Asianet Suvarna News Asianet Suvarna News

Kantara: ಬೆಂಗಳೂರಿನಲ್ಲಿ ಇತಿಹಾಸ ಬರೆದ 'ಕಾಂತಾರ': ಏನದು ಹೊಸ ದಾಖಲೆ?

'ಕಾಂತಾರ' ಸಿನಿಮಾ ಬೆಂಗಳೂರಿನಲ್ಲಿ ಹೊಸ ದಾಖಲೆ ಬರೆದಿದ್ದು, ಈ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ ರಿಷಬ್ ಶೆಟ್ಟಿ.
 

ಕರ್ನಾಟಕದಲ್ಲಿ 183 ಕೋಟಿ ಕಲೆಕ್ಷನ್ ಮಾಡಿ ಕೆಜಿಎಫ್ ದಾಖಲೆಯನ್ನೇ ಬ್ರೇಕ್ ಮಾಡಿರುವ ಕಾಂತಾರ, ಕನ್ನಡದಲ್ಲಿ ಒಂದು ಕೋಟಿಗೂ ಅಧಿಕ ಮಂದಿ ನೋಡಿದ ಸಿನಿಮಾ ಕೂಡ ಆಗಿತ್ತು. ಇದೀಗ ಕಾಂತಾರ ರೆಕಾರ್ಡ್ ಬುಕ್'ಗೆ ಮತ್ತೊಂದು ದಾಖಲೆ ಸೇರ್ಪಡೆಯಾಗಿದೆ. ಬೆಳ್ಳಿತೆರೆ ಮೇಲೆ 75 ದಿನ ಪೂರೈಸುವ ಹೊಸ್ತಿಲಲ್ಲಿರೋ ಕಾಂತಾರ ಕರ್ನಾಟಕದ ಕ್ಯಾಪಿಟಲ್ ಸಿಟಿ ಬೆಂಗಳೂರಲ್ಲಿ ಇತಿಹಾಸ ಸೃಷ್ಟಿಸಿದೆ. ಕಾಂತಾರ ಸಿನಿಮಾ ಬೆಂಗಳೂರು ನಗರವೊಂದರಲ್ಲಿಯೇ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್ ಎರಡೂ ಸೇರಿ 20,000 ಪ್ರದರ್ಶನಗಳನ್ನು ಕಂಡಿದೆ. ಇದು ಬೆಂಗಳೂರು ನಗರದಲ್ಲಿ ಯಾವ ಸಿನಿಮಾವು ಮಾಡಿರದ ದಾಖಲೆಯಾಗಿದೆ.

ಯೋಗರಾಜ್ ಭಟ್ಟರ 'ಪದವಿ ಪೂರ್ವ' ದರ್ಶನಕ್ಕೆ ಡೇಟ್ ಫಿಕ್ಸ್