Asianet Suvarna News Asianet Suvarna News

ಒಟ್ಟಿಗೆ ಹಾಡಿ ಕುಣಿದ ಪ್ರಭುದೇವ-ಶಿವಣ್ಣ..! ಉಪ್ಪಿ ವಾಯ್ಸ್, ಹ್ಯಾಟ್ರಿಕ್‌ ಹೀರೋ, ಡ್ಯಾನ್ಸ್ ಕಿಂಗ್ ಮಸ್ತ್ ಡ್ಯಾನ್ಸ್..!

ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್ ಹೀರೋ ಡಾಕ್ಟರ್ ಶಿವರಾಜ್ ಕುಮಾರ್ ಹಾಗೂ ಭಾರತೀಯ ಚಿತ್ರರಂಗದ ಡ್ಯಾನ್ಸ್ ಕಿಂಗ್ ಪ್ರಭುದೇವ ಇದೇ ಮೊದಲ ಭಾರಿಗೆ ತೆರೆ ಹಂಚಿಕೊಳ್ಳುತ್ತಿರೋ ಸಿನಿಮಾ ಕರಟಕ ದಮನಕ. ನಿರ್ದೇಶಕ ಯೋಗರಾಜ್ ಭಟ್ ಆಕ್ಷನ್ ಕಟ್ ಹೇಳಿರೋ ಈ ಸಿನಿಮಾದ ಟೈಟಲ್ ಸಾಂಗ್ ರಿಲೀಸ್ ಆಗಿ ಸೌಂಡ್ ಮಾಡಿತ್ತು.

ಕರಟಕ ದಮನಕ ಸಿನಿಮಾ ಟೈಟಲ್ ಸಾಂಗ್‌ನಲ್ಲಿ ಶಿವಣ್ಣ ಪ್ರಭುದೇವ (Prabhudeva) ಡ್ಯಾನ್ಸ್ ನೋಡಿ ಇದು ಚಿತ್ರ ಜಗತ್ತಿನ ಬೊಂಬಾಟ್ ಜೋಡಿ ಅಂತ ಕಮೆಂಟ್ ಅಂದಿದ್ರು. ಯೋಗರಾಜ್‌ ಭಟ್‌(Yogaraj Bhat) ಸಾಹಿತ್ಯ ಬರೆದಿರೋ ಈ ಹಾಡಿನಲ್ಲಿ ಎರಡು ನರಿಗಳ ಪಂಚ ತಂತ್ರದ ಕಥೆಯ ಝಲಕ್‌ ತೋರಿಸಿದ್ರು. ಈಗ ಚಿತ್ರರಂಗದ ಈ ಇಬ್ಬರು ನೃತ್ಯಪಟುಗಳ ಡ್ಯಾನ್ಸ್ ಧಮಾಕವನ್ನ ತೆರೆದಿರೋ ಮತ್ತೊಂದು ಸಾಂಗ್ ರಿಲೀಸ್ ಆಗಿದೆ. ನಿರ್ದೇಶಕ ಯೋಗರಾಜ್ ಭಟ್ ಬರೆದಿರೋ ‘ಡೀಗ ಡಿಗರಿ’ ಹಾಡಿನನ್ನ(Deega Digari) ರಿಯಲ್ ಸ್ಟಾರ್ ಉಪೇಂದ್ರ ಸಿಕ್ಕಾಪಟ್ಟೆ ಜೋಶ್‌ನಲ್ಲಿ ಹಾಡಿದ್ದಾರೆ. ಶಿವಣ್ಣ(Shivaraj Kumar) ಪ್ರಭುದೇವ ಮಸ್ತ್ ಡಾನ್ಸ್ ಸಿಕ್ಕಾಪಟ್ಟೆ ಕಿಕ್ ಕೊಡುತ್ತಿದೆ. ವಿ. ಹರಿಕೃಷ್ಣ ಮ್ಯೂಸಿಕ್ ಮಾಡಿದ್ದಾರೆ.ಒಂದಾನೊಂದು ಕಾಲದಲ್ಲಿ ಎರಡು ಕುತಂತ್ರಿ ನರಿಗಳಿದ್ದವು. ಒಂದರ ಹೆಸರು "ಕರಟಕ" ಇನ್ನೊಂದರ ಹೆಸರು "ದಮನಕ". ಈ ಎರಡೂ ನರಿಗಳು ಕಾಡು ಮತ್ತು ನಾಡಿನ ತಲೆ ಕೆಡಿಸಿ ಇತಿಹಾಸವಾದವು. ಆ ಕುತಂತ್ರಿ ನರಿಗಳು ಇಂದು ಮಾನವ ರೂಪ ತಾಳುವ ಮೂಲಕ ಸಮಾಜಕ್ಕೆ ಹೇಗೆ ಒಳ್ಳೆಯದು ಮಾಡುತ್ತವೆ ಅನ್ನೋದನ್ನು ಹೇಳುವುದೇ ಕರಟಕ ದಮನಕ ಸಿನಿಮಾದ ಕಥೆ. ಶಿವಣ್ಣ ಇಲ್ಲಿ ಕರಟಕನಾಗಿ ಪ್ರಭುದೇವ್‌ ದಮನಕನಾಗಿ ನಟಿಸಿದ್ದಾರೆ. ಈ ಸಿನಿಮಾವನ್ನ ರಾಕ್ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದು, ಶಿವರಾತ್ರಿ ಹಬ್ಬದ ಸಮಯದಲ್ಲಿ ಅಂದರೆ ಮಾರ್ಚ್‌ 8ರಂದು ಕರಟಕ ದಮನಕ ಸಿನಿಮಾ ಬಿಡುಗಡೆಯಾಗಲಿದೆ.

ಇದನ್ನೂ ವೀಕ್ಷಿಸಿ:  Darshan: ನಟ ದರ್ಶನ್ ಸಿನಿ ಜರ್ನಿಗೆ 25 ವರ್ಷ..! ಅದ್ಧೂರಿ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧ..!

Video Top Stories