Asianet Suvarna News Asianet Suvarna News

O Nalla Song: ಸೋಷಿಯಲ್ ಮೀಡಿಯಾ ಟ್ರೆಂಡ್ ಉಪ್ಪಿಯ ಓ ನಲ್ಲ..! 25 ವರ್ಷಗಳ ಹಿಂದಿನ ಸಾಂಗ್ ಫುಲ್ ವೈರಲ್..!

ಸದ್ಯ ನಿಂತ್ರು ಕುಂತ್ರು ‘ಓ ನಲ್ಲ ನೀನಲ್ಲ ಕರಿಮಣಿ ಮಾಲೀಕ ನೀನಲ್ಲ’ ಹಾಡು ಎಲ್ಲೆಲ್ಲೂ ಮಾರ್ದನಿಸುತ್ತಿದೆ. ಸೋಷಿಯಲ್ ಮೀಡಿಯಾ ತುಂಬೆಲ್ಲಾ ‘ಉಪೇಂದ್ರ’ ಚಿತ್ರದ ಇದೇ ಹಾಡು ಗುಯ್‌ ಅಂತ ಗುಡುತ್ತಿದೆ. ಕೆಲವರು ಗುನುಗಿ ಗುನುಗಿ ಸುಸ್ತಾಗಿದ್ದಾರೆ. ಅಷ್ಟರಮಟ್ಟಿಗೆ ಈ ಸಾಂಗ್‌ನ ಸ್ಮಾಲ್ ಗ್ಲಿಂಪ್ಸ್ ಕ್ರೇಜ್ ಕ್ರಿಯೇಟ್ ಮಾಡಿದೆ.

ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಸೃಷ್ಟಿಸಿರೋ ಉಪೇಂದ್ರ(Upendra) ಸಿನಿಮಾದ ಕರಿಮಣಿ ಮಾಲೀಕ ಸಾಂಗ್(O Nalla Neenalla Karimani Maalika song)  ಹಿಂದಿನ ಕಹಾನಿ ಏನ್ ಗೊತ್ತಾ..? ಈ ಸಾಂಗ್ ಹುಟ್ಟಿಕೊಳ್ಳಲು ಕಾರಣವೇನು ಗೊತ್ತಾ..? ಮ್ಯೂಸಿಕ್ ಮಾಂತ್ರಿಕ ಗುರುಕಿರಣ್ ಹತ್ತಿರ ಉಪ್ಪು ಈ ಸಾಂಗ್ ಟ್ಯೂನ್ ಮಾಡಸಿರೋ ಹಿಂದಿನ ರಹಸ್ಯ ತುಂಬಾ ಇಂಟ್ರೆಸ್ಟಿಂಗ್ ಆಗಿದೆ. ಕನ್ನಡ ಚಿತ್ರರಂಗದಲ್ಲಿ ಡಿಫರೆಂಟ್ ಸಿನಿಮಾಗಳಿಗೆ ಐಡೆಂಟಿಟಿ ರಿಯಲ್ ಸ್ಟಾರ್ ಉಪೇಂದ್ರ. ಉಪ್ಪಿ ವಾಸ್ತವ ಜಗತ್ತಿನ ಕ್ರೂರತೆಯನ್ನ ಕಣ್ಣಿಗೆ ಕಟ್ಟುವಹಾಗೆ ಸಿನಿಮಾ ಮಾಡ್ತಾರೆ. ಹಾಗೆ 1999ರಲ್ಲಿ ಉಪೇಂದ್ರ ಸಿನಿಮಾ ಬಂತು. ಆ ಸಿನಿಮಾ ಕರಿಮಣಿ ಮಾಲೀಕ ಹಾಡು ಬರೆದಿದ್ದು ಉಪೇಂದ್ರ. ಈ ಹಾಡಿ ಹಾಡಿದ್ದು ಪ್ರತಿಮಾ ರಾವ್ ಅನ್ನೋ ಗಾಯಕಿ. ಆದ್ರೆ ಈ ಹಾಡು ಅಂದು ಇಷ್ಟೊಂದು ಪಾಪ್ಯೂಲರ್ ಆಗಿರಲಿಲ್ಲ. ರಿಯಲ್ ಸ್ಟಾರ್ ಉಪೇಂದ್ರ ಕರಿಮಣಿ ಮಾಲೀಕ ಸಾಂಗ್ ಕಂಪೋಸ್ ಮಾಡೋಕೆ ಕಾರಣ ಏನ್ ಗೊತ್ತಾ. 1999ರ ಟೈಂನಲ್ಲಿ ಉಪೇಂದ್ರ ಮತ್ತು ಪ್ರೇಮ(Prema) ಲವರ್ಸ್ ಅನ್ನೋ ರೂಮರ್ ಇತ್ತು. ಈ ಹಾಡಿನ ಮೂಲಕ ನಮ್ಮ ಮಧ್ಯೆ ಏನಿಲ್ಲ ಅಂತ ಹೇಳ್ಬಿಡೋಣ, ಅಷ್ಟೆ ಅಲ್ಲ ಎಲ್ಲಾ ಇದೆ ಅಂತಲೂ ಹೇಳೋಣ ಅಂತ ಉಪ್ಪಿ ಈ ರೂಮರ್ಸ್‌ಗೆ ಉತ್ತರ ಕೊಡೋದಕ್ಕಾಗೆ ಈ ಹಾಡು ಬರೆದಿದ್ರಂತೆ.

ಇದನ್ನೂ ವೀಕ್ಷಿಸಿ:  ಒಟ್ಟಿಗೆ ಹಾಡಿ ಕುಣಿದ ಪ್ರಭುದೇವ-ಶಿವಣ್ಣ..! ಉಪ್ಪಿ ವಾಯ್ಸ್, ಹ್ಯಾಟ್ರಿಕ್‌ ಹೀರೋ, ಡ್ಯಾನ್ಸ್ ಕಿಂಗ್ ಮಸ್ತ್ ಡ್ಯಾನ್ಸ್..!