Asianet Suvarna News Asianet Suvarna News

ನಾವು ಅಣ್ಣ-ತಮ್ಮಂದಿರ ಹಾಗಿದ್ದೆವು, 45 ವರ್ಷಗಳ ಒಡನಾಟ ನಮ್ಮದು: ಎಸ್‌ಪಿಬಿ ಆಪ್ತ

ಗಾನ ಗಾರುಡಿಗ, ಸ್ವರ ಮಾಂತ್ರಿಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಇಂದು ವಿಧಿವಶರಾಗಿದ್ದಾರೆ. ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ನಿಜಕ್ಕೂ ಇಂದು ಅತ್ಯಂತ ದುಃಖಕರವಾದ ದಿನ. ಎಸ್‌ಪಿಬಿ ಹಾಡುಗಳನ್ನು ಯಾರೂ ಕೂಡಾ ಮರೆಯಲಾಗದೇ ಇರುವಂತದ್ದು. 

ಬೆಂಗಳೂರು (ಸೆ. 25): ಗಾನ ಗಾರುಡಿಗ, ಸ್ವರ ಮಾಂತ್ರಿಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಇಂದು ವಿಧಿವಶರಾಗಿದ್ದಾರೆ. ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ನಿಜಕ್ಕೂ ಇಂದು ಅತ್ಯಂತ ದುಃಖಕರವಾದ ದಿನ. ಎಸ್‌ಪಿಬಿ ಹಾಡುಗಳನ್ನು ಯಾರೂ ಕೂಡಾ ಮರೆಯಲಾಗದೇ ಇರುವಂತದ್ದು. ಎಸ್‌ಪಿಬಿ ಜೊತೆ 45 ಕ್ಕೂ ಹೆಚ್ಚು ವರ್ಷಗಳ ಕಾಲ ಒಡನಾಟ ಇಟ್ಟುಕೊಂಡಿದ್ದ, ಆತ್ಮೀಯ ವಯದಲ್ಲಿ ಗುರುತಿಸಿಕೊಂಡಿದ್ದ ಓಬಯ್ಯ ತಮ್ಮ ಒಡನಾಟವನ್ನು ಸುವರ್ಣ ನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ. 

ಮಗಳು ಪಲ್ಲವಿಗಾಗಿ ಈ ಚಟವನ್ನೇ ಬಿಟ್ಟಿದ್ದರು SPB!

'ಬೆಂಗಳೂರಿಗೆ ಬಂದಾಗಲೆಲ್ಲಾ ನಮ್ಮ ಮನೆಗೆ ಬರುತ್ತಿದ್ದರು. ನಮ್ಮ ಮನೆಯಲ್ಲಿ ಊಟ ಮಾಡುತ್ತಿದ್ದರು. ಆಗಾಗ ಕಾಲ್ ಮಾಡಿ ಮಾತಾಡ್ತಾ ಇದ್ದೆವು. ಸ್ವಲ್ಪವೂ ಅಹಂಕಾರ ಇಲ್ಲದ ವ್ಯಕ್ತಿ ಅವರು' ಎಂದು ಓಬಯ್ಯಾ ಸ್ಮರಿಸಿಕೊಳ್ಳುತ್ತಾರೆ.