Asianet Suvarna News Asianet Suvarna News

ಬೆಳ್ಳಿತೆರೆಗೆ ಬರಲು ಸಜ್ಜಾದ 'ನಟ ಭಯಂಕರ': ಪ್ರಥಮ್‌ಗೆ ಬಿಗ್ ಸ್ಟಾರ್ಸ್ ಬೆಂಬಲ

ನಟ ಭಯಂಕರ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು,  ದುಬೈನ ವಿಶ್ವ ಕನ್ನಡ ಹಬ್ಬದಲ್ಲಿ ಟ್ರೈಲರ್ ರಿಲೀಸ್ ಆಗಿದೆ. 
 

ಒಳ್ಳೆಯ ಹುಡುಗ ಪ್ರಥಮ್ ಅವರ ನಟ ಭಯಂಕರ ಸಿನಿಮಾಗೆ, ಕನ್ನಡದ ಟಾಪ್ ಸ್ಟಾರ್ಸ್ ಬೆಂಬಲ ಸಿಕ್ತಿದೆ. ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾದ ಟೈಟಲ್ ಸಾಂಗ್ ಹಾಡಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಈ ಸಿನಿಮಾಗೆ ವಿಶ್ ಮಾಡಿದ್ದಾರೆ. ವಸಿಷ್ಠ ಸಿಂಹ ಪ್ರಥಮ್ ಪ್ರಯತ್ನವನ್ನು ದುಬೈನಲ್ಲೇ ಹಾಡಿ ಹೊಗಳಿದ್ದಾರೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ಆಶೀರ್ವಾದವೂ ಪ್ರಥಮ್'ಗೆ ಸಿಕ್ಕಿದೆ. ಅಷ್ಟೆ ಅಲ್ಲ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ನಟ ಭಯಂಕರನಿಗೆ ಬೆನ್ನು ತಟ್ಟಿದ್ದಾರೆ. ಸಿನಿಮಾ ಫೆ. 3ರಂದು ಬಿಡುಗಡೆ ಆಗುತ್ತಿದೆ.

Video Top Stories