Asianet Suvarna News Asianet Suvarna News

ಯೋಗರಾಜ್ ಭಟ್ಟರ 'ಪದವಿ ಪೂರ್ವ' ದರ್ಶನಕ್ಕೆ ಡೇಟ್ ಫಿಕ್ಸ್

ಯೋಗರಾಜ್‌ ಭಟ್‌ ಅವರ ಮಾರ್ಗದರ್ಶನದಲ್ಲಿ, ಅವರದ್ದೇ ನಿರ್ಮಾಣ ಸಂಸ್ಥೆ ಯೋಗರಾಜ್‌ ಭಟ್‌ ಮೂವೀಸ್‌ ಹಾಗೂ ರವಿ ಶ್ಯಾಮನೂರ್‌ ಫಿಲಮ್ಸ್ ಬ್ಯಾನರ್‌ನಲ್ಲಿ ರೆಡಿಯಾಗಿರೋ ಯೂತ್‌ಫುಲ್‌ ಲವ್‌ ಸ್ಟೋರಿ ʻಪದವಿ ಪೂರ್ವʼ ಈ ವರ್ಷದ ಕೊನೆಯ ವಾರ ಅಂದರೆ ಡಿಸೆಂಬರ್ 30ಕ್ಕೆ ರಿಲೀಸ್‌ ಆಗ್ತಾ ಇದೆ. 

padavi poorva kannada movie released on December 30th sgk
Author
First Published Nov 26, 2022, 5:57 PM IST

ಯೋಗರಾಜ್‌ ಭಟ್‌ ಅವರ ಮಾರ್ಗದರ್ಶನದಲ್ಲಿ, ಅವರದ್ದೇ ನಿರ್ಮಾಣ ಸಂಸ್ಥೆ ಯೋಗರಾಜ್‌ ಭಟ್‌ ಮೂವೀಸ್‌ ಹಾಗೂ ರವಿ ಶ್ಯಾಮನೂರ್‌ ಫಿಲಮ್ಸ್ ಬ್ಯಾನರ್‌ನಲ್ಲಿ ರೆಡಿಯಾಗಿರೋ ಯೂತ್‌ಫುಲ್‌ ಲವ್‌ ಸ್ಟೋರಿ ʻಪದವಿ ಪೂರ್ವʼ ಈ ವರ್ಷದ ಕೊನೆಯ ವಾರ ಅಂದರೆ ಡಿಸೆಂಬರ್ 30ಕ್ಕೆ ರಿಲೀಸ್‌ ಆಗ್ತಾ ಇದೆ. ಯೋಗರಾಜ್‌ ಭಟ್‌ ಅವರ ಗರಡಿಯಲ್ಲಿ ಪಳಿಗಿರೋ ಹರಿಪ್ರಸಾದ್‌ ಜಯಣ್ಣ ಮೊದಲ ಬಾರಿಗೆ ನಿರ್ದೇಶನದ ಕ್ಯಾಪ್‌ ತೊಟ್ಟು ಆಕ್ಷನ್‌ ಕಟ್‌ ಹೇಳುತ್ತಿರುವ ಹದಿಹರೆಯದ ಲವ್‌ ಸ್ಟೋರಿಯ ಈ ಸಿನಿಮಾ ಬಗ್ಗೆ ಇಂಡಸ್ಟ್ರಿಯಲ್ಲಿ ಈಗಾಗಲೇ ಟಾಕ್‌ ಶುರುವಾಗಿದೆ.

ಪದವಿ ಪೂರ್ವ ಸಿನಿಮಾ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಹ್ಯಾಂಡಸಮ್‌ ಹುಡುಗ ಪೃಥ್ವಿ ಶ್ಯಾಮನೂರ್‌ ಎಂಟ್ರಿಕೊಡ್ತಾ ಇದ್ದಾರೆ. ಚಾಕ್ಲೆಟ್‌ ಹೀರೋ ಹಾಗೆ ಇರೋ ಪೃಥ್ವಿಗೆ ಅಂಜಲಿ ಅನೀಶ್‌ ನಾಯಕಿಯಾಗಿದ್ದಾರೆ. ಇವರ ಜೊತೆಗೆ ಈಗಾಗ್ಲೆ ಮಾನ್ಸೂನ್‌ ರಾಗ ಹಾಗೂ ಭೈರಾಗಿ ಸಿನಿಮಾಗಳಲ್ಲಿ ಮಿಂಚಿ, ಸ್ಯಾಂಡಲ್‌ವುಡ್‌ನಲ್ಲಿ ಬೇಡಿಕೆಯ ನಟಿಯಾಗಿ ಮಿಂಚ್ತಾ ಇರೋ ಯಶ ಶಿವಕುಮಾರ್‌ ಮತ್ತೊಂದು ಲೀಡ್‌ ಪಾತ್ರದಲ್ಲಿ ನಟಿಸ್ತಾ ಇದ್ದಾರೆ. 

ಮ್ಯಾಜಿಕಲ್‌ ಕಂಪೋಸರ್‌ ಅರ್ಜುನ್‌ ಜನ್ಯಾ ಈ ಯೂಥ್‌ಫುಲ್‌ ಲವ್‌ ಸ್ಟೋರಿಗೆ ಮ್ಯೂಸಿಕ್‌ ಕಂಪೋಸ್‌ ಮಾಡ್ತಾ ಇದ್ದು, ಟೀನೇಜ್‌ ಲವ್‌ ಸ್ಟೋರಿಗಳನ್ನು ಬ್ಯೂಟಿಫುಲ್ಲಾಗಿ ಕಟ್ಟಿಕೊಡುವ ಕ್ಯಾಮರಾಮನ್‌ ಸಂತೋಷ್‌ ರೈ ಪಾತಾಜೇ ಈ ಸಿನಿಮಾಕ್ಕೂ ತಮ್ಮ ಕ್ಯಾಮರಾ ಕೈ ಚಳಕ ತೋರಿಸಿದ್ದಾರೆ. ಯೋಗರಾಜ್‌ ಭಟ್‌ ಲಿರಿಕ್ಸ್‌ ಬರೆದು, ವಿಜಯ್‌ ಪ್ರಕಾಶ್‌ ಹಾಡಿರೋ ಫ್ರೆಂಡ್‌ಶಿಪ್‌ ಹಾಡು ಈಗಾಗಲೇ ರಿಲೀಸ್‌ ಆಗಿ ಪಾಪ್ಯುಲರ್‌ ಕೂಡ ಆಗಿದೆ.  ಈ ಸಿನಿಮಾದ ಹಾಡುಗಳ ಬಗ್ಗೆ ದೊಡ್‌ ನಿರೀಕ್ಷೆ ಇದೆ.

ಶಿವಣ್ಣ- ಪ್ರಭುದೇವ ಚಿತ್ರಕ್ಕೆ K ಕರಟಕ D ದಮನಕ ಟೈಟಲ್‌ ಕೊಟ್ಟ ಭಟ್ಟರು!

ಫ್ರೆಶ್‌ ಪ್ರತಿಭೆಗಳಿಂದಲೇ ಕೂಡಿರೋ ಈ ಫ್ರೆಶ್‌ ಪ್ರೇಮಕಥೆಯಲ್ಲಿ ಯುವಕರ ಜೊತೆಗೆ ಶರತ್‌ ಲೋಹಿತಾಶ್ವ, ರಂಗಾಯಣ ರಘು, ಗೆಸ್ಟ್‌ ಅಪಿಯರೆನ್ಸ್‌ ನಲ್ಲಿ ಅದಿತಿ ಪ್ರಭುದೇವ, ಪ್ರಭು ಮುಂದ್ಕರ್‌, ಶ್ವೇತಾ ಪ್ರಸಾದ್‌, ಕಾಮಿಡಿ ಕಿಲಾಡಿ ನಯನ, ಮಹಂತೇಶ್‌ ಸಜ್ಜನ್‌, ಸುಶ್ಮಿತಾ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ವರ್ಷದ ಕೊನೆಯಲ್ಲಿ ತೆರೆಗೆ ಬರ್ತಾ ಇರೋ ಪದವಿ ಪೂರ್ವ ಕಾಲೇಜ್‌ ಸ್ಟೂಡೆಂಟ್ಸ್‌ ಜೊತೆಗೆ ಪೋಷಕರಿಗೂ ಮೆಸೇಜ್‌ ನೀಡಲಿದೆ ಅನ್ನೋದು ಸಿನಿಮಾ ಟೀಮ್‌ನ ಪ್ರಾಮಿಸ್‌. ಕನ್ನಡದಲ್ಲಿ ಬಂದಿರೋ ಕಾಲೇಜ್‌ ಲವ್‌ ಸ್ಟೋರಿಗಳು ಬಹುತೇಕ ಬ್ಲಾಕ್‌ಬಸ್ಟರ್‌ ಲಿಸ್ಟ್‌ ಸೇರಿದ್ದು, ಪದವಿ ಪೂರ್ವ ಸಿನಿಮಾ ಕೂಡ ಜನರನ್ನ ಎಂಟರ್‌ಟೈನ್‌ ಮಾಡೋದು ಕನ್‌ಫರ್ಮ್‌..!
 

Follow Us:
Download App:
  • android
  • ios