Asianet Suvarna News Asianet Suvarna News

Puneeth Rajkumar ಕನಸುಗಳನ್ನು ನನಸಾಗಿಸಲು ಸೋಷಿಯಲ್ ಮೀಡಿಯಾಗೆ ಕಾಲಿಟ್ಟ ಅಶ್ವಿನಿ

ಪುನೀತ್‌ ಅವರ ಅಕಾಲಿಕ ಅಗಲಿಕೆಯ ಶೋಕವನ್ನು ಹಂಚಿಕೊಂಡು ಬೆಂಬಲಕ್ಕೆ ನಿಂತ ಎಲ್ಲಾ ಸಹೃದಯಿ ಅಭಿಮಾನಿ ದೇವರುಗಳು ಮತ್ತು ಸಾರ್ವಜನಿಕರಿಗೆ ನಮ್ಮ ಇಡೀ ಕುಟುಂಬದ ಪರವಾಗಿ ಧನ್ಯವಾದಗಳು ಎಂದು ಪತ್ರ ಹಂಚಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಕ್ಕೆ ಕಾಲಿಟ್ಟಿದ್ದಾರೆ. 

ಕರ್ನಾಟಕ ಸರ್ಕಾರ ಹಾಗೂ ಅಭಿಮಾನಿಗಳು ಪುನೀತ್ ರಾಜ್‌ಕುಮಾರ್‌ಗೆ (Puneeth Rajkumar) ತೋರಿಸಿರುವ ಪ್ರೀತಿಗೆ ಧನ್ಯವಾದಗಳನ್ನು ತಿಳಿಸುವ ಮೂಲಕ ಅಶ್ವಿನಿ ಪುನೀತ್ (Ashwini Puneeth Rajkumar) ಸಾಮಾಜಿಕ ಜಾಲತಾಣಕ್ಕೆ (Social Media) ಎಂಟ್ರಿ ಕೊಟ್ಟಿದ್ದಾರೆ. ಪುನೀತ್‌ ಅವರ ಅಕಾಲಿಕ ಅಗಲಿಕೆಯ ಶೋಕವನ್ನು ಹಂಚಿಕೊಂಡು ಬೆಂಬಲಕ್ಕೆ ನಿಂತ ಎಲ್ಲಾ ಸಹೃದಯಿ ಅಭಿಮಾನಿ ದೇವರುಗಳು ಮತ್ತು ಸಾರ್ವಜನಿಕರಿಗೆ ನಮ್ಮ ಇಡೀ ಕುಟುಂಬದ ಪರವಾಗಿ ಧನ್ಯವಾದಗಳು ಎಂದು ಪತ್ರ ಹಂಚಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಕ್ಕೆ ಕಾಲಿಟ್ಟಿದ್ದಾರೆ. ಫೇಸ್‌ಬುಕ್‌ (FaceBook) ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಅಶ್ವಿನಿ ಅವರು ಖಾತೆ ತೆರೆದಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಖಾತೆ ತೆರೆದು ತಮ್ಮ ಹೆಸರಿನ ಕೆಳಗೆ ನಿರ್ಮಾಪಕಿ (Producer), ಪಿಆರ್‌ಕೆ ಪ್ರೊಡಕ್ಷನ್ಸ್ (PRK Productions) ಮತ್ತು ಪಿಆರ್‌ಕೆ ಆಡಿಯೋ (PRK Audio) ಎಂದು ಬರೆದುಕೊಂಡಿದ್ದಾರೆ. 

ಪತ್ರದ ಮೂಲಕ ಧನ್ಯವಾದ ತಿಳಿಸಿದ ಅಶ್ವಿನಿ ಪುನೀತ್ ರಾಜ್‌ಕುಮಾರ್

ಪುನೀತ್ ಚಿತ್ರರಂಗದ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ಸ್ಥಾಪಿಸಿದ ಪಿಆರ್‌ಕೆ ಪ್ರೊಡಕ್ಷನ್‌ ಮಹತ್ವದ ಟ್ವೀಟ್‌ವೊಂದನ್ನು (Tweet) ಹಂಚಿಕೊಂಡಿದೆ. ಹಿಂದೆ ನಡೆದುಹೋಗಿರುವ ಘಟನೆಯನ್ನು ಬದಲಾಯಿಸುವುದು ಅಸಾಧ್ಯವಾಗಿದೆ. ಆದರೆ ಪುನೀತ್ ಅವರಿದ್ದಾಗ ಅವರು ನೀಡಿರುವ ಉತ್ಸಾಹ, ಸ್ಪೂರ್ತಿಯೊಂದಿಗೆ ಪಿಆರ್‌ಕೆ ಪ್ರೊಡಕ್ಷನ್ ಮತ್ತು ಪಿಆರ್‌ಕೆ ಆಡಿಯೊ ಸಂಸ್ಥೆಗಳ ಕೆಲಸ ಕಾರ್ಯಗಳು ಮುಂದುವರಿಯಲಿದ್ದು ಅವರ ಕನಸುಗಳನ್ನು ನನಸಾಗಿಸಲು ಪ್ರಯತ್ನಿಸುತ್ತೇವೆ. ಅದಕ್ಕಾಗಿ ನಿಮ್ಮೆಲ್ಲರ ಬೆಂಬಲ ಬೇಕು ಎಂದು ಜನರಲ್ಲಿ, ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದು, ಈ ಮೂಲಕ ಅಶ್ವಿನಿ, ಪುನೀತ್ ಕನಸುಗಳನ್ನು ನನಸು ಮಾಡುವ ಪಣ ತೊಟ್ಟಿದ್ದಾರೆ.


ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories