Asianet Suvarna News Asianet Suvarna News

'ಟಗರು ಪಲ್ಯ' ತಿಂದು ತೇಗಿದ ಮೈಸೂರು ಮಂದಿ: ಮಳವಳ್ಳಿ, ಕೊಳ್ಳೇಗಾಲದಲ್ಲೂ ಟಗರು ಪಲ್ಯ ಭಾರಿ ರುಚಿ!

ಟಗರು ಪಲ್ಯ ಸಕ್ಸಸ್, ಥಿಯೇಟರ್ ಪ್ರವಾಸದಲ್ಲಿ ಡಾಲಿ ಟೀಂ
ಧನಂಜಯ್ ನಿರ್ಮಾಣ ಉಮೇಶ್ ಕೆ ಕೃಪಾ ನಿರ್ದೇಶನ..!
ನಾಗಭೂಷನ್, ಅಮೃತಾ ನಟನೆಗೆ ಭೇಷ್ ಎಂದ ಪ್ರೇಕ್ಷಕ..!

ನಾಟಿ ಹಿಟ್ ಟಗರು ಪಲ್ಯ ಸಿನಿಮಾ ಜನ ಮನ ಗೆದ್ದಿದೆ. ಬರೀ ಜನ ಮನ ಗೆದ್ದಿದ್ದಷ್ಟೆ ಅಲ್ಲ. ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ. ಮನೆ ಮಂದಿಯೆಲ್ಲಾ ಈ ಸಿನಿಮಾಗಾಗಿ ಚಿತ್ರಮಂದಿರಕ್ಕೆ ನುಗ್ಗುತ್ತಿದ್ದಾರೆ. ಟಗರು ಪಲ್ಯದ(Tagaru Palya) ರುಚಿಯನ್ನ ಹೇಗೆ ಎಂಜಾಯ್ ಮಾಡುತ್ತಿದ್ದಾರೆ ಅಂತ ಕಣ್ಣಾರೆ ನೋಡೋಕೆ ಇಡೀ ಟಗರು ಪಲ್ಯ ಟೀಂ ರಾಜ್ಯ ಪ್ರವಾಸ ಹೊರಟಿಗೆ. ಡಾಲಿ ಧನಂಜಯ್(Dolly Dhananjay) ನಿರ್ಮಾಣದ ಈ ನಾಟಿ ಸ್ಟೈಲ್  ಟಗರು ಪಲ್ಯವನ್ನ ಮೈಸೂರು ಮಂದಿ ಬಿಗಿ ದಪ್ಪಿದ್ದಾರೆ. ಮೈಸೂರಿನ ಡಿಆರ್ಎಸ್ ಚಿತ್ರಮಂದಿರ ಹಾಗು ಸಂಗಮ್ ಚಿತ್ರಮಂದಿರಗಳು ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಪ್ರೇಕ್ಷಕರ ಜೊತೆ ನಟ ನಾಗಭೂಷಣ್, ಅಮೃತಾ ಪ್ರೇಮ್, ರಂಗಾಯಣರಘು, ತಾರಾ ಅನುರಾಧ ಖುಷಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ಮಳವಳ್ಳಿ ಕೊಳ್ಳೇಗಾಲದಲ್ಲೂ ಟಗರು ಪಲ್ಯ ಭರ್ಜರಿ ಪ್ರದರ್ಶನ ನಾಣುತ್ತಿದೆ. ಕೊಳ್ಳೇಗಾಲದ ಶ್ರೀನಿವಾಸ ಚಿತ್ರಮಂದಿರ ಹಾಗು ಮಳವಳ್ಳಿಯ ರಾಜರಾಜೇಶ್ವರಿ ಥಿಯೇಟರ್ಗಳಲ್ಲಿ ಪ್ರೇಕ್ಷಕರನ್ನ ಭೇಟಿ ಮಾಡಿರೋ ಟಗರು ಪಲ್ಯ ಟೀಂ ನಿಮ್ಮ ಬೆಂಬಲಕ್ಕೆ ನಮ್ಮ ದಿಲ್ ಖುಷ್ ಎಂದಿದ್ದಾರೆ. 

ಇದನ್ನೂ ವೀಕ್ಷಿಸಿ:  ಕೋಟ್ಯಾಂತರ ಅಭಿಮಾನಿಗಳಿಗೆ ರಜನಿಯೇ ದೇವರು: ವಿಗ್ರಹ ನಿರ್ಮಿಸಿ ದೇವಸ್ಥಾನ ಕಟ್ಟಿದ ಫ್ಯಾನ್‌..!

Video Top Stories