ದಾಸನಿಗೆ ಸರ್ಕಾರಿ ಆಸ್ಪತ್ರೆಯಲ್ಲೇ ಸರ್ಜರಿ?: ದರ್ಶನ್ ಆರೋಗ್ಯ ಸ್ಥಿತಿಯ ವರದಿ ಕೇಳಿದ ಹೈಕೋರ್ಟ್

ದರ್ಶನ್ ಹೈಕೋರ್ಟ್​ಗೆ ಬೇಲ್ ಅರ್ಜಿ ಸಲ್ಲಿಸಿದ್ದು, ಬೆನ್ನು ನೋವಿನ ಕಾರಣಕ್ಕೆ ತುರ್ತು ವಿಚಾರಣೆಗೂ ಮನವಿ ಮಾಡಿದ್ದಾರೆ. ಆದ್ರೆ ವಿಚಾರಣೆಯ ಮೊದಲ ದಿನವೇ ಕೇಸ್ ಮುಂದೂಡಿಕೆ ಆಗಿದ್ದು, ಇದು ಇಷ್ಟು ಬೇಗ ಮುಗಿಯೋ ಕೇಸ್ ಅಲ್ಲ ಅನ್ನೋ ಸೂಚನೆಯೂ ಸಿಕ್ಕಿದೆ. 

First Published Oct 23, 2024, 4:40 PM IST | Last Updated Oct 23, 2024, 4:40 PM IST

ದರ್ಶನ್ ಹೈಕೋರ್ಟ್​ಗೆ ಬೇಲ್ ಅರ್ಜಿ ಸಲ್ಲಿಸಿದ್ದು, ಬೆನ್ನು ನೋವಿನ ಕಾರಣಕ್ಕೆ ತುರ್ತು ವಿಚಾರಣೆಗೂ ಮನವಿ ಮಾಡಿದ್ದಾರೆ. ಆದ್ರೆ ವಿಚಾರಣೆಯ ಮೊದಲ ದಿನವೇ ಕೇಸ್ ಮುಂದೂಡಿಕೆ ಆಗಿದ್ದು, ಇದು ಇಷ್ಟು ಬೇಗ ಮುಗಿಯೋ ಕೇಸ್ ಅಲ್ಲ ಅನ್ನೋ ಸೂಚನೆಯೂ ಸಿಕ್ಕಿದೆ. ಹಾಗಾದ್ರೆ ದರ್ಶನ್ ಪರದಾಟಕ್ಕೆ ಕೊನೆ ಯಾವಾಗ..? ಬೆನ್ನು ನೋವಿನಿಂದ ಒದ್ದಾಡ್ತಿರೋ ದರ್ಶನ್​ ನೋವಿಗೆ ಮುಕ್ತಿ ಸಿಕ್ಕೋದು ಯಾವಾಗ..? ದರ್ಶನ್ ಪರದಾಟಕ್ಕೆ ಅಷ್ಟು ಬೇಗ ಮುಕ್ತಿ ಸಿಗೋ ಹಾಗೆ ಕಾಣ್ತಾ ಇಲ್ಲ. ಅಸಲಿಗೆ ಸೆಷೆನ್ಸ್ ಕೋರ್ಟ್​ ಬೇಲ್ ರಿಜೆಕ್ಟ್ ಮಾಡಿದ ಮೇಲೆ ದರ್ಶನ್ ಪರ ವಕೀಲರು ಹೈಕೋರ್ಟ್​ನಲ್ಲಿ ಬೇಲ್​ಗೆ ಅರ್ಜಿ ಸಲ್ಲಿಸಿದ್ರು. ಅಷ್ಟೇ ಅಲ್ಲ ದರ್ಶನ್​ಗೆ ತೀವ್ರ ಬೆನ್ನು ನೋವು ಕಾಡ್ತಾ ಇರೋದ್ರಿಂದ ತ್ವರಿತ ವಿಚಾರಣೆ ಮಾಡಬೇಕು ಅಂತಲೂ ಮನವಿ ಸಲ್ಲಿಸಲಾಗಿದೆ. ಅದಕ್ಕೆ ಅಸ್ತು ಎಂದಿರೋ ಹೈಕೋರ್ಟ್ ಇವತ್ತು ದರ್ಶನ್ ಬೇಲ್ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದೆ. 

ಹೌದು ಹೈಕೋರ್ಟ್​ನಲ್ಲಿ ಇವತ್ತು ದರ್ಶನ್ ಬೇಲ್ ಕೇಸ್ ವಿಚಾರಣೆ ಶುರು ಆಯ್ತು. ಜಾಮೀನು ಕೋರಿ ದರ್ಶನ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ನ್ಯಾಯಪೀಠ, ಅರ್ಜಿಯ ಕುರಿತಂತೆ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಿ ವಿಶೇಷ ಅಭಿಯೋಜಕ ಪ್ರಸನ್ನ ಕುಮಾರ್ ಅವರಿಗೆ ಸೂಚನೆ ನೀಡಿ ವಿಚಾರಣೆಯನ್ನ ಮುಂದೂಡಿದೆ. ವಿಚಾರಣೆ ವೇಳೆ ದರ್ಶನ್ ಪರ ವಕೀಲರು,   ದರ್ಶನ್ ಬೆನ್ನು ಹುರಿ ನೋವಿನಿಂದ ಬಳಲುತ್ತಿದ್ದಾರೆ. ವಿಮ್ಸ್ ಆಸ್ಪತ್ರೆಗೆ ನಿನ್ನೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಎಂಆರ್​ಐ ಸ್ಕ್ಯಾನ್ ಮಾಡಿಸಲಾಗಿದೆ. ಬೆನ್ನು ಹುರಿಯ ಸರ್ಜರಿ ಅಗತ್ಯವೆಂದು ವೈದ್ಯರು ಮಾಹಿತಿ ನೀಡಿದ್ದಾರೆ. ಹೀಗಾಗಿ ಅನಾರೋಗ್ಯ ಕಾರಣಕ್ಕೆ ಜಾಮೀನು ಕೇಳುತ್ತಿದ್ದೇವೆ ಅಂತ ಮನವಿ ಮಾಡಿದರು. ವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರ ದರ್ಶನ್ ಅವರ ವೈದ್ಯಕೀಯ ವರದಿ ನೀಡಲು ಸೂಚನೆ ನೀಡಿ ವಿಚಾರಣೆ ಮುಂದೂಡಿತು. 

ಹೌದು ಆರೋಗ್ಯ ಸರಿಯಿಲ್ಲ ಅಂತ ಹೇಳಿದ ಮಾತ್ರಕ್ಕೆ ಹೈಕೋರ್ಟ್ ಸುಮ್ಮನೇ  ಜಾಮೀನು ಕೊಟ್ಟುಬಿಡೋದಿಲ್ಲ. ದರ್ಶನ್​ಗೆ ಏನಾಗಿದೆ ಅನ್ನೋ ವೈದ್ಯರ ವರದಿ ತರಿಸಿಕೊಂಡು ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೀರಿ ಅಂತ ಸೂಚನೆ ನೀಡಬಹುದು. ಕೊಲೆ ಕೇಸ್​​ನಲ್ಲಿ ಎ-2 ಆಗಿರೋ ದರ್ಶನ್​ಗೆ ಬೇಲ್ ಕೊಡೋದಕ್ಕೆ ಖಂಡಿತ ಇನ್ನಷ್ಟು ಸಮಯ ಹಿಡಿದೇ ಹಿಡಿಯುತ್ತೆ. ಸೋ ಬೆನ್ನು ನೋವಿನಿಂದ ಕಂಗಾಲಾಗಿರೋ ದರ್ಶನ್ ಸೋಮವಾರ ಬಳ್ಳಾರಿ ಆಸ್ಪತ್ರೆಯಲ್ಲಿ ಎಂ.ಆರ್.ಐ ಸ್ಕ್ಯಾನಿಂಗ್ ಮಾಡಿಸಿಕೊಂಡಿದ್ದಾರೆ. ವೈದ್ಯರು ಬೆನ್ನಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತೆ ಸೂಚನೆ ಕೊಟ್ಟಿದ್ದಾರೆ. ಜಾಮೀನು ಸಿಕ್ಕರೇ ಐಷಾರಾಮಿ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕತ್ಸೆ ಮಾಡಿಸಿಕೊಳ್ಳಬೇಕು ಅಂತ ಕಾದಿದ್ದ ದರ್ಶನ್​ಗೆ , ನಿರಾಸೆಯಾಗಿದೆ. ಸದ್ಯಕ್ಕಂತೂ ಬೇಲ್ ಸಿಕ್ಕೋದಿಲ್ಲ, ಬೆನ್ನುನೋವಿನಿಂದ ಚಿತ್ರಹಿಂಸೆ ಅನುಭವಿಸೋ ಬದಲು ಸರ್ಕಾರಿ ಆಸ್ಪತ್ರೆಯಲ್ಲಿ ಸರ್ಜರಿ ಮಾಡಿಸಿಕೊಳ್ಳದು ವಾಸಿ ಅಂತ ಖುದ್ದು ದಾಸನಿಗೂ ಅನ್ನಿಸತೊಡಗಿದೆ.