ಕೋಟ್ಯಾಂತರ ಅಭಿಮಾನಿಗಳಿಗೆ ರಜನಿಯೇ ದೇವರು: ವಿಗ್ರಹ ನಿರ್ಮಿಸಿ ದೇವಸ್ಥಾನ ಕಟ್ಟಿದ ಫ್ಯಾನ್‌..!

ಕಲಾವಿದರು ತಮ್ಮ ಕಲೆಯನ್ನೇ ದೇವರು ಅಂತ ಆರಾಧಿಸುತ್ತಾರೆ. ಆದ್ರೆ ಆ ಕಲಾವಿದರನ್ನೇ ದೇವರು ಅಂತ ಆರಾಧಿಸಿ ಪೂಜಿಸಿ ಪ್ರೀತಿಸೋದು ಮಾತ್ರ ಅಭಿಮಾನಿಗಳು. ಡಾಕ್ಟರ್ ರಾಜ್ ಕುಮಾರ್ ಇಂದು ಅವರ ಪ್ರತಿಯೊಬ್ಬ ಫ್ಯಾನ್ಸ್‌ ದೇವರು. ಅಣ್ಣಾವ್ರ ಸಮಾಧಿ ಅಭಿಮಾನಿಗಳ ಪಾಲಿಗೆ ದೇವರ ಗುಡಿ. ಅಲ್ಲಿ ಬಂದು ಪೂಜಿಸಿ ನಮಿಸಿ ಹೋದ್ರೆ ಮಾತ್ರ ಅಭಿಮಾನಿಗಳಿಗೆ ನೆಮ್ಮದಿ.
 

First Published Nov 4, 2023, 12:21 PM IST | Last Updated Nov 4, 2023, 12:21 PM IST

ಈಗ ಇದೇ ದೇವರ ಸ್ವರೂಪದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಾಣುತ್ತಿದ್ದಾರೆ. ಅಪ್ಪುರನ್ನ ಮನೆ ದೇವರಂತೆ ಆರಾಧಿಸುತ್ತಾರೆ. ಈಗ ಈ ದೇವರ ಬಗ್ಗೆ ಯಾಕ್ ಹೇಳ್ತಿದ್ದೇವೆ ಗೊತ್ತಾ..? ಅದಕ್ಕೆ ಕಾರಣ ಸೂಪರ್ ಸ್ಟಾರ್ ರಜನಿಕಾಂತ್. ಸೂಪರ್ ಸ್ಟಾರ್ ರಜನಿಕಾಂತ್(Rajinikanth). ವಯಸ್ಸು 72 ಆದ್ರೂ ಅದೇ ಚಾರ್ಮ್ ಅದೇ ಖದರ್ ಇರೋ ಸೂಪರ್ ಸ್ಟಾರ್. ಅವ್ರು ಅದೆಷ್ಟೋ ಫ್ಯಾನ್ಸ್‌ಗೆ(Fans)ಆರಾಧ್ಯ ದೈವ. ಅವರ ಮಾತೇ ಅಭಿಮಾನಿಗಳ ಪಾಲಿಗೆ ವರ. ಇದೀಗ ಅಭಿಮಾನಿಗಳು ತಮ್ಮ ಆರಾಧ್ಯ ಧೈವ ರಜನಿ ಮೇಲಿನ ಅಭಿಮಾನವನ್ನ ಮುಗಿಲೆತ್ತರಕ್ಕೆರಿಸಿದ್ದಾರೆ. ಅದು ರಜನಿಯ ದೇವಸ್ಥಾನ(Temple) ಕಟ್ಟಿ ಪೂಜೆ ಮಾಡೋ ಮೂಲಕ. ತಮಿಳುನಾಡಿನಲ್ಲಿರೋ ರಜನಿಕಾಂತ್ರ ಅಪ್ಪಟ ಅಭಿಮಾನಿ ಕಾರ್ತಿಕ್ ರಜನಿಕಾಂತ್ರ ದೇವಸ್ಥಾನ ಕಟ್ಟಿದ್ದಾರೆ. ಶಿವನಿಗೆ ಹೇಗೆ ಕಲ್ಲಿನಲ್ಲಿ ದೇವಾಲಯ ಕಟ್ಟುತ್ತಾರೋ ಹಾಗೆ 250 ಕೆಜಿ ತೂಕದ ರಜನಿ ಪ್ರತಿಮೆಯನ್ನು ಈ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದಾರೆ. ದೇವಸ್ಥಾನದಲ್ಲಿ ನಿತ್ಯ ಹೇಗೆ ಪೂಜೆ ಆಗುತ್ತೋ ಅದೇ ರೀತಿ ರಜನಿಗೆ ಇಲ್ಲಿ ಅರ್ಚಕರಿಂದ ನಿತ್ಯ ಪೂಜೆ ನಡೆಯುತ್ತೆ. ಸಾಮಾನ್ಯವಾಗಿ ಸೂಪರ್ ಸ್ಟಾರ್ಗಳ ಪುತ್ತಳಿ ಇಟ್ಟು ಹಾರ ಹಾಕಿ ಊರು ಕೇರಿ ರಸ್ತೆಗೆ ಅವರ ಹೆಸರನ್ನ ನಾಮಕರಣ ಮಾಡೋದನ್ನ ನೋಡಿದ್ದೇವೆ. ಆದ್ರೆ ಆ ಸ್ಟಾರ್ ಹೆಸರಲ್ಲಿ ದೇವಸ್ಥಾನ ಅಂತ ಆಗಿದ್ದು ತೀರಾ ವಿರಳ. ಈ ಹಿಂದೆ ನಟಿ ‘ರಣಧೀರ’ನ ನಾಯಕಿ ಖುಷ್ಬೂಗೂ ಗುಡಿ ಕಟ್ಟಿದ್ರು. ಅಷ್ಟೆ ಯಾಕೆ ಲೇಡಿ ಸೂಪರ್ ಸ್ಟಾರ್ ನಯನತಾರಾಗೂ ದೇವಸ್ಥಾನ ಆಗಿದೆ. ಆಂಧ್ರ ಪ್ರದೇಶದಲ್ಲಿ ನಟ ಸಮಂತಾ ಅಭಿಮಾನಿಗಳು ದೇವಸ್ಥಾನ ನಿರ್ಮಿಸಿ ಸಮಂತಾರನ್ನ ಪೂಜೆ ಮಾಡುತ್ತಿದ್ದಾರೆ. ನಮ್ ಕಿಚ್ಚ ಸುದೀಪ್ಗೂ ಪುತ್ತಳಿ ಮಾಡಿ ಪೂಜೆ ಮಾಡಿದ್ದ ಉದಹಾರಣೆ ಇದೆ. ಆದ್ರೆ ಈಗ ತಲೈವ ರಜನಿಕಾಂತ್ಗೆ ದೇವಸ್ಥಾನ ನಿರ್ಮಾಣ ಆಗಿದ್ದು ದಿನ ನಿತ್ಯ ಪೂಜೆ ನಡೆಯುತ್ತಿದೆ. ಇದು ತಮಿಳು ನಾಡಿನಲ್ಲಿರೋ ರಜನಿಕಾಂತ್ ಅಭಿಮಾನಿಗಳ ಪುಣ್ಯಕ್ಷೇತ್ರ ಆದ್ರೂ ಆಶ್ಚರ್ಯವೇನಿಲ್ಲ.

ಇದನ್ನೂ ವೀಕ್ಷಿಸಿ:  ಮತ್ತೊಂದು ದೊಡ್ಡ ಎಕ್ಸ್‌ಪಿರಿಮೆಂಟ್‌ನಲ್ಲಿ ವಿಕ್ರಂ: ಮೈ ನಡುಗಿಸುವಂತೆ ಎಂಟ್ರಿ ಕೊಟ್ಟ ಚಿಯಾನ್..!