Asianet Suvarna News Asianet Suvarna News

Aditi Prabhudeva: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅದಿತಿ ಪ್ರಭುದೇವ: ರಾಕಿಂಗ್ ದಂಪತಿಯಿಂದ ಶುಭಾಶಯ

Aditi Prabhudeva marriage ನಟಿ ಅದಿತಿ ಪ್ರಭುದೇವ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಉದ್ಯಮಿ ಯಶಸ್ವಿ ಜೊತೆ ಹಸೆಮಣೆ ಏರಿದ್ದಾರೆ.

ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನ ಗಾಯತ್ರಿ ವಿಹಾರ್‌ನಲ್ಲಿ ಅದಿತಿ ಮತ್ತು ಯಶಸ್ವಿ ಮದುವೆ ಸಮಾರಂಭ ನಡೆಯುತ್ತಿದೆ. ಇನ್ನು ಮದುವೆಯಲ್ಲಿ ಹಳದಿ ಸಮಾರಂಭ, ಮೆಹಂದಿ ಮತ್ತು ಸಂಗೀತ ಸಮಾರಂಭ ಹಾಗೂ ರಾತ್ರಿ ಆರತಕ್ಷತೆ ಸಂಭ್ರಮ ಜೋರಾಗಿದ್ದು, ರಾತ್ರಿ ನಡೆದ ಆರತಕ್ಷತೆ ಸಂಭ್ರಮದಲ್ಲಿ ಅನೇಕ ಗಣ್ಯರು ಹಾಜರಾಗಿದ್ದರು. ಇನ್ನು  ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಕೂಡಾ ಆಗಮಿಸಿ ಎಲ್ಲರ ಗಮನ ಸೆಳೆದಿದ್ದಾರೆ. ನಟಿ ರಾಧಿಕಾ ನೀಲಿ ಬಣ್ಣದ ಡ್ರೆಸ್'ನಲ್ಲಿ ಮಿಂಚಿದ್ದರು. ರಾಕಿಂಗ್ ಸ್ಟಾರ್ ಬ್ಲ್ಯಾಕ್ ಶರ್ಟ್‌ನಲ್ಲಿ ಕಂಗೊಳಿಸಿದ್ದರು. ಯಶ್ ಮತ್ತು ರಾಧಿಕಾ ಎಂಟ್ರಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನೆನಪಿರಲಿ ಪ್ರೇಮ್ ಪುತ್ರಿ ಸಿನಿಮಾರಂಗಕ್ಕೆ ಎಂಟ್ರಿ; ಯಾವ ಚಿತ್ರ, ನಾಯಕ ...

Video Top Stories