ಹಳ್ಳಿ ಹೈದನ ಆಟಕ್ಕೆ ಹೌಹಾರಿದ ಮನೆ ಮಂದಿ: ಹನುಮಂತನ ಕಂಡ್ರೆ ದೊಡ್ಮನೆ ಮಂದಿಗೆ ಶುರುವಾಗಿದ್ಯಾ ಹೆದರಿಕೆ?

ಬೆಂಕಿಯಂತಾಗಿದ್ದ ಮನೆಗೆ ಸೈಲೆಂಟಾಗಿ ನೀರಿನಂತೆ ಎಂಟ್ರಿಕೊಟ್ಟೋನು ಅವನು. ಇವನೇನು.? ಇವನ್ಯಾವ ಲೆಕ್ಕಾ ಅಂದಕೊಂಡಿದ್ರು ಸಹಸ್ಪರ್ಧಿಗಳು.. ಆದ್ರೆ ಎಲ್ಲರ ಲೆಕ್ಕವನ್ನು ಉಲ್ಟಾ ಮಾಡ್ದೋನು ಅವನು. ಇಷ್ಟು ದಿನ ಕಾಮಿಡಿ ಮಾತ್ರ ಅಂತಿದ್ದೋನು.

First Published Nov 2, 2024, 9:10 AM IST | Last Updated Nov 2, 2024, 9:10 AM IST

ಬೆಂಕಿಯಂತಾಗಿದ್ದ ಮನೆಗೆ ಸೈಲೆಂಟಾಗಿ ನೀರಿನಂತೆ ಎಂಟ್ರಿಕೊಟ್ಟೋನು ಅವನು. ಇವನೇನು.? ಇವನ್ಯಾವ ಲೆಕ್ಕಾ ಅಂದಕೊಂಡಿದ್ರು ಸಹಸ್ಪರ್ಧಿಗಳು.. ಆದ್ರೆ ಎಲ್ಲರ ಲೆಕ್ಕವನ್ನು ಉಲ್ಟಾ ಮಾಡ್ದೋನು ಅವನು. ಇಷ್ಟು ದಿನ ಕಾಮಿಡಿ ಮಾತ್ರ ಅಂತಿದ್ದೋನು. ಈಗ ನನಗೂ ಗೇಮ್ ಆಡೋಕೆ ಬರುತ್ತೆ ಅಂತ ತೋರಿಸ್ತಿದ್ದಾನೆ. ಅವನ ಆಟದಲ್ಲಿ ಪ್ಲಾನ್ ಇಲ್ಲ. ಕುತಂತ್ರವಿಲ್ಲ. ಅವನದೇನಿದ್ದರೂ ಅಸಲಿ ಆಟ. ತನ್ನಾಟದಿಂದಲೇ ಕ್ಯಾಪ್ಟನ್ ಕಿಂಗ್ ಆಗಿದ್ದಾನೆ. ಇಷ್ಟಾದ್ರೂ ಚಿಲ್ಲೂರು ಹೈದನಿಗೆ ಚಿಕನ್ದೇ ಚಿಂತೆ. ದೊಡ್ಮನೆಯಲ್ಲಿರೋ ಚಿಲ್ಲೂರು ಹೈದನಿಗೆ ಚಿಕನ್ ಚಿಂತೆ ಶುರುವಾಗಿದೆ. ಕೈ ತಪ್ಪಿದ ಚಿಕನ್ಗಾಗಿ ಹನುಮ ಚಡಪಡಿಸ್ತಾಯಿದ್ದಾನೆ. ಬಿಗ್ ಬಾಸ್ ಮನೆಯಲ್ಲಿ ಹನುಮಂತನಿಗೆ ಚಿಕನ್ ಆಸೆ ಶುರುವಾಗಿದೆ. ಚಿಕನ್.. ಚಿಕನ್ ಅಂತ ಕನವರಿಸೋಕೆ ಶುರು ಮಾಡಿದ್ದಾನೆ ಚಿಲ್ಲೂರು ಹೈದ. 

ಕೈಗೆ ಬಂದಿದ್ದು ಬಾಯಿಗೆ ಬಂದಿಲ್ಲ ಅನ್ನೋ ಬೇಸರ. ನಾನು ಕ್ಯಾಪ್ಟನ್, ನನಗೆ ಚಿಕನ್ ಬೇಕೇ ಬೇಕು ಅನ್ನೋ ಹಠ.. ದೊಡ್ಮನೆಯಲ್ಲಿ ಹನುಮಂತನ ಚಿಕನ್ ಗೋಳಾಟ ಹೇಗಿತ್ತು..? ಬಿಗ್ ಬಾಸ್ ಮನೆಯಲ್ಲಿ ಹನುಮಂತನ ಆಟ ನೋಡಿ ಸಹಸ್ಪರ್ಧಿಗಳಿಗೆ ಸಣ್ಣ ಹೆದರಿಕೆ ಈಗಾಗಲೇ ಶುರುವಾಗಿದೆ. ಅದು, ಅವರ ಮಾತುಗಳಲ್ಲಿಯೇ ವ್ಯಕ್ತವಾಗಿದೆ. ಹಾಗಿದ್ರೆ ಹನುಮಂತನ ಆಟ ಯಾರಿಗೆಲ್ಲ ಹೆದರಿಕೆ ತರಿಸಿದೆ. ಬಿಗ್ ಬಾಸ್ ಮನೆಗೆ ಹನುಮಂತ ಬಂದಾಗ ಇವ್ನೇನು ಟಫ್ ಕಾಂಪಿಟೇಟರ್ ಅಲ್ಲಾ ಅಂತಲೇ ಎಲ್ರೂ ಅಂದುಕೊಂಡಿದ್ರು. ಆದ್ರೀಗ ವಾರಗಳು ಕಳೆಯುತ್ತಾ ಇದ್ಹಾಗೆ ಹನುಮಂತನ ಮೇಲೆ ಸಣ್ಣ ಭಯ, ಮನೆ ಮಂದಿಗೆ ಶುರುವಾಗಿದೆ. ಹನುಮಂತನ ಬಗ್ಗೆ ಗುಂಪು ಕಟ್ಕೊಂಡು ಮಾತೋಡೋ ಮಟ್ಟಿಗೆ ಆತ  ಡರ್ ಹುಟ್ಟಿಸಿದ್ದಾನೆ. 

Video Top Stories