Asianet Suvarna News Asianet Suvarna News

ದರ್ಶನ್‌ ಬರ್ತ್‌ಡೇ ವೇಳೆ ಅಭಿಮಾನಿಗಳಿಂದ ದಾಂಧಲೆ: ಕೇಸ್‌ ದಾಖಲು

ದರ್ಶನ್ ಹುಟ್ಟುಹಬ್ಬದ ವೇಳೆ ಅಭಿಮಾನಿಗಳ ದಾಂಧಲೆ| ದರ್ಶನ್ ಅಭಿಮಾನಿಗಳ ವಿರುದ್ಧ ದೂರು ದಾಖಲು| . ಕಾರು ಜಖಂಗೊಂಡಿದ್ದರಿಂದ ಮಾಲೀಕರಿಗೆ ಸುಮಾರು 40 ಸಾವಿರ ರೂಪಾಯಿ ನಷ್ಟ|

ಬೆಂಗಳೂರು(ಫೆ.20): ಸ್ಯಾಂಡಲ್‌ವುಡ್ ನಟ ದರ್ಶನ್ ಹುಟ್ಟುಹಬ್ಬದ ವೇಳೆ ಅಭಿಮಾನಿಗಳ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜರಾಜೇಶ್ವರಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಬರ್ತ್‌ಡೇ ವೇಳೆ ಸೇರಿದ್ದ ಅಭಿಮಾನಿಗಳಿಂದ ದರ್ಶನ್ ಅವರ ಪಕ್ಕದ ಮನೆಯ ಮುಂದೆ ನಿಲ್ಲಿಸಿದ್ದ ಕಾರು ಜಖಂಗೊಂಡಿತ್ತು. 

ಆಸ್ಪತ್ರೆಯಲ್ಲಿರುವ ನಟ ವೆಂಕಟೇಶ್‌ ನೆರವಿಗೆ ನಿಂತ ಜಗ್ಗೇಶ್‌; ಒಂದೇ ಮಾತಿಗೆ ಒಂದು ಲಕ್ಷ ನೀಡಿದ ದರ್ಶನ್‌!

ಈ ಸಂಬಂಧ ಎಂ.ಎಸ್.ರಾಮಪ್ರಸಾದ್ ಎಂಬುವರು ದರ್ಶನ್ ಅಭಿಮಾನಿಗಳ ವಿರುದ್ಧ ದೂರು ನೀಡಿದ್ದಾರೆ. ಕಾರು ಜಖಂಗೊಂಡಿದ್ದರಿಂದ ಮಾಲೀಕರಿಗೆ ಸುಮಾರು 40 ಸಾವಿರ ರೂಪಾಯಿ ನಷ್ಟ ಉಂಟಾಗಿದೆ. ಈ ಸಂಬಂಧ ದರ್ಶನ್ ಅಭಿಮಾನಿಗಳು ಹಾಗೂ ಆಯೋಜಕರ ವಿರುದ್ಧ ದೂರು ದಾಖಲಾಗಿದೆ.
 

Video Top Stories