ಈಗ ಆ ದೊಡ್ಡತನ ಮೆರೆದಿರುವುದು ಜಗ್ಗೇಶ್‌. ತಮ್ಮ ಬಹುಕಾಲದ ಗೆಳೆಯ ವೆಂಕಟೇಶ್‌ ಯಕೃತ್ತಿನ ಸಮಸ್ಯೆಯಿಂದ ಆಸ್ಪತ್ರೆ ಸೇರಿರುವುದನ್ನು ತಿಳಿದ ಜಗ್ಗೇಶ್‌ ಅವರನ್ನು ಭೇಟಿ ಮಾಡಿ ಈಗ ಗೆಳೆಯನನ್ನು ಅನಾರೋಗ್ಯದಿಂದ ಪಾರು ಮಾಡಲು ನೆರವಾಗುತ್ತಿದ್ದಾರೆ. ವೆಂಕಟೇಶ್‌ ಸಮಸ್ಯೆಯಲ್ಲಿರುವುದನ್ನು ಅವರು ದರ್ಶನ್‌ಗೆ ತಿಳಿಸಿದ್ದಾರೆ. ತಕ್ಷಣ ದರ್ಶನ್‌ ಒಂದು ಲಕ್ಷ ರೂ ನೀಡಿ ಮಾನವೀಯತೆ ಮೆರೆದಿದ್ದಾರೆ.

ತೀವ್ರ ಅನಾರೋಗ್ಯ, ಚಿಕಿತ್ಸೆಗೂ ಹಣವಿಲ್ಲ; ಹಿರಿಯ ನಟನ ಬೆನ್ನಿಗೆ ನಿಂತ ಜಗ್ಗೇಶ್

 

ಜಗ್ಗೇಶ್‌ ಈ ಕುರಿತು ಟ್ವೀಟ್‌ ಮಾಡಿದ್ದು, 250 ಚಿತ್ರಗಳಲ್ಲಿ ನಟಿಸಿದ ನನ್ನ ಮಿತ್ರನನ್ನು ಕೈಲಾದಷ್ಟುಸಹಾಯ ಮಾಡಿ ಉಳಿಸಲು ಯತ್ನಿಸುತ್ತಿರುವೆ ಎಂದಿದ್ದಾರೆ. ವೆಂಕಟೇಶ್‌ ಕುಟುಂಬಕ್ಕೆ ನೆರವಾಗಲು ಅವರು ಮಾಡಿದ ಟ್ವೀಟ್‌ ಮನವಿಗೆ ಅನೇಕರು ಸ್ಪಂದಿಸಿದ್ದಾರೆ.