕಾ ಪಂಡಿತ್ ತಮ್ಮ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದು, ನಂದಿಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಫೋಟೋಗಳು ವೈರಲ್ ಆಗಿವೆ.
 

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಇಬ್ಬರೂ ಒಟ್ಟಿಗೆ ಸಿನಿಮಾ ಜರ್ನಿ ಆರಂಭಿಸಿದವರು. ಮೊದಲು ಹಲವು ಧಾರಾವಾಹಿಗಳಲ್ಲಿ ನಟಿಸಿದ ಇವರಿಬ್ಬರೂ ಮುಂದೆ ಸಿನಿಮಾಗಳಲ್ಲಿಯೂ ಒಟ್ಟಿಗೆ ಅಭಿನಯಿಸಿದರು. ನಂತರ ಸ್ಯಾಂಡಲ್ ವುಡ್ ಕ್ಯೂಟ್ ಪೇರ್ ಎಂದೇ ಪ್ರಸಿದ್ಧರಾದರು. ಬಳಿಕ ಯಶ್ ಮತ್ತು ರಾಧಿಕಾ ಪಂಡಿತ್ ಅದ್ದೂರಿ ಮದುವೆ ಮಾಡಿಕೊಂಡರು. ಸ್ಯಾಂಡಲ್ ವುಡ್ ಸ್ಟಾರ್ ಜೋಡಿಗಳಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿ ಕೂಡ ಒಂದು. ಸಧ್ಯ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ತಮ್ಮ 6ನೇ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಈ ಹಿನ್ನೆಲೆ ನಂದಿಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಈ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳು ವೈರಲ್ ಆಗಿವೆ.

ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ಮನೆ 2 ವರ್ಷದಿಂದ ಖಾಲಿ; ತಲೆ ಕೆಡಿಸಿಕೊಂಡ ಓನರ್