ವಕ್ಫ್ ಹೆಸರು ತೆಗೆಯುವ ಭರವಸೆ ಕೊಟ್ಟ ಜಿಲ್ಲಾಧಿಕಾರಿ; ಸ್ವಾಮಿ ಡಿಸಿಗಳೇ, ಅದು ರೈತರ ಪಹಣಿ; ಪಗಡೆ ಆಟದ ಬೋರ್ಡ್ ಅಲ್ಲ!
ರಾಜ್ಯದಲ್ಲಿ ವಕ್ಫ್ ಬೋರ್ಡ್‌ನ ಖ್ಯಾತೆ ಮುಂದುವರಿದಿದೆ. ವಿಜಯಪುರದ ಬಳಿಕ ಮತ್ತೆ 6 ಜಿಲ್ಲೆಗಳ ರೈತರಿಗೆ ವಕ್ಫ್ ಬೋರ್ಡ್ ನೋಟಿಸ್ ಕಳಿಸಿದೆ.
ಬೆಂಗಳೂರು (ಅ.29): ರೈತರಿಗೆ ಹೇಳದೇ ಕೇಳದೇ ಅವರ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ಸೇರಿಸಿದ್ದ ವಿಜಯಪುರ ಜಿಲ್ಲೆಯ ಜಿಲ್ಲಾಧಿಕಾರಿಗೆ ಇಂದು ಬಿಜೆಪಿ ನೇತೃತ್ವದ ನಿಯೋಗ ಚಳಿ ಬಿಡಿಸಿದೆ. ಇನ್ನೊಂದೆಡೆ ಸಿಎಂ ಸಿದ್ದರಾಮಯ್ಯ ಕೂಡ ರೈತರಿಗೆ ಕಳಿಸಿದ್ದ ನೋಟಿಸ್ ವಾಪಾಸ್ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ವಕ್ಫ್ ಸಚಿವ ಜಮೀರ್ ಅಹ್ಮದ್ ಸೂಚನೆಯಂತೆ ಕೆಲಸ ಮಾಡಿದ್ದ ಡಿಸಿಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ದಿನದ ಒಳಗಾಗಿ ಪಹಣಿಯಲ್ಲಿ ವಕ್ಫ್ ಹೆಸರು ತೆಗೆಯುವ ಭರವಸೆ ನೀಡಿದ್ದಾರೆ. ಆದರೆ, ಪಹಣಿಯಲ್ಲಿ ಹೆಸರು ಹೊರಬೀಳದ ಹೊರತು ಪ್ರತಿಭಟನೆ ನಿಲ್ಲಿಸದಿರಲು ರೈತರು ತೀರ್ಮಾನಿಸಿದ್ದಾರೆ.
ರೈತರ ಪಹಣಿಯಲ್ಲಿನ ವಕ್ಫ್ ಪದವನ್ನ ನಾಳೆಯೇ ತೆಗೆದುಹಾಕ್ತೇವೆ; ಜಿಲ್ಲಾಧಿಕಾರಿ ಭೂಬಾಲನ್
ಇನ್ನೊಂದೆಡೆ, ವಿಜಯಪುರದ ಬಳಿಕ ಮತ್ತೈದು ಜಿಲ್ಲೆಗೆ ವಕ್ಫ್ ಭೂತ ವ್ಯಾಪಿಸಿದೆ.- ದಾವಣಗೆರೆ, ಯಾದಗಿರಿ, ಬೀದರ್ ರೈತರಿಗೂ ಆಘಾತವಾಗಿದೆ. ಚಿತ್ರದುರ್ಗದಲ್ಲಿ ದಲಿತರ ಭೂಮಿ ಮೇಲೆ ವಕ್ಫ್ ಕೆಂಗಣ್ಣು ಬೀರಿದೆ.