ಶೋಕಾಸ್ ನೋಟಿಸ್‌ಗೆ ಯತ್ನಾಳ್ ಖಡಕ್ ಆನ್ಸರ್: ಉತ್ತರ ಪತ್ರಿಕೆಯಲ್ಲೇನಿದೆ?

ನೆರೆ ಪರಿಹಾರ ವಿಳಂಬ ನೀತಿ ಕುರಿತಂತೆ ಸ್ವಪಕ್ಷದ ವಿರುದ್ಧವೇ ಟೀಕೆ ಮಾಡಿದ್ದ ಹಿನ್ನಲೆಯಲ್ಲಿ ವಿಜಯಪುರ ನಗರ ಕ್ಷೇತ್ರದ ಶಾಸಕ, ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ನೀಡಲಾಗಿದ್ದ ಶೋಕಾಸ್ ನೋಟಿಸ್ ನೋಟಿಸ್‌ಗೆ ಕೊನೆಗೂ ಉತ್ತರಿಸಿದ್ದಾರೆ.

First Published Oct 19, 2019, 4:00 PM IST | Last Updated Oct 19, 2019, 4:00 PM IST

ವಿಜಯಪುರ, (ಅ.19): ನೆರೆ ಪರಿಹಾರ ವಿಳಂಬ ನೀತಿ ಕುರಿತಂತೆ ಸ್ವಪಕ್ಷದ ವಿರುದ್ಧವೇ ಟೀಕೆ ಮಾಡಿದ್ದ ಹಿನ್ನಲೆಯಲ್ಲಿ ವಿಜಯಪುರ ನಗರ ಕ್ಷೇತ್ರದ ಶಾಸಕ, ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ನೀಡಲಾಗಿದ್ದ ಶೋಕಾಸ್ ನೋಟಿಸ್ ನೋಟಿಸ್‌ಗೆ ಕೊನೆಗೂ ಉತ್ತರಿಸಿದ್ದಾರೆ.

ನೆರೆ ಪರಿಹಾರ ಬಿಡುಗಡೆ ಮಾಡಿಸಿ ಎಂದಿದ್ದಕ್ಕೆ ಯತ್ನಾಳ್​ಗೆ ಸಂಕಷ್ಟ

ಉತ್ತರ ಕರ್ನಾಟಕ ನೆರೆ ಪರಿಹಾರ ವಿಳಂಬಕ್ಕೆ ರಾಜ್ಯದ ಸ್ವಪಕ್ಷದ ಸಂಸದರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಇದ್ರಿಂದ ಯತ್ನಾಳ್ ಅವರಿಗೆ ಕೇಂದ್ರ ಬಿಜೆಪಿ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ಜಾರಿ ಮಾಡಿ 10 ದಿನದೊಳಗೆ ಉತ್ತರಿಸುವಂತೆ ಹೇಳಿತ್ತು.

ನೋಟಿಸ್ ಗೆ ಯತ್ನಾಳ್ ಡೋಂಟ್ ಕೇರ್: ಕನ್ನಡಿಗರಿಗಾಗಿ ಧ್ವನಿ ಎತ್ತುತ್ತೇನೆ ಎಂದ ಬಹದ್ದೂರ್ ಗಂಡು

ಅದಕ್ಕೆ ಇದೀಗ ಯತ್ನಾಳ್, ಇ-ಮೇಲ್ ಮೂಲಕ ಉತ್ತರ ಕಳುಹಿಸಿದ್ದು, ಹಲವು ಮಹತ್ವದ ವಿಚಾರಗಳನ್ನು ಉಲ್ಲೇಖಿಸಿದ್ದಾರೆ. ಹಾಗಾದರೆ ಬಸನಗೌಡ ಪಾಟೀಲ್ ಕೊಟ್ಟ ಉತ್ತರದಲ್ಲೇನಿದ? ವಿಡಿಯೋನಲ್ಲಿ ನೋಡಿ.